/newsfirstlive-kannada/media/post_attachments/wp-content/uploads/2024/03/chiti.jpg)
ಬೆಂಗಳೂರು: ಯುಗಾದಿ ಹಬ್ಬದ ಹೊಸತಡುಕಿಗೆ ಮಟನ್ ಚೀಟಿ ಹೆಸರಲ್ಲಿ ಸಾವಿರಾರು ಜನರಿಗೆ ಕೋಟ್ಯಾಂತರ ರೂಪಾಯಿ ಮೋಸ ಮಾಡಿದ ಆರೋಪ ಕೇಳಿ ಬಂದಿತ್ತು. ಬ್ಯಾಟರಾಯನಪುರ ಪೊಲೀಸರು ಮಟನ್ ಚೀಟಿ ನಡೆಸ್ತಿದ್ದ ಪುಟ್ಟಸ್ವಾಮಿಗೌಡ ಅವರನ್ನು ಕೊನೆಗೂ ವಶಕ್ಕೆ ಪಡೆದಿದ್ದಾರೆ.
ಆರೋಪಿ ಪುಟ್ಟಸ್ವಾಮಿಗೌಡ ಅವರು ಗಿರಿನಗರ ಸುತ್ತಮುತ್ತಲಿನ ಏರಿಯಾದ ಐದು ಸಾವಿರಕ್ಕೂ ಹೆಚ್ಚು ಜನರ ಬಳಿ ಮಟನ್ ಚೀಟಿ ಹಾಕಿಸಿಕೊಂಡಿದ್ದರು. ತಿಂಗಳಿಗೆ 400 ರೂಪಾಯಿ ಅಂತೆ 12 ತಿಂಗಳಿನಿಂದ ತಲಾ 4800 ರೂಪಾಯಿ. ಹೀಗೆ ಸುಮಾರು 5000 ಜನರಿಂದ ವರ್ಷ ಪೂರ್ತಿ 4800 ರೂಪಾಯಿ ಚೀಟಿ ಹಣ ಕಲೆಕ್ಟ್ ಮಾಡಿದ್ದು ಬರೋಬ್ಬರಿ 2 ಕೋಟಿ 40 ಲಕ್ಷ ರೂಪಾಯಿ. ಕೋಟ್ಯಾಂತರ ರೂಪಾಯಿ ದುಡ್ಡು ಸಂಗ್ರಹಿಸಿದ್ದ ಪುಟ್ಟಸ್ವಾಮಿಗೌಡ ಯುಗಾದಿ ಹಬ್ಬ ಹತ್ತಿರ ಬರುತ್ತಿದ್ದಂತೆ ಯಾರ ಕೈಗೂ ಸಿಗದೇ ಫೋನ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಆಗಿದ್ದರು.
/newsfirstlive-kannada/media/post_attachments/wp-content/uploads/2024/03/YUGADI.jpg)
ಪುಟ್ಟಸ್ವಾಮಿಗೌಡ ಕಳೆದ ಎರಡು ಮೂರು ವರ್ಷಗಳಿಂದ ಯುಗಾದಿ ಮಟನ್ ಚೀಟಿ ನಡೆಸ್ತಿದ್ದರು. ಆದ್ರೆ ಈ ಬಾರಿ ರಾತ್ರೋರಾತ್ರಿ ಗಿರಿನಗರದ ಮನೆ ಖಾಲಿ ಮಾಡಿಕೊಂಡು ಎಸ್ಕೇಪ್ ಆಗಿದ್ದ ಅನುಮಾನಕ್ಕೆ ಕಾರಣವಾಗಿತ್ತು. ಸದ್ಯ ಪುಟ್ಟಸ್ವಾಮಿಗೌಡನನ್ನ ಬ್ಯಾಟರಾಯನಪುರ ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಯುಗಾದಿ ಹೊಸತಡಕುಗಾಗಿ ಚೀಟಿ ಹಾಕಿದ್ದವ್ರಿಗೆ ಮಕ್ಮಲ್​ ಟೋಪಿ.. ಮಾಂಸದ ಆಸೆಗೆ ಕೋಟಿ, ಕೋಟಿ ಕಳ್ಕೊಂಡ ಜನ!
ಮಟನ್ ಚೀಟಿ ನಡೆಸುತ್ತಿದ್ದ ಪುಟ್ಟಸ್ವಾಮಿಗೌಡರ ವಂಚನೆ ಮಾಡಿರೋದು ಸಖತ್ ಇಂಟ್ರೆಸ್ಟಿಂಗ್ ಸ್ಟೋರಿ. ಅಸಲಿಗೆ ಪುಟ್ಟಸ್ವಾಮಿಗೌಡ ವಂಚಿಸಿರೋದು ವಂಚಿಸಿರೋದು ಒಂದು ಚೈನ್ ಲಿಂಕ್ ರೀತಿ. ವಿದ್ಯಾಪೀಠ, ಚನ್ನಮ್ಮನಕೆರೆ, ದೀಪಾಂಜಲಿನಗರ, ಆರ್.ಆರ್. ನಗರ ಬ್ಯಾಟರಾಯನಪುರ ಎನ್.ಆರ್.ಕಾಲೋನಿ ಜನರಿಗೆ ಇಪ್ಪತೈದು ಚೀಟಿಗೆ ಒಂದು ಚೀಟಿ ಫ್ರೀ ಅಂತೇಳಿದ್ದನೆ. ಪುಟ್ಟಸ್ವಾಮಿಗೌಡ ಮಾತನ್ನ ನಂಬಿ ಹಲವರು ತಲಾ 25, 50, 100 ಮಟನ್ ಚೀಟಿಗಳನ್ನು ಹಾಕಿದ್ದಾರೆ.
/newsfirstlive-kannada/media/post_attachments/wp-content/uploads/2024/04/Yugadi-Cheeti-Mosa.jpg)
ಪುಟ್ಟಸ್ವಾಮಿಗೌಡನ ಮಟನ್ ಚೀಟಿಯಲ್ಲಿ ಬಂಪರ್ ಆಫರ್‌ಗಳು ಇದ್ದವು. ಒಂದು ಮಟನ್ ಚೀಟಿ ಹಾಕಿದವರಿಗೆ 25 ಕೆ.ಜಿ ಅಕ್ಕಿ, 10 ಲೀಟರ್ ಎಣ್ಣೆ, 3 ಕೆಜಿ ಮಟನ್ ಸೇರಿ ಮೂವತ್ತು ಪದಾರ್ಥ ಕೊಡೋದಾಗಿ ಭರವಸೆ ನೀಡಿದ್ದಾರೆ. 2022-23ನೇ ವರ್ಷ ತಿಂಗಳಿಗೆ 350 ರೂಪಾಯಿ ಕಲೆಕ್ಟ್ ಮಾಡಿ ಇದೇ ರೀತಿಯ ಹಲವು ಪದಾರ್ಥ ನೀಡಿದ್ದರು. ಈ ಬಾರಿ 400 ರೂ ಮಾಡಿ 5000 ಅಧಿಕ ಜನರಿಗೆ ವಂಚಿಸಿದ್ದಾರೆ ಎನ್ನಲಾಗಿದೆ.
2 ಕೋಟಿ 40 ಲಕ್ಷ ರೂಪಾಯಿ ಸಂಗ್ರಹಿಸಿದ್ದ ಪುಟ್ಟಸ್ವಾಮಿಗೌಡ ಸದ್ಯ ಪೊಲೀಸರ ವಶದಲ್ಲಿದ್ದಾರೆ. ಮಟನ್ ಚೀಟಿ ಹಣ ಏನಾಯ್ತು? ಯುಗಾದಿ ಹಬ್ಬಕ್ಕೆ ಚೀಟಿ ಹಾಕಿದವರಿಗೆ ಮಟನ್ ಸಿಗುತ್ತಾ ಅನ್ನೋದು ಪೊಲೀಸರ ತನಿಖೆಯ ಬಳಿಕ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us