newsfirstkannada.com

ಡ್ರಿಂಕ್ ಅಂಡ್ ಡ್ರೈವ್ ನಿಜಾನಾ? ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಂದ್ರಪ್ರಭಗೆ ಹೆಚ್ಚಾಯ್ತು ಸಂಕಟ

Share :

Published September 7, 2023 at 1:07pm

Update September 8, 2023 at 1:23pm

  ಕಾರು ನಿಲ್ಲಿಸದೇ ಸ್ಥಳದಿಂದ ಎಸ್ಕೇಪ್ ಆಗಲಿಲ್ಲ ಎಂದು ಸ್ಪಷ್ಟನೆ ಕೊಟ್ಟ ನಟ!

  ಸಿಸಿಟಿವಿಯಲ್ಲಿ ಸೆರೆಯಾಯ್ತು ಕಾರು ಮತ್ತು ಸ್ಕೂಟರ್​ ಅಪಘಾತದ ದೃಶ್ಯ

  ಬೈಕ್​​ ಸವಾರ ಮಾಲ್ತೇಶ್​ಗೆ ಕುಡಿತದ ಅಭ್ಯಾಸವೇ ಇಲ್ಲವೆಂದ ಅಣ್ಣ ರಘು

ಚಿಕ್ಕಮಗಳೂರು: ಗಿಚ್ಚಿ ಗಿಲಿಗಿಲಿ ಖ್ಯಾತಿಯ ಹಾಸ್ಯನಟ ಚಂದ್ರಪ್ರಭಾ ಅವರ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿ ಹಿಟ್ ಆ್ಯಂಡ್ ರನ್ ಆಕ್ಸಿಡೆಂಟ್ ನಡೆದಿದ್ದು, ಕಾರು ಚಾಲಕ ಬೈಕ್​ಗೆ ಗುದ್ದಿ ಎಸ್ಕೇಪ್ ಆಗಿದ್ದಾರೆ ಎಂದು ಹೇಳಲಾಗಿತ್ತು. ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನು ಓದಿ: ಆಕ್ಸಿಡೆಂಟ್ ಮಾಡಿ ಎಸ್ಕೇಪ್​​ ಆದ್ರಾ ನಟ ಚಂದ್ರಪ್ರಭಾ? ಮಾನವೀಯತೆಗೂ ಗಾಯಾಳನ್ನು ಆಸ್ಪತ್ರೆಗೆ ಸೇರಿಸಲಿಲ್ಲವೇ? ಏನಿದು ಸ್ಟೋರಿ!

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕ್​ ಸವಾರ ಮಾಲ್ತೇಶ್​ನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಇದೀಗ ಗಂಭೀರವಾಗಿ ಗಾಯಗೊಂಡ ಬೈಕ್​ ಸವಾರನ ಸ್ಥಿತಿ ಚಿಂತಾಜನಕವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಮಾಲ್ತೇಶ್ ಹಾಸನದ ಸ್ಪರ್ಶ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮದ್ಯಪಾನ ಮಾಡಿ ಬೈಕ್​​ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಎಂದು ನಟ ಚಂದ್ರಪ್ರಭಾ ಹೇಳಿದ್ದರು. ಮಾಲ್ತೇಶ್​ಗೆ ಕುಡಿತದ ಅಭ್ಯಾಸವೇ ಇರಲಿಲ್ಲ ಎಂದು ಅಣ್ಣ ರಘು ಹೇಳಿಕೆ ನೀಡಿದ್ದಾರೆ. ಚಂದ್ರಪ್ರಭಾ ಮಾಲ್ತೇಶ್ ಕುಡಿದಿದ್ದಾರೆ ಎಂದು ಆರೋಪ ಮಾಡಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ಕುರಿತು ಪ್ರತಿಕ್ರಿಯೆ ನೀಡದ ನಟ ಚಂದ್ರಪ್ರಭಾ,  ಕಾರು ಅಪಘಾತವಾದಾಗ ಚಲಾಯಿಸುತ್ತಿದ್ದದ್ದು ನಾನೇ. ಆದ್ರೆ, ಕೂಡಲೇ ನಾನು ಆತನನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದೆ. ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ನಾನು ಹೊರಟೆ. ಆದ್ರೆ, ಸವಾರ ಮದ್ಯಪಾನ ಮಾಡಿದ್ದ. ನನ್ನದೇನೂ ತಪ್ಪಿಲ್ಲ. ನಾನು ಸ್ಪಂದಿಸಿದ್ದೇನೆ ಅಂತಾ ಚಂದ್ರಪ್ರಭಾ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡ್ರಿಂಕ್ ಅಂಡ್ ಡ್ರೈವ್ ನಿಜಾನಾ? ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಂದ್ರಪ್ರಭಗೆ ಹೆಚ್ಚಾಯ್ತು ಸಂಕಟ

https://newsfirstlive.com/wp-content/uploads/2023/09/accident-9.jpg

Load More