ಮನೆಯಲ್ಲಿ ರಾತ್ರಿ ಕಾಣಿಸಿಕೊಂಡ ಬೆಂಕಿ.. ಉಸಿರುಗಟ್ಟಿ ಮಗು ಸೇರಿ ಒಂದೇ ಕುಟುಂಬದ ನಾಲ್ವರು ದುರ್ಮರಣ

author-image
Bheemappa
Updated On
ಮನೆಯಲ್ಲಿ ರಾತ್ರಿ ಕಾಣಿಸಿಕೊಂಡ ಬೆಂಕಿ.. ಉಸಿರುಗಟ್ಟಿ ಮಗು ಸೇರಿ ಒಂದೇ ಕುಟುಂಬದ ನಾಲ್ವರು ದುರ್ಮರಣ
Advertisment
  • ನೆಲ ಮಹಡಿಯಲ್ಲಿ ಮಲಗಿದ್ದ ಅಜ್ಜಿ ಪ್ರಾಣಾಪಾಯದಿಂದ ಪಾರು
  • ಬೆಂಕಿ ಹೊತ್ತಿಕೊಂಡ ವೇಳೆ ಹೊರ ಬರಲಾಗದೆ ನಾಲ್ವರು ಸಾವು
  • ರಾತ್ರಿ ಮೂರುವರೆ ಸುಮಾರಿಗೆ ಮನೆಯಲ್ಲಿ ಕಾಣಿಸಿಕೊಂಡ ಬೆಂಕಿ

ಗಾಂಧಿನಗರ: ರಾತ್ರಿ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಉಸಿರುಗಟ್ಟಿ ಒಂದು ಮಗು ಸೇರಿ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಗುಜರಾತ್​ನ ದ್ವಾರಕಾ ಜಿಲ್ಲೆಯ ಆದಿತ್ಯ ರಸ್ತೆಯಲ್ಲಿ  ನಡೆದಿದೆ.

ದ್ವಾರಕಾ ನಗರದ ಆದಿತ್ಯ ರಸ್ತೆಯಲ್ಲಿನ ನಿವಾಸಿಗಳಾದ ಪವನ್ ಉಪಾಧ್ಯಾಯ (39), ಅವರ ಪತ್ನಿ ತಿಥಿ (29), ಮಗಳು ಧ್ಯಾನ ಮತ್ತು ತಾಯಿ ಭವಾನಿಬೆನ್ (69) ಮೃತಪಟ್ಟವರು. ಕುಟುಂಬದ ಐವರು ಮನೆಯಲ್ಲಿ ಮಲಗಿದ್ದ ವೇಳೆ ಮೊದಲ ಮಹಡಿಯಲ್ಲಿ ಬೆಳಗಿನ ಜಾವ 3.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಆದರೆ ಈ ವೇಳೆ ಕರೆಂಟ್ ಹೋಗಿದ್ದರಿಂದ ಕತ್ತಲಿನಲ್ಲಿ ಹೇಗೆ ಬರುವುದು ಎಂದು ಅವರಿಗೆ ತೋಚಿಲ್ಲ. ಹೀಗಾಗಿ ಉಸಿರುಗಟ್ಟಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

publive-image

ಇದನ್ನೂ ಓದಿ: Video- 10ನೇ ವರ್ಷದ ಬರ್ತ್​​ಡೇ ಕೇಕ್ ಕಟ್ ಮಾಡಿದ್ದ ಬಾಲಕಿ, ಅದೇ ಕೇಕ್​ ತಿಂದ ನಂತರ ಸಾವು.. ಸಹೋದರಿ ಗಂಭೀರ

ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಕುಟುಂಬಸ್ಥರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಅತಿಯಾದ ಬಿಸಿಯಿಂದ ಏರ್​ಕಂಡಿಷನ್​ ಸ್ಫೋಟಗೊಂಡು ಈ ಘಟನೆ ಸಂಭವಿಸಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಆದರೆ ಮನೆಯ ನೆಲ ಅಂತಸ್ತಿನಲ್ಲಿ ಮಲಗಿದ್ದ ಆ ವ್ಯಕ್ತಿಯ ಅಜ್ಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಈ ಬಗ್ಗೆ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment