newsfirstkannada.com

6 ತಿಂಗಳ ಆಹಾರ, ಡೀಸೆಲ್ ತಂದ ರೈತರು; ದೆಹಲಿ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ; ಸರ್ಕಾರಕ್ಕೆ ಸಂಕಷ್ಟ!

Share :

Published February 13, 2024 at 2:18pm

Update February 13, 2024 at 2:36pm

  ರೈತರನ್ನ ತಡೆಯಲು ಮುಳ್ಳಿನ ಕೋಟೆಯನ್ನೇ ನಿರ್ಮಿಸಿದ ಪೊಲೀಸರು

  ದೆಹಲಿಗೆ ಪಂಜಾಬ್, ಹರಿಯಾಣ, ಕರ್ನಾಟಕದಿಂದ ರೈತರ ದಂಡು

  2020ರಲ್ಲಿ ರೈತರಿಂದ ನಿರಂತರ13 ತಿಂಗಳ ಕಾಲ ಧರಣಿ ನಡೆದಿತ್ತು

ನವದೆಹಲಿ: ತಮ್ಮ ಬೇಡಿಕೆ ಈಡೇರಿಸಲು ರಾಷ್ಟ್ರ ರಾಜಧಾನಿಗೆ ಸಾವಿರಾರು ರೈತರ ಹಸಿರು ಸೇನೆ ಲಗ್ಗೆ ಇಡುತ್ತಿದೆ. ಪಂಜಾಬ್, ಹರಿಯಾಣ, ಕರ್ನಾಟಕ, ಕೇರಳದಿಂದ ರೈತರ ದಂಡು ದೆಹಲಿಯ ಗಡಿಭಾಗವನ್ನು ತಲುಪಿದೆ. ರಸ್ತೆಯುದ್ದಕ್ಕೆ ಸಾಲು, ಸಾಲು ಟ್ರ್ಯಾಕ್ಟರ್‌ಗಳು ದೆಹಲಿಯತ್ತ ಧಾವಿಸುತ್ತಾ ಇದ್ರೆ ಪೊಲೀಸರು ರೈತರನ್ನ ತಡೆಯಲು ಮುಳ್ಳಿನ ಕೋಟೆಯನ್ನೇ ನಿರ್ಮಿಸಿದ್ದಾರೆ.

ದೆಹಲಿಯ ಗಡಿಗಳಲ್ಲಿ ರೈತರು ಪ್ರವೇಶ ಮಾಡದಂತೆ ರಸ್ತೆಗೆ ಮುಳ್ಳುತಂತಿಯ ಬೇಲಿ, ರಸ್ತೆಗೆ ಕಾಂಕ್ರೀಟ್ ಗೋಡೆ ಕಟ್ಟಿ ಬಂದ್ ಮಾಡಲಾಗಿದೆ. ಸಾವಿರಾರು ರೈತರು ಜಮಾಯಿಸುತ್ತಾ ಇರೋದ್ರಿಂದ ದೆಹಲಿ-ನೋಯ್ಡಾ ಗಡಿಯ ಡಿಎನ್‌ಡಿ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಆಗಿದೆ. ರೈತರು ದೆಹಲಿ ಪ್ರವೇಶಿಸದಂತೆ ರಸ್ತೆಗಳನ್ನು ಬಂದ್ ಮಾಡಿರುವ ಕಾರಣ ಒಂದು ಗಂಟೆಯಾದ್ರೂ ಒಂದು ಕಿಲೋ ಮೀಟರ್ ಕ್ರಮಿಸೋದು ಕಷ್ಟವಾಗಿದೆ.

ಇದನ್ನೂ ಓದಿ: ದೆಹಲಿಯಲ್ಲಿ ರೈತರು ಯಾಕೆ ಪ್ರತಿಭಟನೆ ಮಾಡ್ತಿದ್ದಾರೆ? ಅವರ 12 ಬೇಡಿಕೆಗಳು ಇಲ್ಲಿವೆ

ಪ್ರತಿಭಟನೆ ಮಾಡೋದು ಒಂದು ಸಾಹಸ ಆದ್ರೆ, ಅದನ್ನ ತಡೆಯೋದು ಪೊಲೀಸರಿಗೆ ಮತ್ತೊಂದು ತರಹದ ಸಾಹಸವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಅನ್ನದಾತರ ಪ್ರತಿಭಟನಾ ಕಹಳೆ ಮೊಳಗಿದೆ. ಬೆಂಬಲ ಬೆಲೆ, ವಿವಿಧ ಬೇಡಿಕೆಗಳ ಇಡೇರಿಕೆಗೆ ಆಗ್ರಹಿಸಿ ಅನ್ನದಾತರು ಫೀಲ್ಡ್​ಗಿಳಿದಿದ್ದಾರೆ. ರೈತರು ದೆಹಲಿಗೆ ಟ್ರ್ಯಾಕ್ಟರ್​ ಮೂಲಕ ಎಂಟ್ರಿಕೊಡ್ತಿರೋದನ್ನ ಕಂಡು, ಹರಿಯಾಣದ ಅಂಬಾಲದಲ್ಲಿರುವ ಶಂಭುಗಡಿಯಲ್ಲಿ ರೈತರನ್ನ ತಡೆಯಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಇದರಿಂದ ದೆಹಲಿ, ಹರಿಯಾಣ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

6 ತಿಂಗಳ ಆಹಾರ, ಡೀಸೆಲ್ ತಂದ ರೈತರು! 
ದೆಹಲಿಗೆ ಆಗಮಿಸುತ್ತಿರುವ ಸಾವಿರಾರು ರೈತರ ಈ ಹೋರಾಟ ಒಂದು, ಎರಡು ದಿನಕ್ಕೆ ಮುಗಿಯೋ ಲಕ್ಷಣ ಕಾಣುತ್ತಿಲ್ಲ. ಟ್ರ್ಯಾಕ್ಟರ್‌ಗಳ ದಿಲ್ಲಿಗೆ ಬರುತ್ತಿರೋ ಪಂಜಾಬ್ ರೈತರು 6 ತಿಂಗಳಿಗೆ ಆಗುವಷ್ಟು ಆಹಾರ ಸಾಮಾಗ್ರಿ, ಡೀಸೆಲ್‌ಗಳನ್ನು ತಮ್ಮ ಟ್ರ್ಯಾಲಿಗಳನ್ನು ತರುತ್ತಿದ್ದಾರೆ. ಎಷ್ಟೇ ದಿನ ಹೋರಾಟ ನಡೆದ್ರೂ ಅದಕ್ಕೆ ರೈತರು ಸಿದ್ಧರಾಗಿಯೇ ತಮ್ಮ ಮನೆಗಳನ್ನು ಬಿಟ್ಟು ಹೊರಟಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪ್ರತಿಭಟನಾ ನಿರತ ರೈತರು, ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಕಳೆದ 2020ರಲ್ಲಿ ಇದೇ ರೀತಿ ಹೋರಾಟ ನಡೆಸಿದ್ದ ಸಾವಿರಾರು ರೈತರು 13 ತಿಂಗಳ ಕಾಲ ಧರಣಿ ನಡೆಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

6 ತಿಂಗಳ ಆಹಾರ, ಡೀಸೆಲ್ ತಂದ ರೈತರು; ದೆಹಲಿ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ; ಸರ್ಕಾರಕ್ಕೆ ಸಂಕಷ್ಟ!

https://newsfirstlive.com/wp-content/uploads/2024/02/Delhi-Farmers-Protest.jpg

Load More