newsfirstkannada.com

ಮೊದಲ ಮಳೆಗೆ ಬೆಂಗಳೂರಲ್ಲಿ ಹಲವು ಅವಾಂತರ.. ಇನ್ನೂ 3 ದಿನ ಎಲ್ಲೆಲ್ಲಿ ವರುಣನ ಆರ್ಭಟ?

Share :

Published May 3, 2024 at 9:08pm

    ಇಷ್ಟು ದಿನ ಮಳೆ ಬಂದ್ರೆ ಸಾಕು ಅಂತ ಕಾಯ್ತಿದ್ದ ಬೆಂಗಳೂರಿಗರು

    ಸಿಲಿಕಾನ್‌ ಸಿಟಿಯಲ್ಲಿ ಗುಡುಗು, ಸಿಡಿಲಿನ ಜೊತೆ ಮಳೆಯ ದರ್ಶನ

    ರಸ್ತೆಯಲ್ಲಿ ಚರಂಡಿ ನೀರು, ಧರೆಗುರುಳಿದ ಬೃಹತ್ ಮರ, ಪವರ್ ಕಟ್

ಬಿಸಿಲಿಗೆ ಬೆಂದು ಹೋಗಿದ್ದ ಸಿಲಿಕಾನ್ ಸಿಟಿ ಬೆಂಗಳೂರು ಇವತ್ತು ತುಸು ತಣ್ಣಗಾಗಿದೆ. ಇಷ್ಟು ದಿನ ಬಿಸಿಗಾಳಿಯ ಹೊಡೆತಕ್ಕೆ ಸುಸ್ತಾಗಿದ್ದ ಬೆಂಗಳೂರಿಗರಿಗೆ ಇವತ್ತು ತಂಗಾಳಿ, ಬಿರುಗಾಳಿ, ಗುಡುಗು, ಸಿಡಿಲಿನ ದರ್ಶನವಾಗಿದೆ. ಬೆಂಗಳೂರು ನಗರದ ಹಲವೆಡೆ ಇಂದು ಮಧ್ಯಾಹ್ನವೇ ಭರ್ಜರಿ ಮಳೆ ಸುರಿದಿದೆ. ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಇಂದು ರಾತ್ರಿ ಕೂಡ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ.

ಇಷ್ಟು ದಿನ ಮಳೆ ಬಂದ್ರೆ ಸಾಕು ಅಂತ ಕಾಯ್ತಿದ್ದ ಬೆಂಗಳೂರಲ್ಲಿ ಮೊದಲೆರಡು ದಿನವೇ ವರುಣ ಅಬ್ಬರಿಸಿದ್ದಾನೆ. ಗುಡುಗು, ಸಿಡಿಲಿನ ಜೊತೆ ಮಳೆರಾಯನ ದರ್ಶನವಾಗಿದ್ದು, ರಸ್ತೆಗಳಲ್ಲಿ ನೀರು ತುಂಬಿ ಹರಿದಿದೆ. ಮೊದಲ ಮಳೆಯಲ್ಲೇ ಚರಂಡಿ ನೀರೆಲ್ಲಾ ರಸ್ತೆಗೆ ಹರಿದಿದ್ದು ಮುಂದೆ ಧಾರಾಕಾರ ಮಳೆ ಸುರಿದ್ರೆ ಸಿಲಿಕಾನ್ ಸಿಟಿ ಕಥೆ ಏನು ಎಂಬ ಪ್ರಶ್ನೆ ಎದುರಾಗಿದೆ.

ಐಟಿಐ ಲೇಔಟ್‌ನಲ್ಲಿ ಮಳೆ ಬರ್ತಿದ್ದಂತೆ ಟ್ರಾನ್ಸ್ ಫಾರ್ಮರ್ ಬ್ಲಾಸ್ಟ್ ಆಗಿದೆ. ಟ್ರಾನ್ಸ್‌ಫಾರ್ಮರ್‌ಗೆ ಮರಗಳ ಎಲೆ ತಾಗಿ ಬೆಂಕಿ ಹೊತ್ತಿಕೊಂಡಿದೆ. ಐಟಿಐ ಲೇಔಟ್‌ನಲ್ಲಿ ಕೆಲ ಕಾಲ ಪವರ್ ಕಟ್ ಆಗಿದ್ದು, ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಬೀಸಿದ ಬಿರುಗಾಳಿಗೆ ಬೃಹತ್‌ ಮರ ಹಾಗೂ ರೆಂಬೆ, ಕೊಂಬೆಗಳು ಧರೆಗುಳಿದಿವೆ. ಮರಗಳು ಧರೆಗುರುಳಿದ ಪರಿಣಾಮ ಹಲವೆಡೆ ವಾಹನ ಸವಾರರು ಪರದಾಡುವಂತಾಗಿದೆ. ಕೆಲ ರಸ್ತೆಗಳಲ್ಲಂತೂ ಚರಂಡಿ ನೀರು ಹರಿದಿದ್ದರಿಂದ ಟ್ರಾಫಿಕ್ ಜಾಮ್ ಎದುರಾಗಿತ್ತು. ಬೆಂಗಳೂರಲ್ಲಿ ಸಣ್ಣ ಮಳೆಗೆ ಇಂತಹ ಪರಿಸ್ಥಿತಿ ಎದುರಾದ್ರೆ ಮಳೆಗಾಲದ ಹೊತ್ತಿಗೆ ಬಿಬಿಎಂಪಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲೇ ಬೇಕಿದೆ.

ಇದನ್ನೂ ಓದಿ: ಮಂಡ್ಯ, ಮೈಸೂರಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ; ವರುಣನ ಅಬ್ಬರಕ್ಕೆ ಜನ ಶಾಕ್; ಎಲ್ಲೆಲ್ಲಿ ಏನಾಯ್ತು? 

ಬೆಂಗಳೂರು ಗ್ರಾಮಾಂತರ ಭಾಗವಾದ ಹೊಸಕೋಟೆ ತಾಲೂಕಿನ ಗಣಗಲು ಗ್ರಾಮದಲ್ಲಿ ಸಿಡಿಲು ಬಡಿದು ಓರ್ವ ಮಹಿಳೆ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇಂದು ಮಧ್ಯಾಹ್ನ ಧಿಡೀರ್ ಶುರುವಾಗಿದ್ದ ಮಳೆ‌ಯಿಂದ ತೋಟದ ಬಳಿ ಬೇವಿನ ಮರದಡಿ ಮೇಕೆಗಳ ಜೊತೆ ನಿಂತಿದ್ದ ಮಹಿಳೆ ಸಾವನ್ನಪ್ಪಿದ್ದಾರೆ. ಮಹಿಳೆ ಜೊತೆ ಇಪ್ಪತ್ತಕ್ಕೂ ಹೆಚ್ಚು ಮೇಕೆ ಸಿಡಿಲಿಗೆ ಬಲಿಯಾಗಿವೆ. ಮುಂದಿನ 3 ದಿನಗಳವರೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬಿಸಿಲಿನ ಜೊತೆಗೆ ಹಗುರು ಮಳೆಯಾಗುವ ಮುನ್ಸೂಚನೆ ಇದೆ.

ಮೇ 6 ಹಾಗೂ 7ರಂದು ಬೆಂಗಳೂರಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ. ಇವತ್ತು ಬೆಂಗಳೂರು ಅಷ್ಟೇ ಅಲ್ಲ ರಾಜ್ಯದ ದಕ್ಷಿಣ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣವಾಗಿ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆಯ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.

ಮೇ 3 ರಿಂದ ಮೇ 7ರವರೆಗೆ ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಬಿಸಿಗಾಳಿ ಅಲೆ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಬಿಸಿಗಾಳಿ ಅಲೆ ಜೊತೆಗೆ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಮುನ್ಸೂಚನೆ ಇದೆ.

ದಕ್ಷಿಣ ಕನ್ನಡ,‌ ಉಡುಪಿ, ಚಾಮರಾಜನಗರ, ಮೈಸೂರು, ಕೊಡಗು, ಮಂಡ್ಯದಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ ಹಗುರ ಮಳೆಯಾಗಲಿದೆ. ಬೀದರ್, ಕಲಬುರಗಿ, ಯಾದಗಿರಿ, ಬಳ್ಳಾರಿ, ರಾಯಚೂರು ಸೇರಿ ಹಲವು ಜಿಲ್ಲೆಗಳಲ್ಲಿ ಉಷ್ಣ ಅಲೆ ಮುಂದುವರಿಕೆ ಆಗಲಿದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೊದಲ ಮಳೆಗೆ ಬೆಂಗಳೂರಲ್ಲಿ ಹಲವು ಅವಾಂತರ.. ಇನ್ನೂ 3 ದಿನ ಎಲ್ಲೆಲ್ಲಿ ವರುಣನ ಆರ್ಭಟ?

https://newsfirstlive.com/wp-content/uploads/2024/05/Bangalore-Rains-3.jpg

Load More