newsfirstkannada.com

ಮತ್ತೆ ತಾಳ್ಮೆ ಕಳೆದುಕೊಂಡ ಆ್ಯಂಗ್ರಿ ಮ್ಯಾನ್ ಗಂಭೀರ್.. ಸೋಲಿನ ಬೆನ್ನಲ್ಲೇ ವಿಡಿಯೋ ಭಾರೀ ವೈರಲ್..!

Share :

Published April 27, 2024 at 1:21pm

  ಪಂಜಾಬ್ ವಿರುದ್ಧ 261 ರನ್​ಗಳಿಸಿ ಹೀನಾಯವಾಗಿ ಸೋತ ಕೆಕೆಆರ್

  ಅಂಪೈರ್​​ ನಿರ್ಧಾರಕ್ಕೆ ರೊಚ್ಚಿಗೆದ್ದು ಜಗಳಕ್ಕೆ ಮುಂದಾದ ಗಂಭೀರ್

  ನಿನ್ನೆಯ ಪಂದ್ಯದಲ್ಲಿ ಅಭಿಮಾನಿಗಳಿಗೆ ಜಬರ್ದಸ್ತ್​ ಎಂಟರ್ಟೈನ್ಮೆಂಟ್

ಜಾನಿ ಬೈರ್​ಸ್ಟೋವ್ ಅವರ ಅದ್ಭುತ ಚೇಸಿಂಗ್​ ಆಟದ ಪರಿಣಾಮ ಐಪಿಎಲ್​ನಲ್ಲಿ ನಿನ್ನೆ ಹೊಸ ದಾಖಲೆ ಸೃಷ್ಟಿಯಾಗಿದೆ. ಕೋಲ್ಕತ್ತ ನೈಟ್​ ರೈಡರ್ಸ್ ನೀಡಿದ 262ರನ್​ಗಳ ಬಿಗ್​ ಟಾರ್ಗೆಟ್​ ಚೇಸ್​ ಮಾಡಿ ಪಂಜಾಬ್​ ಕಿಂಗ್ಸ್​ ಸಖತ್ ಎಂಟರ್ಟೈನ್​​​ ಮಾಡಿದೆ. ಐಪಿಎಲ್ ಇತಿಹಾದಲ್ಲಿ ಇಷ್ಟುದೊಡ್ಡ ಸ್ಕೋರ್​ ಚೇಸ್​ ಮಾಡಿರೋದು ಇದೇ ಮೊದಲು.

48 ಬಾಲ್​ನಲ್ಲಿ 108 ರನ್​ಗಳಿಸಿ ಬೈರ್​ಸ್ಟೋವ್ ಕೊನೆಯವರೆಗೂ ನಾಟೌಟ್ ಆಗಿಯೇ ಉಳಿದುಕೊಂಡರು. 262 ರನ್​ಗಳನ್ನು ಚೇಸ್ ಮಾಡಿದ ಪಂಜಾಬ್ ತಂಡ 8 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತು. ಭಾರೀ ಆಘಾತದ ಸೋಲು ಅನುಭವಿಸಿದ್ದರೂ ಕೋಲ್ಕತ್ತ ತಂಡದ ಮೆಂಟರ್ ಗೌತಮ್ ಗಂಭೀರ್ ಶಾಂತವಾಗಿಯೇ ಇದ್ದರು.

ಇದನ್ನೂ ಓದಿ:ನಾಪತ್ತೆ ಆಗಿದ್ದ ಮಾಡೆಲ್ ಸಾವು, ಒಂದು ವರ್ಷದಿಂದ ಶವಾಗಾರದಲ್ಲೇ ಬಿದ್ದಿದ್ದ ಮೃತದೇಹ

ಅದಕ್ಕೆ ಕಾರಣ ಅದಾಗಲೇ ಗಂಭೀರ್ ಅವರು ತಮ್ಮ ಆಟಗಾರರ ಮೇಲೆ ಫೈರ್ ಆಗಿತ್ತು. ಅದನ್ನು ಅಭಿಮಾನಿಗಳು ಕ್ಯಾಮೆರಾ ಮೂಲಕ ಸೆರೆ ಹಿಡಿದಿದ್ದು, ಇದೀಗ ವೈರಲ್ ಆಗಿದೆ. ಅಂದರೆ ಕೋಲ್ಕತ್ತ ನೈಟ್ ರೈಡರ್ಸ್​ ಬ್ಯಾಟಿಂಗ್ ಇನ್ನಿಂಗ್ಸ್​ನ 14ನೇ ಓವರ್​ನಲ್ಲಿ ಗಂಭೀರ್ ಕೋಪಿಸಿಕೊಂಡಿದ್ದಾರೆ.

ಪಂಜಾಬ್ ತಂಡದ ಸ್ಪಿನ್ನರ್ ರಾಹುಲ್ ಚಹಾರ್ ಅವರು ಎದುರಾಳಿ ರಸೆಲ್​ಗೆ ಬಾಲ್ ಮಾಡಿದರು. ಅದನ್ನು ರಸೆಲ್ ಕವರ್​​ನಲ್ಲಿ ಬಾರಿಸಿಲು ಪ್ರಯತ್ನಿಸಿದರು. ಆಗ ಫೀಲ್ಡರ್ ಅಶುತೋಷ್ ಶರ್ಮಾ, ಡೈವ್ ಹೊಡೆದು ಬಾಲ್ ತಡೆದು ಕೀಪರ್​ನತ್ತ ಎಸೆದಿದ್ದರು. ಆಗ ರಸೆಲ್ ಓವರ್​ಥ್ರೋ ಎಂದು ತಿಳಿದು ರನ್ ಕದಿಯಲು ಓಡಿದ್ದರು. ಆದರೆ ಅಂಪೈರ್ ಅವರು ರನ್ ನೀಡಲು ನಿರಾಕರಿಸಿದರು.

ಇದನ್ನೂ ಓದಿ:ಸ್ವಂತ ಮಗನ ಕೊಲ್ಲಲು 75 ಲಕ್ಷಕ್ಕೆ ಸುಪಾರಿ ಕೊಟ್ಟ ಅಪ್ಪ, ಗುಂಡಿನ ದಾಳಿಯಲ್ಲಿ ಬಚಾವ್ ಆಗಿದ್ದೇ ದೊಡ್ಡದು

ಇದಕ್ಕೆ ಕೋಪಿಸಿಕೊಂಡ ಗಂಭೀರ್, ಡಗೌಟ್​​ ಬಳಿ ನಿಂತಿದ್ದ ಅಂಪೈರ್ ಹತ್ತಿರ ಹೋಗಲು ಮುಂದಾಗಿದ್ದರು. ವಿಡಿಯೋದಲ್ಲಿ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಕೂಡ ನಿಂತಿರೋದನ್ನು ಗಮನಿಸಬಹುದಾಗಿದೆ. ಗಂಭೀರ್ ಮತ್ತು ನಾಲ್ಕನೇ ಅಂಪೈರ್ ಮಧ್ಯೆ ವಾದ-ಪ್ರತಿವಾದ ನಡೆಯುತ್ತಿರೋದನ್ನು ಗಮನಿಸಬಹುದಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಮತ್ತೆ ತಾಳ್ಮೆ ಕಳೆದುಕೊಂಡ ಆ್ಯಂಗ್ರಿ ಮ್ಯಾನ್ ಗಂಭೀರ್.. ಸೋಲಿನ ಬೆನ್ನಲ್ಲೇ ವಿಡಿಯೋ ಭಾರೀ ವೈರಲ್..!

https://newsfirstlive.com/wp-content/uploads/2024/04/GOUTHAM-GAMBHIR.jpg

Load More