ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ನೇಹಾ ಹಿರೇಮಠ ಕೊಲೆ ಕೇಸ್
ತನ್ನ ಅಳಲು ತೋಡಿಕೊಂಡ ನೇಹಾಳ ತಾಯಿ ಗೀತಾ ಹಿರೇಮಠ!
ನನ್ನ ಮಗಳನ್ನು ಕೊಂದವನನ್ನು ಗಲ್ಲಿಗೇರಿಸಿ ಎಂದು ಪಟ್ಟು ಹಿಡಿದ್ರು
ಹುಬ್ಬಳ್ಳಿ: ಮಗಳು ನೇಹಾ ಹಿರೇಮಠ ಸಾವಿನ ಬಗ್ಗೆ ತಾಯಿ ಗೀತಾ ಹಿರೀಮಠ ಮಾತಾಡಿದ್ದಾರೆ. ನನ್ನ ಮಗಳು ಯಾವ ತಪ್ಪು ಮಾಡಿದ್ದಳು ಎಂದು ಅವನು ಕೊಂದ. ಅವನಿಗೆ ಗಲ್ಲು ಶಿಕ್ಷೆ ಆಗಲೇಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು, ಫಯಾಜ್ ತಂದೆ, ತಾಯಿ ಕ್ಷಮೆ ಕೇಳಿದ ಬಗ್ಗೆ ಮಾತಾಡಿದ ಗೀತಾ, ಯಾರು ಕ್ಷಮೆ ಕೇಳಿದ್ರೂ ನನ್ನ ಮಗಳು ವಾಪಸ್ ಬರಲ್ಲ. ನನ್ನ ಕಣ್ಣ ಮುಂದೆಯೇ ಮಗಳನ್ನು ಚಾಕುವಿಂದ ಇರಿದು ಕೊಂದು ಹಾಕಿದ. ನನ್ನಿಂದ ಕೇವಲ 10 ಹೆಜ್ಜೆ ದೂರದಲ್ಲಿ ಮಗಳಿದ್ದಳು ಎಂದರು.
ನಾನು ಎಂದಿನಂತೆಯೇ ಅವಳನ್ನು ಕರೆದುಕೊಂಡು ಬರಲು ಕಾರಿನಲ್ಲಿ ಕ್ಯಾಂಪಸ್ಗೆ ಹೋದೆ. ಡಿಗ್ರಿ ಮಾಡುತ್ತಿದ್ದ ಅವನು, ಇವಳು ಇಬ್ಬರು ಕ್ಲಾಸ್ಮೇಟ್ಸ್. ಯಾವಾಗಲೂ ಮದುವೆ ಆಗು, ಲವ್ ಮಾಡು ಎಂದು ಹಿಂದೆ ಬಿದ್ದಿದ್ದ ಎಂದು ನೇಹಾ ನನ್ನ ಬಳಿ ಹೇಳಿಕೊಂಡಿದ್ದಳು. ನಾನು ಓದುತ್ತೇನೆ ಎಂದಿದ್ದಕ್ಕೆ ಮಾಸ್ಟರ್ಸ್ಗೆ ಸೇರಿಸಿದ್ದೆವು. 6 ತಿಂಗಳು ಮನೆಯಲ್ಲೇ ಇದ್ದಳು. ಈಗ ಕಾಲೇಜಿಗೆ ಮತ್ತೆ ಹೋಗುವಾಗ ಹೀಗೆ ಆಗಿದೆ ಎಂದರು.
ನಾವು ಕಾಲೇಜು ಎಂದಮೇಲೆ ಹುಡುಗರು ರೇಗಿಸೋದು ಇದ್ದಿದ್ದೇ ಎಂದು ಸುಮ್ಮನಿದ್ದೆವು. ಇನ್ನೇನು ಫೈನಲ್ ಡಿಗ್ರಿ ಪರೀಕ್ಷೆ ಮುಗಿಯುತ್ತಿದೆ ಎಂದು ಸೈಲೆಂಟ್ ಆಗಿ ಇದ್ದೆವು. ಕೊನೆಗೂ ಮಗಳು ನಮ್ಮನ್ನು ಬಿಟ್ಟು ಹೋದಳು. ಅವನು ಬದುಕೋಕೆ ಲಾಯಕ್ಕು, ಸಾಯಿಸಿಬಿಡಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಒಬ್ಬರಿಗೊಬ್ಬರು ಬಹಳ ಪ್ರೀತಿಸುತ್ತಿದ್ದರು.. ನೇಹಾ, ಫಯಾಜ್ ಲವ್ ಸ್ಟೋರಿ ಬಿಚ್ಚಿಟ್ಟ ಹಂತಕನ ತಾಯಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ