/newsfirstlive-kannada/media/post_attachments/wp-content/uploads/2024/09/ROHIT_KOHLI.jpg)
ಶ್ರೀಮಂತ ಕ್ರಿಕೆಟ್​ ಲೀಗ್ ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದಿದ್ದು ಯಾರು.? ಈ ಪ್ರಶ್ನೆಗೆ ಬಹುತೇಕರ ಆಸಿಸ್​​ನ ಮಿಚೆಲ್​ ಸ್ಟಾರ್ಕ್​ ಆಗಿರುತ್ತೆ. ಅಸಲಿಗೆ 24.75 ಕೋಟಿ ಪಡೆದ ಸ್ಟಾರ್ಕ್​ ಅಲ್ಲವೇ ಅಲ್ಲ. ಗೌತಮ್​ ಗಂಭೀರ್​ ಶ್ರೀಮಂತ ಕ್ರಿಕೆಟ್​ ಲೀಗ್​ನ ಅಸಲಿ ಶ್ರೀಮಂತ. ಅದು ಹೇಗೆ ಎಂದು ತಿಳಿಯಲು ಈ ಆರ್ಟಿಕಲ್​​ನಲ್ಲಿದೆ.
ಇಂಡಿಯನ್​ ಪ್ರೀಮಿಯರ್ ಲೀಗ್​ ಅಂದರೆ ಹಣದ ಹೊಳೆ. ಝಣ ಝಣ ಕಾಂಚಾಣದ ಸದ್ದು ಜೋರಾಗಿರುತ್ತೆ. ಮ್ಯಾಚ್​ ವಿನ್ನಿಂಗ್​​​​ ಪ್ಲೇಯರ್ಸ್​​​ನ ತಂಡಕ್ಕೆ ಸೇರಿಸಿಕೊಳ್ಳಲು ಫ್ರಾಂಚೈಸಿಗಳು ಕೋಟಿ ಕೋಟಿ ಸುರಿಯೋಕೂ ಕೂಡ ಹಿಂದೆ ಸರಿಯಲ್ಲ. ಕಳೆದ ಆವೃತ್ತಿಯ ಐಪಿಎಲ್​ ಮಿನಿ ಆಕ್ಷನ್​ ಇದಕ್ಕೆ ಬೆಸ್ಟ್​ ಏಕ್ಸಾಂಪಲ್​. ಆಸ್ಟ್ರೇಲಿಯಾದ ವೇಗಿ ಮಿಚೆಲ್​ ಸ್ಟಾರ್ಕ್​​ ಖರೀದಿಗೆ ಬಿಡ್ಡಿಂಗ್ ​ವಾರ್​ ಜೋರಾಗಿ ನಡೆದಿತ್ತು. ಫ್ರಾಂಚೈಸಿಗಳ ನಡುವಿನ ಫೈಟ್​ನಲ್ಲಿ ಸ್ಟಾರ್ಕ್​​ ಬರೋಬ್ಬರಿ 24.75 ಕೋಟಿ ರೂಪಾಯಿಗೆ ಕೆಕೆಆರ್ ದಾಖಲೆಯ ಮೊತ್ತದಲ್ಲಿ ಖರೀದಿ ಮಾಡಿತ್ತು.
ಇದನ್ನೂ ಓದಿ: 2025 IPL; ವಿದಾಯದ ಬೆನ್ನಲ್ಲೇ CSKಗೂ ಬಿಗ್ ಶಾಕ್ ಕೊಟ್ಟ ಕೋಚ್ ಡ್ವೇನ್ ಬ್ರಾವೋ
ಈ ಮೂಲಕ ಐಪಿಎಲ್​ ಇತಿಹಾಸದ ಮೋಸ್ಟ್​ ಎಕ್ಸ್​​ಪೆನ್ಸಿವ್​ ಪ್ಲೇಯರ್​ ಆಗಿ ಸ್ಟಾರ್ಕ್​ ಹೊರಹೊಮ್ಮಿದ್ದರು. ಹೀಗಾಗಿ 2024ರ ಐಪಿಎಲ್​ನಲ್ಲಿ ಹೆಚ್ಚು ಸಂಭಾವನೆ ಪಡೆದಿದ್ದು ಸ್ಟಾರ್ಕ್​ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಅಸಲಿಗೆ ಸ್ಟಾರ್ಕ್​ ಅಲ್ಲ, 2024ರ ಐಪಿಎಲ್​ನಲ್ಲಿ ಹೆಚ್ಚು ಹಣ ಸಂಪಾದಿಸಿದ್ದು ಕೆಕೆಆರ್​ನ ಮೆಂಟರ್​ ಗೌತಮ್​ ಗಂಭೀರ್​. ಕಳೆದ ಸೀಸನ್​ಗೂ ಮುನ್ನ ಶತಾಯಗತಾಯ ಗಂಭೀರ್​ನ ಕೆಕೆಆರ್​ಗೆ ವಾಪಾಸ್​​ ಕರೆತರಲು ಪ್ರಯತ್ನಿಸಿದ್ದ ಓನರ್​ ಶಾರೂಖ್​ ಖಾನ್​, ಬ್ಲಾಂಕ್​ ಚೆಕ್​ ಆಫರ್​ ಮಾಡಿದ್ದರು.
ಬಳಿಕ ಲಕ್ನೋ ತೊರೆದು ಕೆಕೆಆರ್​ ಮೆಂಟರ್​ ಹುದ್ದೆಗೇರಿದ ಗೌತಮ್ ಗಂಭೀರ್​​, ತಂಡವನ್ನ ಚಾಂಪಿಯನ್​ ಪಟ್ಟಕ್ಕೂ ಏರಿಸಿದರು. ಇದೀಗ ಗಂಭೀರ್​ ಪಡೆದ ಸಂಭಾವನೆಯ ಸೀಕ್ರೆಟ್ ​ ರಿವೀಲ್​ ಆಗಿದ್ದು, 25 ಕೋಟಿಗೂ ಅಧಿಕ ಹಣವನ್ನ ಪಡೆದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಒಂದು ಸೀಸನ್​ಗೆ ಇಷ್ಟೊಂದು ಹಣವನ್ನ ಶ್ರೀಮಂತ ಲೀಗ್ ಇತಿಹಾಸದಲ್ಲೇ ಬೇರಾವ ಕೋಚ್​ ಅಥವಾ ಪ್ಲೇಯರ್​ ಪಡೆದೇ ಇಲ್ಲ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ