newsfirstkannada.com

3ನೇ ಬಾರಿ ಬಾಹ್ಯಾಕಾಶಕ್ಕೆ ಹಾರುತ್ತಿರೋ ಭಾರತದ ಸುನಿತಾ ವಿಲಿಯಮ್ಸ್; ಏನಿದು ಸ್ಟೋರಿ?

Share :

Published May 7, 2024 at 6:14am

    ಯಾವ ರಾಕೆಟ್ ಮೂಲಕ ಸುನಿತಾ ವಿಲಿಯಮ್ಸ್ ಪ್ರಯಾಣಿಸ್ತಿದ್ದಾರೆ?

    ಭಾರತದ ಈ ಎರಡು ಗುರುತುಗಳನ್ನ ಹೊಯ್ಯುತ್ತಿರುವ ಸುನಿತಾ

    ಭಾರತದ ಮೂಲದ ಬಾಹ್ಯಾಕಾಶಯಾನಿ ಸುನಿತಾ ವಿಲಿಯಮ್ಸ್

ನವದೆಹಲಿ: ಭಾರತದ ಮೂಲದ ಸುನಿತಾ ವಿಲಿಯಮ್ಸ್ ಅವರು 3ನೇ ಬಾರಿಗೆ ಬಾಹ್ಯಾಕಾಶಕ್ಕೆ ಪ್ರಯಾಣ ಮಾಡುತ್ತಿದ್ದು ಜೊತೆಯಲ್ಲಿ ಗಣೇಶನ ವಿಗ್ರಹವನ್ನು ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಬಾಹ್ಯಾಕಾಶದ ಪ್ರಯಾಣದ ವೇಳೆ ಸುನಿತಾ ವಿಲಿಯಮ್ಸ್ ಅವರು ಭಗವದ್ಗೀತೆಯನ್ನ ತೆಗೆದುಕೊಂಡು ಹೋಗಿದ್ದರು.

ಸುನೀತಾ ವಿಲಿಯಮ್ಸ್ ಅವರು ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಬೋಯಿಂಗ್ ಸಂಸ್ಥೆಯ ಸ್ಟಾರ್ ಲೈನರ್ ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಪಯಣ ಬೆಳೆಸುತ್ತಿದ್ದಾರೆ. ಇದು ಅವರ 3ನೇ ಬಾಹ್ಯಾಕಾಶ ಪಯಣವಾಗಿದ್ದು ಇದೊಂದು ವಿಶ್ವದಲ್ಲಿ ವಿಶೇಷ ದಾಖಲೆ ಎಂದು ಹೇಳಬಹುದು. ಇದು ಸ್ಟಾರ್ ಲೈನರ್ ರಾಕೆಟ್​ನ ಮೊದಲ ಮಾನವ ಸಹಿತ ಬಾಹ್ಯಾಕಾಶ ಪಯಣವಾಗಿದೆ. ಈ ರಾಕೆಟ್ ಫ್ಲೋರಿಡಾದ ಕೇಪ್ ಕ್ಯಾನವೆರಲ್‌ ಉಡಾವಣಾ ಕೇಂದ್ರದಿಂದ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತೀಯ ಕಾಲಮಾನ ಇಂದು ಬೆಳಗ್ಗೆ 8 ಗಂಟೆ 4 ನಿಮಿಷಕ್ಕೆ ಹಾರಲಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ನಟಿ ಅಮೂಲ್ಯಗೆ ಚಾನ್ಸ್​ ಕೊಡಿಸ್ತೀನಿ ಅಂತ ಮಂಚಕ್ಕೆ ಕರೆದ ಯುವಕ.. ಆಮೇಲೇನಾಯ್ತು?

ಸದ್ಯ ಈ ಸಂಬಂಧ ತಮ್ಮ ಅಭಿಪ್ರಾಯ ಹಂಚಿಕೊಂಡ ಬಾಹ್ಯಾಕಾಶಯಾನಿ ಸುನೀತಾ ವಿಲಿಯಮ್ಸ್ ಅವರು, ನನ್ನ ಅದೃಷ್ಟದ ದೇವರು ಆಗಿರುವ ಗಣೇಶನ ಪುಟ್ಟ ವಿಗ್ರಹವನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಗಣೇಶ ನೆಚ್ಚಿನ ದೇವರಾಗಿದ್ದು ನನ್ನ ಅದೃಷ್ಟ, ತೆಗೆದುಕೊಂಡು ಹೋಗುತ್ತಿರುವುದಕ್ಕೆ ತುಂಬಾ ಖುಷಿಯಾಗಿದೆ. ಇದು ನನ್ನ 3ನೇ ಬಾಹ್ಯಾಕಾಶ ಯಾನ ಆಗಿದ್ದು ತುಸು ಭಯ ಇದ್ದೇ ಇರುತ್ತದೆ. ಮಹತ್ವದ ಅಧ್ಯಯನಕ್ಕಾಗಿ ಬಾಹ್ಯಾಕಾಶಕ್ಕೆ ಹಾರುವುದಕ್ಕೆ ಎಲ್ಲ ತಯಾರಿ ಮಾಡಿಕೊಂಡಿದ್ದು, ಕೊಂಚ ನರ್ವಸ್ ಇದೆ. ಮತ್ತೆ ತವರಿಗೆ ಮರಳುವ ಅನುಭವವಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಕೇಸ್​ಗೆ ಮತ್ತೊಂದು ಟ್ವಿಸ್ಟ್​​​.. ಡಿಕೆಶಿ ಬಗ್ಗೆ ದೇವರಾಜೇಗೌಡ ಸ್ಫೋಟಕ ಸುಳಿವು

ಇದನ್ನೂ ಓದಿ: ರಾಜ್ಯದ ಹಲವೆಡೆ ಇಂದಿನಿಂದ ಮೇ 11ರವರೆಗೆ ಮಳೆ ಮುನ್ಸೂಚನೆ.. ಬೆಂಗಳೂರು ಸೇರಿ ಎಲ್ಲೆಲ್ಲಿ ಮಳೆ ಸಾಧ್ಯತೆ? 

ಇನ್ನು ಸುನಿತಾ ಅವರು ಈ ಹಿಂದೆ ಮೊದಲ ಬಾರಿಗೆ 2006ರಲ್ಲಿ ಗಗನಯಾತ್ರೆ ಕೈಗೊಂಡಿದ್ದರು. ಬಳಿಕ 2012ರಲ್ಲಿ ಗಗನಯಾತ್ರೆ ಕೈಗೊಂಡಿದ್ದರು. ಅವರು ಬಾಹ್ಯಾಕಾಶದಲ್ಲಿ ಬರೋಬ್ಬರಿ 322 ದಿನಗಳನ್ನು ಅಲ್ಲಿ ಕಳೆದಿರುವುದು ವಿಶೇಷ ಆಗಿದೆ. ಸುನೀತಾ ವಿಲಿಯಮ್ಸ್ ಅತೀ ಹೆಚ್ಚು ಬಾರಿ ಬಾಹ್ಯಾಕಾಶಕ್ಕೆ ಹಾರಿದ ಹಾಗೂ ಬಾಹ್ಯಾಕಾಶದಲ್ಲಿ ಅಧ್ಯಯನ ನಡೆಸಿದ ಮಹಿಳಾ ಗನನಯಾತ್ರಿ ಎಂಬ ಖ್ಯಾತಿ ಪಡೆದುಕೊಂಡಿದ್ದಾರೆ. ಇದುವರೆಗೆ ಒಟ್ಟು 50 ಗಂಟೆ 40 ನಿಮಿಷ ಕಾಲ ಬಾಹ್ಯಾಕಾಶದಲ್ಲಿ ಸಮಯ ಕಳೆದಿರುವು ಯಾತ್ರಿ ಆಗಿದ್ದಾರೆ. ಸದ್ಯ ಸುನೀತಾ ವಿಲಿಯಮ್ಸ್ ಒಬ್ಬರೇ ತೆರಳುತ್ತಿಲ್ಲ. ಅವರ ಜೊತೆ ಟೀಮ್ ಹೋಗುತ್ತಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

3ನೇ ಬಾರಿ ಬಾಹ್ಯಾಕಾಶಕ್ಕೆ ಹಾರುತ್ತಿರೋ ಭಾರತದ ಸುನಿತಾ ವಿಲಿಯಮ್ಸ್; ಏನಿದು ಸ್ಟೋರಿ?

https://newsfirstlive.com/wp-content/uploads/2024/05/Sunita_Williams.jpg

Load More