Advertisment

ಮಲಗಿದ್ದಲ್ಲೇ ನಾಲ್ವರ ಬರ್ಬರ ಹತ್ಯೆ ಪ್ರಕರಣ; ಶಂಕಿತ ಕೊಲೆ ಆರೋಪಿಗಳು ಇವರೇನಾ?

author-image
Ganesh
Updated On
ಮಲಗಿದ್ದಲ್ಲೇ ನಾಲ್ವರ ಬರ್ಬರ ಹತ್ಯೆ ಪ್ರಕರಣ; ಶಂಕಿತ ಕೊಲೆ ಆರೋಪಿಗಳು ಇವರೇನಾ?
Advertisment
  • ಏಪ್ರಿಲ್ 19, ರಾತ್ರಿ ನಾಲ್ವರ ಕೊಲೆಗೈದು ಪರಾರಿ ಆಗಿದ್ದಾರೆ
  • ಸಿಸಿಟಿವಿಯಲ್ಲಿ ಶಂಕಿತ ಆರೋಪಿಗಳ ದೃಶ್ಯ ಸೆರೆ ಆಗಿದೆ
  • ಗದಗದ ದಾಸರ ಓಣಿಯಲ್ಲಿನ ಮನೆಯಲ್ಲಿ ಹತ್ಯೆ ನಡೆದಿದೆ

ಗದಗ: ಏಪ್ರಿಲ್ 19ರ ಮಧ್ಯರಾತ್ರಿ ಗದಗ ನಗರದ ದಾಸರ ಓಣಿಯಲ್ಲಿನ ಮನೆಯಲ್ಲಿ ಮಲಗಿಕೊಂಡಿದ್ದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ್ ಬಾಕಳೆ (27), ಪರಶುರಾಮ (55), ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷ (16) ಕೊಲೆಯಾದ ಕೊಲೆಯಾದ ದುರ್ದೈವಿಗಳು.

Advertisment

ಇದನ್ನೂ ಓದಿ:ಟೀಂ ಇಂಡಿಯಾಗೆ ಪೆಟ್ಟು ಕೊಡ್ತಿದೆ IPL ಇಂಪ್ಯಾಕ್ಟ್​ ರೂಲ್; ಕ್ಯಾಪ್ಟನ್ ರೋಹಿತ್ ಶರ್ಮಾ ಅಪಸ್ವರ..!

publive-image

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಾಶ್ ಬಾಕಳೆ ಪುತ್ರ ಕಾರ್ತಿಕ್​​ನ ಮದುವೆ ಕಾರ್ಯಕ್ರಮಕ್ಕಾಗಿ ಸಂಬಂಧಿಕರು ಗದಗಕ್ಕೆ ಬಂದಿದ್ದರು. ಮೊದಲನೇ ಮಹಡಿಯ ಕೋಣೆಯಲ್ಲಿ ಪತಿ, ಪತ್ನಿ, ಮಗಳು ಮಲಗಿಕೊಂಡಿದ್ದರು. ಇದೇ ವೇಳೆ ಏಕಾಏಕಿ ಮನೆಯ ಹಿಂದಿರುವ ಕಿಡಕಿಯಿಂದ ಬಂದ ಹಂತಕರು ಕೊಲೆ ಮಾಡಿದ್ದಾರೆ.

ಇದನ್ನೂ ಓದಿ: ನೇಹಾ ಹಿರೇಮಠ್ ಕೊಲೆ ಕೇಸ್; ರಾಜ್ಯದ ಕ್ಷಮೆ ಕೇಳಿ ಗಳಗಳನೇ ಕಣ್ಣೀರಿಟ್ಟ ಆರೋಪಿ ಫಯಾಜ್ ತಾಯಿ

Advertisment

publive-image

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿಯ ವಿಡಿಯೋ ಒಂದು ವೈರಲ್ ಆಗಿದೆ. ಐದು ಜನ ಅನುಮಾನಾಸ್ಪದ ವ್ಯಕ್ತಿಗಳ ದೃಶ್ಯ ಸಿಸಿಟಿವಿ ಸೆರೆಯಾಗಿದೆ. ನಗರದ ಚೆನ್ನಮ್ಮ ಸರ್ಕಲ್ ಬಳಿಯ ಅಂಗಡಿಯಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಧ್ಯೆ ರಾತ್ರಿ 2.55 ಗಂಟೆ ಅಂಗಡಿ ಬಳಿ ನಡೆದುಕೊಂಡು ಹೋಗಿದ್ದಾರೆ. ಅಲ್ಲಿ ಹೋಗಿರುವ ದುಷ್ಕರ್ಮಿಗಳೇ ಕೊಲೆ ಕೃತ್ಯದಲ್ಲಿ ಭಾಗಿ ಆಗಿದ್ದಾರಾ ಎಂಬ ಅನುಮಾನ ಹುಟ್ಟಿಕೊಂಡಿದೆ.

ಇದನ್ನೂ ಓದಿ:ಐಪಿಎಲ್​​ ಟೂರ್ನಿಯಿಂದಲೇ ಧೋನಿ ಹೊರಬಿದ್ದರೂ ಅಚ್ಚರಿ ಇಲ್ಲ..! ಸಿಎಸ್​ಕೆ ಫ್ಯಾನ್ಸ್​ಗೆ ಇದು ನೋವಿನ ಸುದ್ದಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment