/newsfirstlive-kannada/media/post_attachments/wp-content/uploads/2024/10/zee-show2.jpg)
ರಿಯಾಲಿಟಿ ಶೋಗಳು ದೊಡ್ಡ ಮಟ್ಟದಲ್ಲಿ ಲಾಂಚ್ ಮಾಡೋದ್ರಲ್ಲಿ ಜೀ ವಾಹಿನಿ ಒಂದು ಹೆಜ್ಜೆ ಮುಂದೆ ಅಂತನೇ ಹೇಳಬಹುದು. ಮೊನ್ನೆಯಷ್ಟೇ ಹೊಸ ಟೀಸರ್ ಲಾಂಚ್ ಮಾಡಿತ್ತು. ಕಿರುತೆರೆಯ ಬಿಗ್ಗೆಸ್ಟ್ ಶೋ ಬರ್ತಿದೆ ಅನ್ನೋದರ ಬಗ್ಗೆ ಅಲರ್ಟ್ ವೀಕ್ಷಕರಿಗೆ ಕೊಟ್ಟಿದೆ. ಈ ಶೋ ಫಾರ್ಮೆಟ್ ಬಗ್ಗೆ ನಮಗೆ ಸುಳಿವು ಸಿಕ್ಕಿದೆ.
ಇದನ್ನೂ ಓದಿ: ಕಿರುತೆರೆಗೆ ಲಗ್ಗೆ ಇಡ್ತಿದೆ ಮತ್ತೊಂದು ‘ಮಜಾ ಕೆಫೆ’; ಹೊಚ್ಚ ಹೊಸ ರಿಯಾಲಿಟಿ ಶೋ ಅತಿಥಿ ಇವರೇ ನೋಡಿ
ಇದೊಂದು ಪಕ್ಕಾ ಗೇಮ್ ಶೋ ಆಗಿದೆ. ಮನರಂಜನೆ ಜೊತೆಗೆ ರೋಚಕ ಆಟಗಳನ್ನ ನೋಡಬಹುದು. ಈ ಹಿಂದೆ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಿದ್ದ ಫ್ಯಾಮಿಲಿ ಗ್ಯಾಂಗ್ಸ್ಟಾರ್ ಮಾದರಿಯಲ್ಲೇ ಈ ಹೊಸ ಶೋನ ಪ್ಲ್ಯಾನ್ ಮಾಡಿದೆಯಂತೆ ತಂಡ. ಈಗಾಗಲೇ ಶೋ ಪ್ರಿಪರೇಷನ್ ಶುರುವಾಗಿದ್ದು ಇನ್ನೆರಡು ವಾರದಲ್ಲಿ ಲಾಂಚ್ ಆಗಲಿದೆ.
ಮತ್ತೊಂದು ಮಾಹಿತಿ ಸಿಕ್ಕಿದೆ. ಅದೆನೆಂದರೆ ಪುನೀತ್ ರಾಜ್ಕುಮಾರ್ ಅವರು ನಡೆಸಿಕೊಡ್ತಿದ್ದ ಫ್ಯಾಮಿಲಿ ಪವರ್ ಫಾರ್ಮೆಟ್ನ ಝಲಕ್ ಕೂಡ ಶೋನಲ್ಲಿ ಇರಲಿದೆ ಎಂಬುವುದು ಮೂಲಗಳಿಂದ ತಿಳಿದು ಬಂದಿದೆ. ಸೀರಿಯಲ್ ಕಲಾವಿದರನ್ನೇ ಒಂದೊಂದು ಗ್ರೂಪ್ ಆಗಿ ಮಾಡಿ ಗೇಮ್ ಅಡ್ಡದಲ್ಲಿ ಬಿಡೋ ಚಾನ್ಸ್ ಇದೆ.
ಜೊತೆಗೆ ಶೋನಲ್ಲಿ ಭಾಗವಹಿಸೋಕೆ ವೀಕ್ಷಕರಿಗೂ ಅವಕಾಶ ಕೊಡೋ ಸಾಧ್ಯತೆ ಇದೆ. ಅಂದ್ಹಾಗೆ ಶೋ ಹೊಸ್ಟ್ ಆಗಿ ಅಕುಲ್ ಬಾಲಾಜಿ ಅಥವಾ ಸ್ಟಾರ್ ನಟ ಬರೋ ಚಾನ್ಸ್ ಇದೆ. ಸರಿಗಮಪ ಶೋ ಶುರುವಾಗ್ತಿರೋದ್ರಿಂದ ಅನುಶ್ರೀ ಅವರು ಡಿಕೆಡಿ ಹಾಗೂ ಸರಿಗಮಪ ಎರಡರಲ್ಲೂ ಇರೋ ಕಾರಣದಿಂದ ಅನುಶ್ರೀ ನಡೆಸಿಕೊಡೋದು ಡೌಟು. ಒಟ್ಟಿನಲ್ಲಿ ಇದೊಂದು ಪಕ್ಕಾ ಗೇಮ್ ಎಂಟರ್ನ್ಮೆಂಟ್ ಶೋ ಆಗಿದ್ದು. ಇದರಿಂದ ವೀಕ್ಷಕರಿಗೆ ಭರ್ಜರಿ ಮನರಂಜನೆ ಸಿಗುವುದರಲ್ಲಿ ಡೌಟೇ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ