/newsfirstlive-kannada/media/post_attachments/wp-content/uploads/2024/08/KL-Rahul_IND.jpg)
ಗೌತಮ್​ ಗಂಭೀರ್​​​​​​​​​​, ಟೀಮ್ ಇಂಡಿಯಾದ ಹೆಡ್​ಕೋಚ್ ಆಗಿದ್ದೇ ಆಗಿದ್ದು. ತಂಡದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಈ ಗಾಳಿ ಮುಂಬರೋ ಚಾಂಪಿಯನ್ಸ್ ಟ್ರೋಫಿ ಆಯ್ಕೆಗೂ ಬೀಸುವುದು ತಪ್ಪಲ್ಲ. ಯಾಕಂದ್ರೆ ಕನ್ನಡಿಗ ಕೆಎಲ್ ಹಾಗೂ ಶ್ರೇಯಸ್ ಅಯ್ಯರ್​​ರನ್ನ ತಂಡದಿಂದ ಕೈ ಬಿಡಲು ಗಂಭೀರ್​ ನಿರ್ಧರಿಸಿದ್ದಾರೆ. ಖಾಯಂ ಆಟಗಾರರು ಸೆಲೆಕ್ಟ್ ಆಗೋದೇ ಅನುಮಾವಾಗಿದೆ. ಹೆಡ್​ಕೋಚ್​​ ಗಂಭೀರ್​​ ಇಂತಹ ನಿರ್ಧಾರಕ್ಕೆ ಮುಂದಾಗಿದ್ದಾದ್ರು ಏಕೆ ? ಇದರ ಹಿಂದಿರೋ ಲೆಕ್ಕಚಾರಗಳೇನು ಅನ್ನೋ ವಿವರ ಇಲ್ಲಿದೆ.
ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸೋತ ಟೀಮ್ ಇಂಡಿಯಾಗೆ ದೊಡ್ಡ ಕಪಾಳಮೋಕ್ಷವಾಗಿದೆ. ಆಟದ ವೈಖರಿ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗ್ತಿದೆ. ಈ ವೈಫಲ್ಯ ಮರೆತು ಟೀಮ್ ಇಂಡಿಯಾ ಮುಂಬರೋ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕಡೆಗೆ ಗಮನ ಹರಿಸಿದೆ. 2025 ಫೆಬ್ರವರಿ 19 ರಿಂದ ಇವೆಂಟ್​ ಆರಂಭಗೊಳ್ಳಲಿದ್ದು, ಅದಕ್ಕೂ ಮುನ್ನ ರೋಹಿತ್​ ಪಡೆ 3 ಏಕದಿನ ಪಂದ್ಯಗಳನ್ನಾಡಷ್ಟೇ ಆಡಲಿದೆ. ಅದಾದ ಬಳಿಕ ನೇರವಾಗಿ ಚಾಂಪಿಯನ್ಸ್ ಟ್ರೋಫಿ ಅಖಾಡಕ್ಕೆ ಧುಮುಕಲಿದ್ದು, ತಂಡದ ಆಯ್ಕೆಯಲ್ಲಿ ಅಚ್ಚರಿ ನಿರ್ಧಾರಗಳನ್ನ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಚಾಂಪಿಯನ್ ಟ್ರೋಫಿ ಆಡಲ್ವಾ ರಾಹುಲ್​​​-ಶ್ರೇಯಸ್
2025ರ ಚಾಂಪಿಯನ್ಸ್ ಟ್ರೋಫಿಯನ್ನ ಟೀಮ್ ಇಂಡಿಯಾ ಗಂಭೀರವಾಗಿ ತೆಗೆದುಕೊಂಡಿದೆ. 2013ರ ಬಳಿಕ ಭಾರತ ತಂಡ ಟ್ರೋಫಿಯನ್ನ ಗೆದ್ದಿಲ್ಲ. ಹೀಗಾಗಿ ಬಲಿಷ್ಠ ತಂಡ ಕಟ್ಟಿ, ಕಪ್ ಗೆಲ್ಲುವ ಕನಸು ಕಾಣ್ತಿದೆ. ಇಂತಹ ಮಹತ್ವದ ಪಂದ್ಯಾವಳಿಗೆ ಕನ್ನಡಿಗ ಕೆಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಸೆಲೆಕ್ಟ್ ಆಗಲ್ವಾ ಅನ್ನೋ ಅನುಮಾನ ಮೂಡಿದೆ. ಅದಕ್ಕೆ ಇತ್ತೀಚೆಗೆ ಮುಗಿದ ಶ್ರೀಲಂಕಾ ಎದುರಿನ ಅಟ್ಟರ್ ಫ್ಲಾಪ್ ಶೋ ಕಾರಣವಾಗಿದೆ.
ಲಂಕಾ ಸರಣಿಯಲ್ಲಿ ಫ್ಲಾಪ್​​​.. ಸೆಲೆಕ್ಟರ್ಸ್​ ಕೆಂಗಣ್ಣಿಗೆ ಗುರಿ
ಲಂಕಾ ಸರಣಿಯಲ್ಲಿ ಸ್ಟಾರ್ ಬ್ಯಾಟರ್​ಗಳಾದ ರಾಹುಲ್​​​ ಹಾಗೂ ಶ್ರೇಯಸ್​ ದಯನೀಯ ವೈಫಲ್ಯ ಕಂಡ್ರು. ಸಿಕ್ಕ ಚಿನ್ನದಂತ ಅವಕಾಶಗಳನ್ನ ಕೈಚೆಲ್ಲಿ ಆಯ್ಕೆಗಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ರನ್​ ಬರವೇ ಅವರಿಗೆ ಮುಂಬರೋ ಚಾಂಪಿಯನ್ಸ್ ಟ್ರೋಫಿ ಬಾಗಿಲನ್ನ ಬಹುತೇಕ ಮುಚ್ಚುವಂತೆ ಮಾಡಿದೆ.
ಇದನ್ನೂ ಓದಿ:ಪದಕದ ಆಸೆ ಇನ್ನೂ ಜೀವಂತ; ವಿನೇಶ್ ಫೋಗಟ್​ ಪರ 4 ವಾದ ಮಂಡಿಸಿದ ಹರೀಶ್ ಸಾಳ್ವೆ.. ಹೇಗಿತ್ತು ವಾದ?
ಸರಣಿಯಲ್ಲಿ ರಾಹುಲ್​​-ಶ್ರೇಯಸ್​​..!
ಕೆ.ಎಲ್.ರಾಹುಲ್​ ಇತ್ತೀಚೆಗೆ ಮುಗಿದ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ 2 ಪಂದ್ಯವನ್ನಾಡಿದ್ರು. 15.50 ಎವರೇಜ್​ನಲ್ಲಿ ಬರೀ 31 ರನ್​ ಗಳಿಸಿದ್ರು. ಶ್ರೇಯಸ್ ಅಯ್ಯರ್ 3 ಪಂದ್ಯ ಆಡಿ 12.66 ಎವರೇಜ್​ನಲ್ಲಿ 38 ರನ್ ಗಳಸಲಷ್ಟೇ ಶಕ್ತರಾದ್ರು.
ರಾಹುಲ್​​​​ ಸ್ಥಾನ ಕಬ್ಜಾ ಮಾಡಲು ಪಂತ್​ ಹದ್ದಿನ ಕಣ್ಣು
ಚಾಂಪಿಯನ್ಸ್ ಟ್ರೋಫಿಯಲ್ಲಿ ರಾಹುಲ್​​ ಸ್ಥಾನವನ್ನ ರಿಷಬ್​​ ಪಂತ್​ ಕಬ್ಜಾ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಪಂತ್​ ಅಟ್ಯಾಕಿಂಗ್ ಪ್ಲೇಯರ್​​. ಬೌಲರ್​ಗಳನ್ನ ನಿರ್ದಯವಾಗಿ ದಂಡಿಸಿ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿ ಕೊಡಬಲ್ಲರು. ಯಾವ ಕ್ಷಣದಲ್ಲೂ ಒತ್ತಡಕ್ಕೆ ಒಳಗಾಗಲ್ಲ. ಜೊತೆ ಲೆಫ್ಟಿ ಬ್ಯಾಟರ್ ತಂಡಕ್ಕೆ ಇನ್ನಷ್ಟು ಬಲ ತಂದುಕೊಡಲಿದೆ. ರಾಹುಲ್ ನಿಧಾನವಾಗಿ ಬ್ಯಾಟ್ ಬೀಸ್ತಾರೆ. ಅಟ್ಯಾಕಿಂಗ್​​ ಮೈಂಡ್​​ಸೆಟ್​ ಇಲ್ಲ. ಹೀಗಾಗಿ ಪಂತ್​​, ರಾಹುಲ್​ಗಿಂತ ಉತ್ತಮ ಆಯ್ಕೆ ಆಗಿದ್ದಾರೆ.
ಪರಾಗ್​ ಆಯ್ಕೆಗೆ ಕ್ಯಾಪ್ಟನ್​​-ಕೋಚ್​​ ಆಸಕ್ತಿ..!
ಸ್ಟಾರ್ ಬ್ಯಾಟರ್​​​ ಶ್ರೇಯಸ್​​​​ ಚಾಂಪಿಯನ್ಸ್ ಟ್ರೋಫಿ ಸ್ಥಾನವು ಭದ್ರವಾಗಿಲ್ಲ. ಯಂಗ್​​​ಬ್ಯಾಟರ್ ರಿಯಾನ್​ ಪರಾಗ್​​ ಆ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಪರಾಗ್​​ ಬ್ಯಾಟಿಂಗ್​ ಜೊತೆ ಬೌಲಿಂಗ್ ಕೂಡ ಮಾಡಬಲ್ಲರು. ಶ್ರೀಲಂಕಾ ಸರಣಿಯಲ್ಲಿ ಆಲ್​ರೌಂಡರ್ ಪ್ರದರ್ಶನದ ಮೂಲಕ ಮಿಂಚಿದ್ರು. ಜೊತೆ ಅದ್ಭುತವಾಗಿ ಫೀಲ್ಡಿಂಗ್ ಕೂಡ ಮಾಡಬಲ್ಲರು. ಈ ಕಾರಣಕ್ಕೆ ಯಂಗ್​ಬ್ಯಾಟರ್​ ಆಯ್ಕೆ ಮೇಲೆ ಕ್ಯಾಪ್ಟನ್​-ಕೋಚ್ ಹೆಚ್ಚು ಒಲವು ಹೊಂದಿದ್ದು, ಶ್ರೇಯಸ್ ಡ್ರಾಪ್ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ:ಪದಕದ ಆಸೆ ಇನ್ನೂ ಜೀವಂತ; ವಿನೇಶ್ ಫೋಗಟ್​ ಪರ 4 ವಾದ ಮಂಡಿಸಿದ ಹರೀಶ್ ಸಾಳ್ವೆ.. ಹೇಗಿತ್ತು ವಾದ?
ರಾಹುಲ್​​-ಶ್ರೇಯಸ್​​​ ಬೆಂಚ್​ಗೆ ಸೀಮಿತ
ರಾಹುಲ್​ ಹಾಗೂ ಶ್ರೇಯಸ್ ಅಯ್ಯರ್​ರನ್ನ ಚಾಂಪಿಯನ್ಸ್ ಟ್ರೋಫಿ ಪರಿಗಣಿಸುವ ಸಾಧ್ಯತೆ ವಿರಳವಾಗಿದೆ. ಬರೀ ಶ್ರೀಲಂಕಾ ಸರಣಿ ಪ್ರದರ್ಶನ ಮಾನದಂಡವಾಗಿಸದೇ, ಒಟ್ಟಾರೆ ಪ್ರದರ್ಶನವನ್ನ ಗಮಸಿದ್ರೆ ಉತ್ತಮವಾಗಿದೆ. ಅನುಭವಿ ಕ್ರಿಕೆಟರ್ಸ್​ ಕೂಡ. ಇದು ಶ್ರೇಯಸ್ ಹಾಗೂ ರಾಹುಲ್​ಗೆ ವರದಾನವಾಗಿದ್ದೆ ಆದ್ರೆ ಇಬ್ಬರೂ ತಂಡದಲ್ಲಿ ಸ್ಥಾನ ಪಡೆಯಬಹುದು. ಆದರೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಮರೀಚಿಕೆ ಆಗಲಿದೆ. ಇಬ್ಬರೂ ಬೆಂಚ್​ಗೆ ಸೀಮಿತವಾಗಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ