/newsfirstlive-kannada/media/post_attachments/wp-content/uploads/2024/09/ganesha-chaturthi.jpg)
ಇಂದು ನಾಡಿನೆಲ್ಲೆಡೆ ಗೌರಿ-ಗಣೇಶ ಹಬ್ಬದ ಸಂಭ್ರಮ. ಮನೆಮನೆಗಳಲ್ಲಿ ಮಂಗಳ ಮೂರ್ತಿ ಕಂಗೊಳಿಸ್ತಾ ಇದ್ದಾನೆ. ನಾಡಿನೆಲ್ಲೆಡೆ ಏಕದಂತನ ಆರಾಧನೆ ಶುರುವಾಗಿದೆ. ಹೀಗಾಗಿ ಗಣೇಶನ ಮೂರ್ತಿ, ಹೂವು, ಹಣ್ಣು, ಪೂಜಾ ಸಾಮಾಗ್ರಿ, ಅಲಂಕಾರಿಕ ವಸ್ತುಗಳು ಸೇರಿದಂತೆ ಅಗತ್ಯ ಸಾಮಾಗ್ರಿಗಳನ್ನು ಕೊಳ್ಳಲು ಮಾರ್ಕೆಟ್ಗಳಲ್ಲಿ ಜನ ಕಿಕ್ಕಿರಿದು ತುಂಬಿದ್ದಾರೆ. ಮತ್ತೊಂದೆಡೆ ನಗರದಲ್ಲೆಲ್ಲ ಟ್ರಾಫಿಕ್ ಜಾಮ್ ಉಂಟಾಗಿದೆ.
ಇದನ್ನೂ ಓದಿ:10 ನಿಮಿಷದಲ್ಲಿ ಹೀಗೆ ಮೋದಕ ತಯಾರಿಸಿ! ಗಣೇಶನಿಗೆ ಮಾತ್ರವಲ್ಲ ನಿಮಗೂ ಇಷ್ಟವಾಗುತ್ತೆ ನೋಡಿ
ಕೊಪ್ಪಳ
ಗಣೇಶ್ ಚತುರ್ಥಿಗೆ ಕೊಪ್ಪಳದಲ್ಲಿ ಭರ್ಜರಿ ಸಿದ್ಧತೆ ನಡೆದಿದೆ. ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ 2 ಸಾವಿರ ವಿದ್ಯಾರ್ಥಿಗಳು ಸಾಮೂಹಿಕವಾಗಿ ಸೇರಿ ವಿನಾಯಕನ ಆಕೃತಿ ರಚನೆ ಮಾಡಿದ್ದು, ಈ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಹಾವೇರಿ
ಇದು ಅಂತರರಾಜ್ಯದ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿರೋ ಕುನ್ನೂರು ಗಣೇಶ. ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಕುನ್ನೂರನಲ್ಲಿ ತಯಾರಾಗೋ ಗಣೇಶ ಮೂರ್ತಿಗೆ ಯಾವುದೇ ಕೆಮಿಕಲ್ ಮಿಕ್ಸ್ ಮಾಡಲ್ಲ.. ಅದಕೆ ಇದು ಇಷ್ಟು ಫೇಮಸ್ ಆಗಿದೆ.
ಗದಗ
ಇನ್ನೂ ಗದಗ ಜಿಲ್ಲೆಯಲ್ಲಿ ಗಣೇಶನ ಮೂರ್ತಿಗಳನ್ನು ಖರೀದಿ ಭರಾಟೆ ಜೋರಾಗಿದೆ. ನಗರದ ಸ್ವಾಮೀ ವಿವೇಕಾನಂದ ಭವನದಲ್ಲಿ ಒಂದೇ ಸೂರಿನಡಿ ಗಣೇಶನ ವಿಗ್ರಹಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.
ಗೌರಿ ಗಣೇಶ ಹಬ್ಬವನ್ನ ಸಂಭ್ರಮ, ಸಡಗರದಿಂದ ಆಚರಿಸಲು ಕಾಫಿ ನಾಡು ಚಿಕ್ಕಮಗಳೂರು ಸಿದ್ದವಾಗಿದೆ. ಬೆಳಗಾವಿ ಜಿಲ್ಲೆ, ಗಡಿಜಿಲ್ಲೆ ಬೀದರ್‌ನ ಜನರು ಸಜ್ಜಾಗಿದ್ದು, ಹಬ್ಬಕ್ಕೆ ಬೇಕಾಗಿರುವ ಮೂರ್ತಿ, ಹೂವು, ಹಣ್ಣು, ಪೂಜಾ ಸಾಮಾಗ್ರಿ, ಅಲಂಕಾರಿಕ ವಸ್ತುಗಳು ಸೇರದಂತೆ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ.
ಇದನ್ನೂ ಓದಿ: ಗೌರಿ ಪೂಜೆಗೆ ಒಳ್ಳೆಯ ಮುಹೂರ್ತ ಯಾವ್ದು? ಸ್ವರ್ಣಗೌರಿ ವ್ರತದಿಂದ ಆಗುವ ಪ್ರಯೋಜನ ಏನು?
ನಿನ್ನೆ, ಇವತ್ತು ಮತ್ತು ನಾಳೆ ರಜೆ ಸಿಕ್ತಾ ಇದ್ದಂತೆ ಜನ ತಮ್ಮ ತಮ್ಮ ಊರುಗಳತ್ತ ಹೊರಡಲು ಸಜ್ಜಾಗಿದ್ದಾರೆ. ಹಾಗೇ ಊರುಗಳಿಗೆ ಹೋಗೋ ಜನರಿಗಾಗಿ ಬೆಂಗಳೂರಿನಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಮಂಗಳೂರು, ಕಲಬುರಗಿ ರಾಜ್ಯದ ಹಲವು ಭಾಗಗಳಿಗೆ 1,500 ಹೆಚ್ಚುವರಿ ಬಸ್ ಬಿಡಲಾಗಿದೆ. ಈ 1,500 ಬಸ್ಗಳ ಪೈಕಿ 200 ಬಿಎಂಟಿಸಿ ಬಸ್ಗಳನ್ನ ಬಳಸಿಕೊಳ್ಳಲು ಕೆಎಸ್ಆರ್ಟಿಸಿ ನಿರ್ಧರಿಸಿದೆ.
ಮುಹೂರ್ತ ಹೇಗಿದೆ..?
ಇನ್ನು ಗಣೇಶ ಮೂರ್ತಿಯ ಪ್ರತಿಷ್ಠಾಪನೆಗೆ ಪಂಚಾಂಗದ ಪ್ರಕಾರ ಇಂದು ಮೂರು ಮಂಗಳಕರ ಸಮಯಗಳಿವೆ. ಶುಕ್ಲ ಪಕ್ಷದ ಚತುರ್ಥಿ ತಿಥಿ ಸೆಪ್ಟೆಂಬರ್ ನಿನ್ನೆ ಮಧ್ಯಾಹ್ನ 03.01 ಕ್ಕೆ ಪ್ರಾರಂಭವಾಗಿ ಇಂದು ಸಂಜೆ 05.37ರವರೆಗೆ ಇರಲಿದೆ. ಇನ್ನು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಬೆಳಗ್ಗೆ 7.36- 09.10 ಗಂಟೆವರೆಗೆ ಒಳ್ಳೆಯ ಮುಹೂರ್ತ ಇದೆ. ಜೊತೆಗೆ ಬೆಳಗ್ಗೆ 11.03-1.34 ವರೆಗೆ ಹಾಗೂ ಮೂರನೇ ಶುಭ ಮುಹೂರ್ತ ಮಧ್ಯಾಹ್ನ 1.53 ರಿಂದ 3.27 ರವರೆಗೆ ಒಳ್ಳೆಯ ಕಾಲ ಇದೆ.
ರಾಜ್ಯದಲ್ಲಿ ಮಾತ್ರವಲ್ಲ, ದೇಶದೆಲ್ಲೆಡೆ ಗಣೇಶನ ವಿಗ್ರಹ ಪ್ರತಿಷ್ಠಾಪಿಸಿ ನಮಿಸೋದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮನೆಯಂಗಳದಲ್ಲಿ ರಂಗೋಲಿ ಬಿಡಲು ಹೆಣ್ಣು ಮಕ್ಕಳು ರೆಡಿಯಾಗಿದ್ರೆ. ಪಂಚೆ ತೊಟ್ಟು ಪೂಜೆ ಮಾಡಿ ಲಡ್ಡು ಸವಿಯಲು, ಭರ್ಜರಿ ಸ್ಟೆಪ್ ಹಾಕೋಕೆ ಗಂಡೈಕ್ಳು ಕಾದು ಕುಳಿತ್ತಿದ್ದಾರೆ. ಒಟ್ಟಾರೆ ಆ ಗಜಾನನ ನಿಮ್ಮೆಲ್ಲ ವಿಘ್ನಗಳನ್ನು ನಾಶಮಾಡಲಿ. ಆರೋಗ್ಯ, ಸಂಪತ್ತು, ನೆಮ್ಮದಿಯನ್ನು ಕರುಣಿಸಲಿ. ನಿಮಗೂ ನಿಮ್ಮ ಕುಟುಂಬಸ್ಥರಿಗೂ ಗಣೇಶ ಹಬ್ಬದ ಶುಭಾಶಯಗಳು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ