newsfirstkannada.com

ಬಿಸಿಸಿಐನಿಂದ ಬಿಗ್​ ಸರ್ಪ್ರೈಸ್​​.. ಟೀಂ ಇಂಡಿಯಾ ಹೊಸ ಕೋಚ್​​ ಆಗಿ ಗೌತಮ್‌ ಗಂಭೀರ್‌!

Share :

Published May 28, 2024 at 7:11pm

    ಟೀಮ್​ ಇಂಡಿಯಾದ ಆಟಗಾರರಿಗೆ ಬಿಗ್​ ಸರ್ಪ್ರೈಸ್​ ಕೊಟ್ಟ ಬಿಸಿಸಿಐ

    ಭಾರತ ಕ್ರಿಕೆಟ್​​ ತಂಡದ ಮುಖ್ಯ ಕೋಚ್​ ಆಗಿ ಗೌತಮ್​ ಗಂಭೀರ್​​!

    ಸದ್ಯದಲ್ಲೇ ಈ ಬಗ್ಗೆ ಬಿಸಿಸಿಐನಿಂದ ಅಧಿಕೃತ ಘೋಷಣೆ ಸಾಧ್ಯತೆ

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಕೊನೆಗೂ ಮುಗಿದಿದೆ. ಈ ವರ್ಷ ಮೆಂಟರ್​ ಗೌತಮ್​ ಗಂಭೀರ್​ ಮಾರ್ಗದರ್ಶನದಲ್ಲಿ ಕೆಕೆಆರ್​ ತಂಡವು 3ನೇ ಬಾರಿಗೆ ಐಪಿಎಲ್​ ಚಾಂಪಿಯನ್​ ಆಗಿದೆ. ಸದ್ಯ ಟಿ20 ವಿಶ್ವಕಪ್​​ಗಾಗಿ ಟೀಮ್​ ಇಂಡಿಯಾ ತಂಡದ ಆಟಗಾರರು ತಯಾರಿಯಲ್ಲಿ ತೊಡಗಿದ್ದು, ಬಿಸಿಸಿಐ ಬಿಗ್​ ಸರ್ಪ್ರೈಸ್​ ಕೊಟ್ಟಿದೆ.

ಹೌದು, ರಾಹುಲ್​ ದ್ರಾವಿಡ್​ ಬಳಿಕ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್​ ಗಂಭೀರ್​ ಆಯ್ಕೆ ಖಚಿತ ಎಂದು ಬಿಸಿಸಿಐ ಮಾಹಿತಿ ನೀಡಿದೆ. ಕ್ರಿಕ್‌ಬಜ್‌ ವರದಿ ಪ್ರಕಾರ ಬಿಸಿಸಿಐ ಪ್ರಧಾನಿ ಕಾರ್ಯದರ್ಶಿ ಜಯ್​ ಶಾ ಅವರು ಗೌತಮ್​ ಗಂಭೀರ್​​​ ಅವರೊಂದಿಗೆ ಮಾತಾಡಿದ್ದು ದೇಶಕ್ಕಾಗಿ ನಾವು ಈ ಕೆಲಸ ಮಾಡಲೇಬೇಕು ಎಂದು ನಿರ್ಧಾರ ಬಂದಿದ್ದಾರಂತೆ. ಹಾಗಾಗಿ ಟೀಮ್​ ಇಂಡಿಯಾದ ಹೆಡ್​​ ಕೋಚ್​​ ಆಗಿ ಸದ್ಯದಲ್ಲೇ ಗೌತಮ್​​ ಗಂಭೀರ್​ ಹೆಸರು ಅನೌನ್ಸ್​ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಸದ್ಯ ಟೀಂ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಟಿ20 ವಿಶ್ವಕಪ್​ವರೆಗೆ ಇದೆ. ಬಳಿಕ ಟೀಮ್​ ಇಂಡಿಯಾದ ಕೋಚ್​ ಆಗಿ ಗಂಭೀರ್​ ಆಯ್ಕೆ ಬಹುತೇಕ ಖಚಿತ ಎನ್ನಲಾಗಿದೆ.

ಬಿಸಿಸಿಐ ಇತ್ತೀಚೆಗೆ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಆಸಕ್ತರು ಮೇ 27ನೇ ತಾರೀಕಿನ ಒಳಗೆ ಅರ್ಜಿ ಸಲ್ಲಿಸಬಹುದಾಗಿತ್ತು. ಈ ಅವಧಿ ಮುಕ್ತಾಯವಾಗಿದೆ. ಇದರ ಮಧ್ಯೆ ಬಿಸಿಸಿಐ ಮಾಜಿ ಆಟಗಾರ ಗೌತಮ್‌ ಗಂಭೀರ್‌ ಅವರನ್ನೂ ಅಪ್ರೋಚ್‌‌ ಮಾಡಿದ್ದು, ಇವರು ಕೋಚ್​ ಆಗೋದು ಫೈನಲ್​ ಆಗಿದೆ.

ಇದನ್ನೂ ಓದಿ: ‘ಅಂಬಾಟಿ ರಾಯುಡು ಜೋಕರ್​’ ಎಂದಿದ್ದ ಪೀಟರ್ಸನ್​​.. ಕೊಹ್ಲಿ ಫ್ಯಾನ್ಸ್​ಗೆ ಮಾಡಿದ ಮನವಿ ಏನು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಬಿಸಿಸಿಐನಿಂದ ಬಿಗ್​ ಸರ್ಪ್ರೈಸ್​​.. ಟೀಂ ಇಂಡಿಯಾ ಹೊಸ ಕೋಚ್​​ ಆಗಿ ಗೌತಮ್‌ ಗಂಭೀರ್‌!

https://newsfirstlive.com/wp-content/uploads/2024/05/Gambhir_2.jpg

Load More