newsfirstkannada.com

ಟೊಮ್ಯಾಟೋ ಬೆನ್ನಲ್ಲೇ ಬೆಳ್ಳುಳ್ಳಿ ಬೆಲೆ ಏರಿಕೆ; ರೇಟ್​ ಕೇಳಿದ್ರೆ ಶಾಕ್​ ಆಗ್ತೀರಾ!

Share :

Published February 5, 2024 at 8:52pm

Update February 5, 2024 at 9:02pm

    2023 ಸೆಪ್ಟೆಂಬರ್‌ ತಿಂಗಳಲ್ಲಿ ಟೊಮ್ಯಾಟೋಗೆ ಬಂಗಾರದ ರೇಟ್!

    2024ರಲ್ಲಿ ದೇಶಾದ್ಯಂತ ಬೆಳ್ಳುಳ್ಳಿಯ ಬೆಲೆ ಸಿಕ್ಕಾಪಟ್ಟೆ ಹೆಚ್ಚಳ

    140 ಕೆಜಿ ಬೆಳ್ಳುಳ್ಳಿ ಕಳೆದುಕೊಂಡ ವ್ಯಾಪಾರಿಯಿಂದ ದೂರು ದಾಖಲು

ಕಳೆದ 5 ತಿಂಗಳ ಹಿಂದೆ ಟೊಮ್ಯಾಟೋವನ್ನು ಚಿನ್ನದಂತೆ ಜೋಪಾನ ಮಾಡಲಾಗುತ್ತಿತ್ತು. ಟೊಮ್ಯಾಟೋ ಬೆಳೆದ ರೈತರು ಹೊಲಕ್ಕೆ ಸಿಸಿಟಿವಿ, ಮಾರಾಟ ಮಾಡೋಕೆ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಕ ಮಾಡಿದ್ರು. ಯಾಕಂದ್ರೆ 2023 ಸೆಪ್ಟೆಂಬರ್‌ ತಿಂಗಳಲ್ಲಿ ಟೊಮ್ಯಾಟೋಗೆ ಬಂಗಾರದ ರೇಟ್ ಬಂದಿತ್ತು, ಕೆಜಿಗೆ 200ರಿಂದ 300 ರೂಪಾಯಿವರೆಗೂ ಡಿಮ್ಯಾಂಡ್ ಇತ್ತು. ಈಗ ಟೊಮ್ಯಾಟೋ ರೀತಿಯಲ್ಲೇ ಬೆಳ್ಳುಳ್ಳಿ ಬೆಲೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ.

ದೇಶಾದ್ಯಂತ ಬೆಳ್ಳುಳ್ಳಿಯ ಬೆಲೆ ಹೆಚ್ಚಾಗುತ್ತಿದೆ. ಅಹಮದಾಬಾದ್‌ ಎಪಿಎಂಸಿಯಲ್ಲಿ ಕೆಜಿ ಬೆಳ್ಳುಳ್ಳಿಗೆ 250 ರಿಂದ 300 ರೂಪಾಯಿವರೆಗೂ ಇದೆ. ಇಷ್ಟು ಡಿಮ್ಯಾಂಡ್ ಇರೋ ಬೆಳ್ಳುಳ್ಳಿ ಮೇಲೆ ಕಳ್ಳರ ಕಣ್ಣು ಬೀಳದೇ ಇರುತ್ತಾ. ಅಹಮದಾಬಾದ್ ಎಪಿಎಂಸಿಯಲ್ಲಿ ಖದೀಮರು ಬೆಳ್ಳುಳ್ಳಿಯ ದರೋಡೆಗೆ ಇಳಿದಿದ್ದಾರೆ.

ಅಹಮದಾಬಾದ್ ಎಪಿಎಂಸಿಯಲ್ಲಿ ಕಳ್ಳರು ಬರೋಬ್ಬರಿ 140 ಕೆಜಿ ಬೆಳ್ಳುಳ್ಳಿ ಮೂಟೆಯನ್ನು ಕದ್ದೊಯ್ದಿದ್ದಾರೆ. 140 ಕೆಜಿ ಬೆಳ್ಳುಳ್ಳಿ ಇಂದಿನ ಮಾರುಕಟ್ಟೆ ದರ ಬರೋಬ್ಬರಿ 35 ಸಾವಿರ ರೂಪಾಯಿ. ಇಷ್ಟು ಬೆಲೆ ಬಾಳುವ ಬೆಳ್ಳುಳ್ಳಿಯನ್ನು ಖದೀಮರು ಕಳ್ಳತನ ಮಾಡಿದ್ದಾರೆ. ವ್ಯಾಪಾರಿಯೊಬ್ಬರು ಈ ಸಂಬಂಧ ವೇಜಲಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಸಿಸಿಟಿವಿಯಲ್ಲಿ ಕಳ್ಳರ ಕೈಚಳಕ ಸೆರೆಯಾಗಿದ್ದು, ಕಳ್ಳರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಇದನ್ನೂ ಓದಿ: ’ಭಾರತೀಯರು ಸೋಮಾರಿಗಳು ಎಂದಿದ್ದ ನೆಹರೂ, ಇಂದಿರಾ ಗಾಂಧಿ’- ಪ್ರಧಾನಿ ಮೋದಿ

ಗುಜರಾತಿನ ಚಿಲ್ಲರೆ ಮಾರುಕಟ್ಟೆಗಳಲ್ಲಿ ಬೆಳ್ಳುಳ್ಳಿ ಬೆಲೆ ದಿನಕಳೆದಂತೆ ಏರಿಕೆಯಾಗುತ್ತಿದೆ. ಪ್ರತಿ ಕೆಜಿಗೆ 350-400 ರೂಪಾಯಿಗೆ ಹೋಗಿದೆ. ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ಕಳೆದ 30 ವರ್ಷಗಳಲ್ಲಿ ಬೆಳ್ಳುಳ್ಳಿ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೇವಲ ಗುಜರಾತ್ ಮಾತ್ರವಲ್ಲ ಪ್ರತಿಕೂಲ ಹವಾಮಾನದ ವಾತಾವರಣದಿಂದಾಗಿ ದೇಶಾದ್ಯಂತ ಬೆಳ್ಳುಳ್ಳಿಯ ಬೆಲೆ ಹೆಚ್ಚಾಗುತ್ತಿದೆ. ದಿನನಿತ್ಯದ ಮಸಾಲೆಗಳಿಗೆ ಬೆಳ್ಳುಳ್ಳಿ ಅನ್ನೋದು ಬೇಕೇ ಬೇಕು. ಹೀಗಿರುವಾಗ ಬೆಳ್ಳುಳ್ಳಿ ಬೆಲೆ ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಸಜ್ಜಾಗಿದೆ. ಕಳೆದ ವರ್ಷ ಟೊಮ್ಯಾಟೋ ರೀತಿಯಲ್ಲಿ ಬೆಳ್ಳುಳ್ಳಿ ತನ್ನ ಡಿಮ್ಯಾಂಡ್ ಹೆಚ್ಚಿಸಿಕೊಳ್ಳುವ ಮುನ್ಸೂಚನೆಗಳಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೊಮ್ಯಾಟೋ ಬೆನ್ನಲ್ಲೇ ಬೆಳ್ಳುಳ್ಳಿ ಬೆಲೆ ಏರಿಕೆ; ರೇಟ್​ ಕೇಳಿದ್ರೆ ಶಾಕ್​ ಆಗ್ತೀರಾ!

https://newsfirstlive.com/wp-content/uploads/2024/02/Garlic-Market.jpg

Load More