/newsfirstlive-kannada/media/post_attachments/wp-content/uploads/2024/06/Upendra-Dwivedi.jpg)
ಭಾರತೀಯ ಸೇನೆಯ ನೂತನ ಮುಖ್ಯಸ್ಥರನ್ನಾಗಿ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿಯವರನ್ನು ನೇಮಕ ಮಾಡಲಾಗಿದೆ. ಇಂದು ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
26 ತಿಂಗಳ ಅಧಿಕಾರಾವಧಿಯಲ್ಲಿ ಮನೋಜ್​ ಪಾಂಡೆಯವರು ಭಾರತೀಯ ಸೇನೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿದ್ದರು. ಆದರಿಂದು ತನ್ನ ಹುದ್ದೆಯಿಂದ ನಿವೃತ್ತರಾಗಿದ್ದಾರೆ.
ಮನೋಜ್​ ಪಾಂಡೆಯವರು ಮೇ30ರಂದು ನಿವೃತ್ತರಾಗಬೇಕಾಗಿತ್ತು. ಆದರೆ ಸರ್ಕಾರವು ಅವರ ಸೇವೆಯನ್ನು ಹೆಚ್ಚುವರಿ ತಿಂಗಳಿಗೆ ವಿಸ್ತರಿಸಿತು. ಹಾಗಾಗಿ ಜೂನ್​ 30ರವರೆಗೆ ಸೇವೆ ಸಲ್ಲಿಸಲು ಅವರಿಗೆ ಅವಕಾಶ ನೀಡಿತ್ತು. ಮನೋಜ್​ ಪಾಂಡೆಯವರು ನಿವೃತ್ತರಾದಂತೆ ಇತ್ತ ಉಪೇಂದ್ರ ದ್ವಿವೇದಿಯವರು ಅಧಿಕಾರ ಸ್ವೀಕರಿಸಿದ್ದಾರೆ.
ಇದನ್ನೂ ಓದಿ: ದೇವರು ದೊಡ್ಡೋನು, ಕೃತಜ್ಞತೆಯಿಂದ ತಲೆ ಬಾಗುತ್ತೇನೆ.. ವಿರಾಟ್​ ಕೊಹ್ಲಿ ಭಾವುಕ ಪೋಸ್ಟ್​
ಮನೋಜ್​ ಪಾಂಡೆಯವರು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಗೌರವ ಸೂಚಿಸುವ ಮೂಲಕ ತಮ್ಮ ಸೇವೆಗೆ ನಿವೃತ್ತಿ ಘೋಷಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us