/newsfirstlive-kannada/media/post_attachments/wp-content/uploads/2024/04/VIRAT-GAMBHIR.jpg)
ಟಿ20 ವಿಶ್ವಕಪ್​​​ ತಂಡದಲ್ಲಿ ಕಿಂಗ್ ಕೊಹ್ಲಿ ಸ್ಥಾನದ ವಿಚಾರ ಮತ್ತೊಮ್ಮೆ ಹಾಟ್​​​​ ಟಾಪಿಕ್ ಆಗಿದೆ. ವಿರಾಟ್​​ ಕೊಹ್ಲಿಯನ್ನ ಆಯ್ಕೆ ಮಾಡಬೇಕಾ? ಬೇಡ್ವಾ? ಅನ್ನೋ ಚರ್ಚೆ ಜೋರಾಗಿ ನಡೀತಿದೆ. ಕೊಹ್ಲಿಯ ಸ್ಲೋ ಸ್ಟ್ರೈಕ್​ರೇಟ್​ ಟೀಕಾಕಾರಿಗೆ ಆಹಾರವಾಗಿದೆ.
ಐಪಿಎಲ್​ನಲ್ಲಿ ಕೊಹ್ಲಿ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ನಿನ್ನೆಯೂ ಕೂಡ ಸಾಲಿಡ್​ ಪ್ರದರ್ಶನ ನೀಡಿದ್ರು. ಆದ್ರೂ ಕೂಡ ಸನ್​ರೈಸರ್ಸ್​ ಹೈದ್ರಾಬಾದ್​ ಎದುರಿನ ಇನ್ನಿಂಗ್ಸ್​ ಉದಾಹರಣೆಯಾಗಿ ಇಟ್ಟುಕೊಂಡು ಕೊಹ್ಲಿ ಸ್ಲೋ ಬ್ಯಾಟಿಂಗ್​​ ಶೈಲಿಯನ್ನ ಹಲವರು ಟೀಕಿಸ್ತಿದ್ದಾರೆ. ಅದ್ರಲ್ಲೂ ಸನ್​ರೈಸರ್ಸ್​​ ಹೈದ್ರಾಬಾದ್​ ಎದುರು ಆಡಿದ ನಿಧಾನಗತಿಯ ಬ್ಯಾಟಿಂಗ್​ನ ಉದಾಹರಣೆಯಾಗಿ ಇಟ್ಟುಕೊಂಡು ಟೀಮ್ ಇಂಡಿಯಾ ದಿಗ್ಗಜ ಹಾಗೂ ಕಾಮೆಂಟೇಟರ್​ ಸುನೀಲ್ ಗವಾಸ್ಕರ್ ಕೂಡ ಕಟುವಾಗಿ ಟೀಕಿಸಿದ್ದಾರೆ.
ಇದನ್ನೂ ಓದಿ:ಕೊಹ್ಲಿ ವಿರುದ್ಧ ಗವಾಸ್ಕರ್ ಭಾರೀ ಆಕ್ರೋಶ; ಟೀಕೆ ಮಾಡೋರಿಗೆ ರನ್ ಮಷಿನ್ ಮತ್ತೆ ಆಹಾರ..!
/newsfirstlive-kannada/media/post_attachments/wp-content/uploads/2024/03/Gambhir_Kohli1.jpg)
ವಿರಾಟ್​ ಕೊಹ್ಲಿ ಟಚ್​ ಕಳೆದುಕೊಂಡಂತೆ ಕಾಣ್ತಿದ್ರು. ನನ್ನ ಪ್ರಕಾರ 31-32ರಿಂದ ಔಟಾಗುವವರೆಗೆ ಬೌಂಡರಿಯನ್ನೆ ಬಾರಿಸಲಿಲ್ಲ. ಕೊಹ್ಲಿ ಇನ್ನಿಂಗ್ಸ್​ನಲ್ಲಿ ಸಿಂಗ​ಲ್​, ಸಿಂಗಲ್​​​​​​​​ ಮತ್ತು ಸಿಂಗಲ್ ಅಷ್ಟೇ ಕಾಣಿಸಿದವು. 14-15ನೇ ಓವರ್​ನಲ್ಲಿ ಸ್ಟ್ರೈಕ್​ರೇಟ್​​ ಕೇವಲ 118 ಇತ್ತು ಎಂದು ಮಾಜಿ ಕ್ರಿಕೆಟಿಗ ಸುನೀಲ್​ ಗವಾಸ್ಕರ್ ಹೇಳಿದ್ದಾರೆ.
ಇಂತಹ ಸಂಕಷ್ಟದ ಸಮಯದಲ್ಲಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ವಿರಾಟ್ ಕೊಹ್ಲಿ ಬೆನ್ನಿಗೆ ನಿಂತಿದ್ದಾರೆ. ಟೀಕಾಕಾರರಿಗೆ ಖಡಕ್​ ರಿಪ್ಲೈ ಕೊಟ್ಟಿದ್ದಾರೆ. ಗೆಲುವೊಂದೇ ಎಲ್ಲರ ಅಂತಿಮ ಗುರಿ. ಒಂದು ವೇಳೆ 100 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್​​ ಬೀಸಿಯೂ ನಿಮ್ಮ ತಂಡ ಗೆದ್ದರೆ ಉತ್ತಮ. ಆದರೆ ನಿಮ್ಮ ಬ್ಯಾಟಿಂಗ್ ಸ್ಟ್ರೈಕ್​ರೇಟ್​​ 190 ಹೊಂದಿಯೂ ಸೋತರೆ ಅದಕ್ಕೆ ಅರ್ಥವಿಲ್ಲ. ಸ್ಟ್ರೈಕ್​​ರೇಟ್​ ಮುಖ್ಯ, ಆದರೆ ಟಿ20 ಕ್ರಿಕೆಟ್​ನಲ್ಲಿ ಕಂಡಿಷನ್​​, ಸ್ಥಳ, ಎದುರಾಳಿ ಹಾಗೂ ಪಂದ್ಯದ ಸಂದರ್ಭ ಕೂಡ ತುಂಬಾ ಮಹತ್ವ ಆಗುತ್ತೆ ಎಂದು ಗೌತಮ್ ಗಂಭೀರ್​​ ಕೊಹ್ಲಿ ಪರ ಬ್ಯಾಟ್ ಬೀಸಿದ್ದಾರೆ.
ಕೊಹ್ಲಿ-ಗಂಭೀರ್ ಈಗ​​​ ನಡುವೆ ಏನಿಲ್ಲ, ಏನೇನಿಲ್ಲ..!
ಕೊಹ್ಲಿ ಸದಾ ಕಿಡಿ ಕಾರುತ್ತಿದ್ದ ಗೌತಮ್ ಗಂಭೀರ್​ ಇದೀಗ ಕೊಹ್ಲಿ ಪರ ಬ್ಯಾಟ್ ಬೀಸ್ತಿರೋದು ನಿಮಗೆಲ್ಲ ಅಚ್ಚರಿ ತರಿಸಬಹುದು. ಇಬ್ಬರ ಫ್ಲ್ಯಾಶ್​​​​​​​ಬ್ಯಾಕ್​ ಕಹಾನಿ ಆಶ್ಚರ್ಯ ಪಡುವಂತೆ ಇದೇ ಬಿಡಿ. ಕೊಹ್ಲಿ-ಗೌತಿ ಹಾವು-ಮುಂಗುಸಿಯಂತಿದ್ರು. ಒಬ್ಬರನ್ನ ಕಂಡ್ರೆ ಒಬ್ಬರು ನಿಗಿ ನಿಗಿ ಕೆಂಡ ಕಾರ್ತಿದ್ರು. ಐಪಿಎಲ್​​​ನಲ್ಲಿ ಇಬ್ಬರ ನಡುವೆ ಅನೇಕ ಬಾರಿ ವಾಕ್ಸಮರ ನಡೆದಿದೆ. ಕೊಹ್ಲಿಯನ್ನ ಇಡೀ ವಿಶ್ವವೇ ಕೊಂಡಾಡ್ತಿದ್ರೂ ಗೌತಿ ಮಾತ್ರ ಟೈಮ್ ಸಿಕ್ಕಾಗಲೆಲ್ಲಾ ಹರಿತವಾದ ಮಾತಿನ ಬಾಣ ಪ್ರಯೋಗಿಸ್ತಿದ್ದರು.
ಇದನ್ನೂ ಓದಿ:‘ಬಾರೋ ಬಾರೋ ಮಳೆರಾಯ..’ 48 ಗಂಟೆಯಲ್ಲಿ ತಂಪೆರೆಯಲಿದೆ ಮಳೆ..! ಎಲ್ಲೆಲ್ಲಿ..?
/newsfirstlive-kannada/media/post_attachments/wp-content/uploads/2023/10/Kohli_Gambhir.jpg)
ಇಂತಹ ಗಂಭೀರ್​​​​​​​, ಇದೀಗ ವಿರಾಟ್ ವಿಚಾರದಲ್ಲಿ ಕಂಪ್ಲೀಟ್ ಬದಲಾಗಿದ್ದಾರೆ. ವೈರತ್ವ ಮರೆತಿದ್ದಾರೆ. ಈ ಸೀಸನ್​​​​​​​ನ ಕೆಕೆಆರ್​​​-ಆರ್​ಸಿಬಿ ನಡುವಿನ ಮೊದಲ ಪಂದ್ಯದಲ್ಲಿ ಗೌತಿ, ಕೊಹ್ಲಿಯನ್ನ ಹಗ್​ ಮಾಡಿದ್ದೇ ಸೆನ್ಸೇಷನ್​ ಸೃಷ್ಟಿಸಿತ್ತು. ಆ ಬಳಿಕ 2ನೇ ಬಾರಿ ಮುಖಾಮುಖಿಯಾದಾಗ ಕೊಲ್ಕತ್ತಾ ಮೈದಾನದಲ್ಲಿ ಇಬ್ಬರು ಗಂಭೀರವಾಗಿ ಚರ್ಚಿಸಿದ್ದು, ನೋಡುಗರ ಕಣ್ಣು ಕುಕ್ಕಿಸಿತ್ತು. ಇದೀಗ ಸ್ಟ್ರೈಕ್​ರೇಟ್​​ ವಿಚಾರದಲ್ಲಿ ಎಲ್ಲರೂ ಕೊಹ್ಲಿಯನ್ನ ಟೀಕಿಸ್ತಿದ್ರೆ, ಗಂಭೀರ್​ ಬೆಂಬಲಿಸಿದ್ದಾರೆ. ಕೊಹ್ಲಿ ಟೀಮ್​ ಇಂಡಿಯಾಗೆ ಬೇಕೆ ಬೇಕು ಅನ್ನೋದ್ರ ಜೊತೆಗೆ ಮತ್ತೊಮ್ಮೆ ನಮ್ಮಿಬ್ಬರ ಮಧ್ಯೆ ಏನಿಲ್ಲ, ಏನೇನಿಲ್ಲ ಅನ್ನೋ ಮೆಸೇಜ್ ರವಾನಿಸಿದ್ದಾರೆ. ಡೆಲ್ಲಿ ಬಾಯ್ಸ್​​ ಸಹೋದರತ್ವ ಮುಂದೆಯೂ ಹೀಗೆ ಇರಲಿ ಅನ್ನೋದೇ ಎಲ್ಲರ ಆಶಯವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us