newsfirstkannada.com

ಬಾಬುಗೆ ಬಂಪರ್‌.. ನಿತೀಶ್ ಕಿಂಗ್‌ ಮೇಕರ್‌; ಮೋದಿಗೆ ಆಘಾತ ಎದುರಾಗ್ತಿದ್ದಂತೆ ಏನೆಲ್ಲಾ ಆಯ್ತು?

Share :

Published June 4, 2024 at 7:42pm

Update June 4, 2024 at 7:45pm

  ಇಂಡಿಯಾ ಕೂಟದಿಂದಲೂ ನಾಯ್ಡು, ನಿತೀಶ್‌ ಸಂಪರ್ಕಕ್ಕೆ ಯತ್ನ!

  ಕೇಂದ್ರದಲ್ಲಿ ಮತ್ತೊಮ್ಮೆ ಕಿಚಡಿ ಸರ್ಕಾರ ರಚನೆ ಆಗೋದು ಪಕ್ಕಾ!

  ದಶಕದ ಬಳಿಕ ಹಿಂದಿ ನಾಡಿನ ಮತದಾರನ ಹೃದಯ ಕದ್ದ ಕಾಂಗ್ರೆಸ್

ದೆಹಲಿ ಗದ್ದುಗೆ ಬದಲಾವಣೆಗಾಗಿ ಮಗ್ಗಲು ಬದಲಿಸ್ತಿದ್ಯಾ? ದಶಕದ ಬಳಿಕ ಕಾಂಗ್ರೆಸ್​ಗೆ ಶುಕ್ರದೆಸೆ. ಸತತ ಸೋಲುಗಳನ್ನೇ ಹೊದ್ದು ಮಂಕಾಗಿದ್ದ ಕಾಂಗ್ರೆಸ್​ಗೆ ಈಗ ಮಂಜಿನ ಹೊಳಪು. ಇತ್ತ ಮೋದಿ ಕನಸು ನುಚ್ಚುನೂರಾಗಿದ್ದು, ಕೇಂದ್ರದಲ್ಲಿ ಮತ್ತೊಮ್ಮೆ ಮೈತ್ರಿಯುಗ ಆರಂಭವಾಗಿದೆ. ಆ ಇಬ್ಬರು ನಾಯಕರಿಗೆ ಸದ್ಯ ಎಲ್ಲಿಲ್ಲದ ಬೇಡಿಕೆ. ಆ ಇಬ್ಬರೇ ದೆಹಲಿಯಲ್ಲಿ ಯಾರ ಆಡಳಿತ ಅನ್ನೋದನ್ನ ನಿರ್ಧರಿಸಲಿದ್ದಾರೆ.

ಇದನ್ನೂ ಓದಿ: 5, 10 ಲಕ್ಷ ಅಲ್ಲ.. ದೇಶದಲ್ಲೇ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗಳು; ಹೊಸ ದಾಖಲೆ!

ಹಾದಿ ಬದಲಾಗ್ತಿದೆ. ದಿಕ್ಕುಗಳು ಪಲ್ಲಟಗೊಳ್ತಿವೆ. ಬದಲಾಗ್ತಿರುವ ಗಾಳಿಯನ್ನ ಗಮನಿಸದ ಮೋದಿ, ಸದ್ಯ ಅರ್ಧದಾರಿಯಲ್ಲಿ ಎಡವಿದ್ದಾರೆ. ಮತದಾರ ಕೊಟ್ಟ ಚಂಚಲ ತೀರ್ಪು ಬಿಜೆಪಿಯನ್ನೇ ಚಿಂತೆಗೆ ದಬ್ಬಿದೆ. ಬಿಜೆಪಿಯನ್ನ 250ರ ಆಸುಪಾಸಿನಲ್ಲಿ ಕಟ್ಟಿ ಹಾಕಿದ ಇಂಡಿಯಾ ಕೂಟ, ಚದುರಂಗದ ಚೆಕ್​​ಮೇಟ್​​ ಇಟ್ಟಿದೆ. ಎನ್​ಡಿಎ ಮಿತ್ರ ಪಡೆ 300 ಗಡಿ ದಾಟದೇ ನಿತ್ರಾಣವಾಗಿದೆ. ಬಿಜೆಪಿ ನಾಗಾಲೋಟಕ್ಕೆ ಬ್ರೇಕ್​​ ಬೀಳ್ತಿದ್ದಂತೆ ಪ್ರಾದೇಶಿಕ ಪಕ್ಷಗಳ ಸಂಕ್ರಮಣ ಕಾಲ ಉದಯವಾಗಿದೆ. ದಶಕದ ಬಳಿಕ ಹಿಂದಿ ನಾಡಿನ ಮತದಾರನ ಹೃದಯ ಕದ್ದ ಕಾಂಗ್ರೆಸ್​​ ಚೋರ, ಬಿಜೆಪಿಯ ಬೆನ್ನು ಮೂಳೆ ಮುರಿದಿದೆ.

ಕಾಂಗ್ರೆಸ್​​ ಮತಕ್ಕೆ ಹಾಕಿದ ಈ ಕನ್ನವೇ ಬಿಜೆಪಿಯ ಚಾರ್​​ ಸೌ ಪಾರ್​​ ಕನ್ನಡಿಯನ್ನ ಚೂರು ಮಾಡಿದೆ. ಕಳೆದ ಬಾರಿ 303 ಸ್ಥಾನ ಗೆದ್ದು ಡೆಲ್ಲಿ ಗದ್ದುಗೆಯಲ್ಲಿ ವಿರಾಜಮಾನನಾಗಿದ್ದ ನಮೋ ಟೀಂ, ಈ ಸಲ 65 ರಿಂದ 70 ಸ್ಥಾನಗಳನ್ನ ಕಳೆದುಕೊಂಡು ಮುಗ್ಗರಿಸಿದೆ. ಶತಕದ ಹೊಸ್ತಿಲಲ್ಲಿ ನಿಂತ ಕಾಂಗ್ರೆಸ್​​, ಭರ್ಜರಿ ಗೃಹಪ್ರವೇಶ ಮಾಡಿದೆ. ಕಳೆದ ಸಲಕ್ಕಿಂತ 46-48 ಹೆಚ್ಚುವರಿ ಕ್ಷೇತ್ರಗಳನ್ನ ತನ್ನ ದಕ್ಕಿಸಿಕೊಂಡಿದೆ. ಬಿಜೆಪಿಯ ಶಕ್ತಿಕೇಂದ್ರಗಳಾದ ಪ್ರಭು ಶ್ರೀರಾಮ ಮತ್ತು ಶ್ರೀಕೃಷ್ಣನ ಜನ್ಮಭೂಮಿ ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನ ಅಖಿಲೇಶ್​​ ಸೈಕಲ್​​​ ಹಿಂದಿಕ್ಕಿದೆ. ಈ ಫಲಿತಾಂಶವೇ ದಿಕ್ಕು ಬದಲಿಸಿದ ಡೆಲ್ಲಿ ಗದ್ದುಗೆಯತ್ತ ಎಲ್ಲರೂ ದೃಷ್ಟಿನೆಡುವಂತೆ ಮಾಡಿದೆ.

ಈ ಆಟ. ಮಹತ್ವಾಕಾಂಕ್ಷಿ ಆಟ. ಬಿಜೆಪಿ ಏಕಾಂಗಿ ಅಧಿಕಾರಕ್ಕೇರೋದು ಇನ್ನೇನು ಕನಸಷ್ಟೇ. ಗದ್ದುಗೆ ಬೇಕಿದ್ರೆ ಆ ಇಬ್ಬರನ್ನ ಒಲಿಸಿಕೊಳ್ಳಲೇಬೇಕು. ಆಂಧ್ರಬಾಬುಗೆ ಈಗ ಡಬಲ್​​ ಶುಕ್ರದೆಸೆ. ಆಂಧ್ರ ಗೆದ್ದ ನಾಯ್ಡುಗೆ ಎಲ್ಲಿಲ್ಲ ಡಿಮ್ಯಾಂಡ್​​ ಕ್ರಿಯೇಟ್​​ ಆಗಿದೆ. ಸದ್ಯ ಈ ನಾಯ್ಡುಗಾರು ಇಲ್ಲದೇ ಕೇಂದ್ರದಲ್ಲಿ ಅಧಿಕಾರ ನಡೆಸೋದು ಇಂಪಾಸಿಬಲ್​​. ಇಂದು 16 ಕ್ಷೇತ್ರಗಳನ್ನ ಗೆದ್ದ ಟಿಡಿಪಿ, 1999ರ ಬಳಿಕ ಮತ್ತೊಮ್ಮೆ ದೇಶದಲ್ಲಿ ಕಿಂಗ್​​ಮೇಕರ್​​​ ರೂಲ್​​ ಪ್ಲೇ ಮಾಡಲಿದೆ. ಇತ್ತ, ದಶಕದಿಂದ ತನ್ನ ಸರದಿಗಾಗಿ ಕಾದು ಕಾದು ಸುಸ್ತಾದ ನಿತೀಶ್​​ ಕುಮಾರ್​ಗೂ ಅದೃಷ್ಟ ಅರಸಿ ಬಂದಂತೆ ಕಾಣಿಸ್ತಿದೆ. ನಿತೀಶ್​​ ಕುಮಾರ್​​ ನೇತೃತ್ವದ ಜೆಡಿಯು ಬಾಣ, 12 ಕ್ಷೇತ್ರಗಳನ್ನ ಶಿಕಾರಿ ಆಡಿದೆ. ಹೀಗಾಗಿ ದೇಶದ ಎರಡು ಕೂಟಗಳು ಈ ಇಬ್ಬರು ನಾಯಕರ ಹಿಂದೆ ಬಿದ್ದಿವೆ. ನಾಯ್ಡುಗೆ ನಿರಂತರ ಕರೆಗಳ ಸುರಿಮಳೆ ಆಗ್ತಿದೆ. ಬಿಜೆಪಿ ಜೊತೆಗೆ ಹೆಜ್ಜೆ ಹಾಕಿ ಎಲೆಕ್ಷನ್​​​ ಎದುರಿಸಿದ ಇಬ್ಬರೂ ನಾಯಕರು ಎತ್ತ ಹೋಗ್ತಾರೆ, ಅತ್ತ ಸರ್ಕಾರ ಅನ್ನೋದು ಕನ್ಫರ್ಮ್​​ ಆಗಿದೆ.

ಇದನ್ನೂ ಓದಿ: ತ್ರಿವಿಕ್ರಮನಿಗೆ ಮಣ್ಣು ಮುಕ್ಕಿಸಿದ ಕಂಗನಾ ರಣಾವತ್; ಬಾಲಿವುಡ್ ಸೆಲೆಬ್ರಿಟಿಗಳ ಲಕ್ ಬದಲಾಯ್ತು!

ಚಂದ್ರಬಾಬು ನಾಯ್ಡುಗೆ ಪ್ರಧಾನಿ ಮೋದಿ, ಅಮಿತ್‌ ಶಾ ಸೇರಿ ಪ್ರಮುಖ ನಾಯಕರು ಕರೆ ಮಾಡಿ ದೆಹಲಿಗೆ ಬರುವಂತೆ ಮನವಿ ಮಾಡಿದ್ದಾರೆ. ಎನ್​​​ಡಿಎ ಕೂಟದ ಸಂಚಾಲಕನ ಆಫರ್​​​ ಸಹ ನೀಡಲಾಗಿದೆ. ಮತ್ತೊಂದೆಡೆ ಇಂಡಿಯಾ ಕೂಟದಿಂದಲೂ ನಾಯ್ಡು ಹಾಗೂ ನಿತೀಶ್‌ ಸಂಪರ್ಕಕ್ಕೆ ಯತ್ನ ನಡೆದಿದೆ. ಶರದ್​​ ಪವಾರ್​ ಕಡೆಯಿಂದ ಒಂದು ಪ್ರಯತ್ನ ನಡೀತಿದ್ರೆ, ಕೆ.ಸಿ. ವೇಣುಗೋಪಾಲ್​​ ಸಹ ಸಂಪರ್ಕ ಕ್ರಾಂತಿಗಾಗಿ ಯತ್ನಿಸಿದ್ದಾರೆ. ನಿತೀಶ್​ಗೆ ಇಂಡಿಯಾ ಕೂಟ, ಉಪ ಪ್ರಧಾನಿ ಹುದ್ದೆ ಆಫರ್​​ನ್ನೇ ನೀಡಿಬಿಟ್ಟಿದೆ. ಇಲ್ಲಿ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವ ಭರವಸೆಯನ್ನ ನಾಯ್ಡುಗೆ ಕೊಡ್ಲಾಗಿದೆ. ಆದ್ರೆ ಉಭಯ ಪಕ್ಷಗಳೂ ಎನ್‌ಡಿಎ ಜೊತೆಗಿರೋದಾಗಿ ಹೇಳ್ಕೊಂಡಿವೆ. ಒಟ್ಟಾರೆ ಡೆಲ್ಲಿ ದರ್ಬಾರ್​​ಗಳಲ್ಲಿ ಪವರ್​​ ಪ್ಲೇ ಆಟ ರೋಚಕವಾಗಿ ಶುರುವಾಗಿದೆ. ಬಿಜೆಪಿಯ ಕ್ಷೇತ್ರಗಳ ಕುಸಿತ ಪ್ರಾದೇಶಿಕ ಪಕ್ಷಗಳಿಗೆ ಭಾರೀ ಬಾಡೂಟವನ್ನೇ ಕಲ್ಪಿಸಿದೆ. ದಶಕದ ಬಳಿಕ ಕೇಂದ್ರದಲ್ಲಿ ಮತ್ತೊಮ್ಮೆ ಕಿಚಡಿ ಸರ್ಕಾರ ರಚನೆ ಆಗೋದು ಪಕ್ಕಾ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಬುಗೆ ಬಂಪರ್‌.. ನಿತೀಶ್ ಕಿಂಗ್‌ ಮೇಕರ್‌; ಮೋದಿಗೆ ಆಘಾತ ಎದುರಾಗ್ತಿದ್ದಂತೆ ಏನೆಲ್ಲಾ ಆಯ್ತು?

https://newsfirstlive.com/wp-content/uploads/2024/06/loka-sabha.jpg

Load More