newsfirstkannada.com

ಗೌರಿ ಪೂಜೆಗೆ ಒಳ್ಳೆಯ ಮುಹೂರ್ತ ಯಾವ್ದು? ಸ್ವರ್ಣಗೌರಿ ವ್ರತದಿಂದ ಆಗುವ ಪ್ರಯೋಜನ ಏನು?

Share :

Published September 6, 2024 at 7:21am

    ನಾಡಿನೆಲ್ಲೆಡೆ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ

    ಗಣೇಶ ಚತುರ್ಥಿಯ ಒಂದು ದಿನದ ಮುಂಚೆ ಗೌರಿ ದೇವಿಯ ಆರಾಧನೆ

    ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ವಿಜ್ರಂಭಣೆಯ ಆಚರಣೆ

ನಾಡಿನೆಲ್ಲೆಡೆ ಇಂದು ಗೌರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಗಣೇಶ ಚತುರ್ಥಿಯ ಒಂದು ದಿನದ ಮುಂಚೆ ಪಾರ್ವತಿ ದೇವಿಯ ಅವತಾರವಾದ ಗೌರಿ ದೇವಿಯನ್ನು ಇಂದು ಮನೆಗೆ ತಂದು ಪೂಜಿಸಲಾಗುತ್ತದೆ. ಈ ಹಬ್ಬವನ್ನು ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಭಾರೀ ವಿಜ್ರಂಭಣೆಯಿಂದ ಮಾಡಲಾಗುತ್ತದೆ.

ಸಂತೋಷದ ದಾಂಪತ್ಯ ಜೀವನಕ್ಕಾಗಿ ಮಹಿಳೆಯರು ಇಂದು ಸ್ವರ್ಣಗೌರಿ ವ್ರತವನ್ನು ಮಾಡುತ್ತಾರೆ. ಈ ದಿನದಂದು ವಿವಾಹಿತ ಮಹಿಳೆಯರು, ಗಂಡನ ಮನೆಯಲ್ಲಿ ಪೂಜೆ ನೆರವೇರಿಸಿ ತಾಯಿ ಮನೆಗೆ ಬರುತ್ತಾರೆ. ಅಲ್ಲಿ ನಡೆಯುವ ಗೌರಿ ಪೂಜೆಯಲ್ಲಿ ಭಾಗಿಯಾಗಿ ಆಶೀರ್ವಾದ ಪಡೆಯುತ್ತಾಳೆ.

ಇದನ್ನೂ ಓದಿ:ಅರಮನೆಯ ಗೋಡೆಯೂ ಚಿನ್ನ, ವಿಮಾನವೂ ಚಿನ್ನ.. ಮೋದಿ ಭೇಟಿಯಾಗ್ತಿರುವ ಸುಲ್ತಾನನ ಜೀವನ ಅಬ್ಬಬ್ಬಾ! Photos

ಗೌರಿ ಪೂಜೆಗೆ ಸಮಯ 

  • ಗೌರಿ ಹಬ್ಬದ ತಿಥಿ ಆರಂಭ: ಸೆಪ್ಟೆಂಬರ್‌ 5 ರಂದು ಗುರುವಾರ ಮಧ್ಯಾಹ್ನ 12:21
  • ಗೌರಿ ಹಬ್ಬದ ತಿಥಿ ಮುಕ್ತಾಯ: ಸೆಪ್ಟೆಂಬರ್‌ 6 ರಂದು ಶುಕ್ರವಾರ ಮಧ್ಯಾಹ್ನ 3:01 ರವರೆಗೆ
  • ಗೌರಿ ಪೂಜೆ ಮುಹೂರ್ತ : ಇಂದು ಮುಂಜಾನೆ 5:32 ರಿಂದ ಬೆಳಗ್ಗೆ 8:01 ರವರೆಗೆ
  • ರಾಹುಕಾಲ: ಬೆಳಗ್ಗೆ 10.45 ರಿಂದ ಮಧ್ಯಾಹ್ನ 12.19
  • ಸೂರ್ಯೋದಯ: ಬೆಳಗ್ಗೆ 06.02 – ಸಂಜೆ 06.39
  • ಅಭಿಜಿತ್ ಮುಹೂರ್ತ: ಬೆಳಗ್ಗೆ 11.54 – ಮಧ್ಯಾಹ್ನ 12.45
  • ವಿಜಯ ಮುಹೂರ್ತ: ಮಧ್ಯಾಹ್ನ 02.38 – 03.29 ಮಧ್ಯಾಹ್ನ

ಗೌರಿ ಪೂಜೆಯಿಂದ ಆಗುವ ಪ್ರಯೋಜನ

ಮಹಿಳೆಯರು ಗೌರಿ ಪೂಜೆ ಮಾಡುವುದರಿಂದ ಸಾಮರಸ್ಯ ಮತ್ತು ಸಂತೋಷದ ದಾಂಪತ್ಯ ಜೀವನವನ್ನು ಪಡೆದುಕೊಳ್ಳುತ್ತಾರೆ ಅನ್ನೋ ನಂಬಿಕೆ ಇದೆ. ಆರೋಗ್ಯ ಸಮಸ್ಯೆಗಳು ದೂರಾಗುವುದು, ಸಂಪತ್ತು ವೃದ್ಧಿ, ದೋಷಗಳು ಇದ್ದರೆ ಪರಿಹಾರ, ಮಾನಸಿಕ ಶಾಂತಿ, ಬಯಸಿದ ಬೇಡಿಕೆ ಈಡೇರಿಕೆ, ಭೌತಿಕ, ಆಧ್ಯಾತ್ಮಿಕ ಜೀವನ ಸುಧಾರಿಸುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ:12 ವರ್ಷದಿಂದ ಈತನ ನಿದ್ರೆ ದಿನಕ್ಕೆ ಕೇವಲ 30 ನಿಮಿಷ.. ನೀ ಮಾಯೆಯೊಳಗೊ ನಿದ್ದೆ ಮಾಯೆ ನಿನ್ನೊಳಗೊ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೌರಿ ಪೂಜೆಗೆ ಒಳ್ಳೆಯ ಮುಹೂರ್ತ ಯಾವ್ದು? ಸ್ವರ್ಣಗೌರಿ ವ್ರತದಿಂದ ಆಗುವ ಪ್ರಯೋಜನ ಏನು?

https://newsfirstlive.com/wp-content/uploads/2024/09/GOWRI.jpg

Load More