Advertisment

ಗಿಚ್ಚಿ ಗಿಲಿಗಿಲಿ ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಹಾಸ್ಯನಟ ಚಂದ್ರಪ್ರಭ; ಕಾರಣವೇನು?

author-image
Veena Gangani
Updated On
ಗಿಚ್ಚಿ ಗಿಲಿಗಿಲಿ ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಹಾಸ್ಯನಟ ಚಂದ್ರಪ್ರಭ; ಕಾರಣವೇನು?
Advertisment
  • ಮುಂಚಿನ ಚಂದ್ರಪ್ರಭ ಅವರು ಜಾಸ್ತಿ ಕಾಣಿಸಿಕೊಳ್ಳುತ್ತಿಲ್ಲ ಏಕೆ ಎಂದ ಅಭಿಮಾನಿ
  • ಗಿಚ್ಚಿ ಗಿಲಿಗಿಲಿ ಶೋ ಮೂಲಕ ಅಭಿಮಾನಿಗಳ ಮನಸ್ಸನ್ನು ಗೆದಿದ್ದಾರೆ ಹಾಸ್ಯ ನಟ
  • ಎಲ್ಲರನ್ನೂ ನಗಿಸೋ ಕಲಾವಿದರ ಹಿಂದೆ ಹೇಳಿಕೊಳ್ಳಲಾಗದಂತಹ ನೋವಿರುತ್ತದೆ

ವೀಕ್ಷಕರನ್ನು ನಕ್ಕು ನಗಿಸೋ ಕಲಾವಿದರ ಹಿಂದೆ ಅವರಿಗೆ ಹೇಳಿಕೊಳ್ಳಲಾಗದ ನೋವು ತುಂಬಿರುತ್ತೆ. ವೀಕ್ಷಕರನ್ನ ನಗಿಸುವ ಉದ್ದೇಶದಿಂದ ಆ ನೋವನ್ನ ಮರೆತು ಇಡೀ ಕರುನಾಡನ್ನ ನಕ್ಕು ನಗಿಸುತ್ತಾ ಇರುತ್ತಾರೆ ಅದರಲ್ಲೂ ಕಾಮಿಡಿ ಕಲಾವಿದರು. ಹೀಗೆ ಜನರನ್ನು ಹೊಟ್ಟೆ ತುಂಬಾ ನಕ್ಕು ನಲಿಸಿ ಜನ ಮೆಚ್ಚಿದ ಕಾಮಿಡಿಯನ್​ ಅವಾರ್ಡ್​ ಗೆದ್ದಿದ್ದ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಂದ್ರಪ್ರಭ ಅವರು ಮತ್ತೆ ಬೇಸರ ಹೊರ ಹಾಕಿದ್ದಾರೆ.

Advertisment

publive-image

ಇದನ್ನೂ ಓದಿ: VIDEO: ಅಪ್ರಾಪ್ತೆಯ ರುಂಡ ಕತ್ತರಿಸಿ ಬಂದ ಮಗ ಅಮ್ಮನ ಬಳಿ ಏನಂದ? ಕೃತ್ಯ ನೆನೆದು ಬಿಕ್ಕಿ ಬಿಕ್ಕಿ ಅತ್ತ ಆರೋಪಿಯ ತಂದೆ

ಹೌದು, ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಗಿಚ್ಚಿ ಗಿಲಿಗಿಲಿ ವೇದಿಕೆ ಮೇಲೆ ಹಾಸ್ಯ ನಟ ಚಂದ್ರಪ್ರಭ ಅವರು ಕಣ್ಣೀರು ಹಾಕಿದ್ದಾರೆ. ಹೀಗೆ ಚಂದ್ರಪ್ರಭ ಅವರಿಗೆ ಅಭಿಮಾನಿಯೊಬ್ಬರು ಲೆಟರ್​ವೊಂದನ್ನು ಬರೆದಿದ್ದಾರೆ. ಇನ್ನು ಆ ಲೆಟರ್​ನಲ್ಲಿ ಚಂದ್ರಪ್ರಭ ಅವರ ಕಾಮಿಡಿಯನ್ನು ನಾವೆಲ್ಲರೂ ತುಂಬಾ ಮಿಸ್​ ಮಾಡಿಕೊಳ್ಳತ್ತಿದ್ದೇವೆ. ಮುಂಚಿನ ಚಂದ್ರಪ್ರಭ ಅವರು ಜಾಸ್ತಿ ಕಾಣಿಸಿಕೊಳ್ಳುತ್ತಿಲ್ಲ ಏಕೆ ಅಂತಾ ಲೆಟರ್​ನಲ್ಲಿ ಬರೆದಿದ್ದಾರೆ. ಇದಕ್ಕೆ ಉತ್ತರ ನೀಡಿದ ಚಂದ್ರಪ್ರಭ ಅವರು, ನಾಲ್ಕೈದು ವಾರದಿಂದ ಎಲ್ಲರೂ ಅದೇ ಕೇಳುತ್ತಿದ್ದಾರೆ. ನಾನು ಮಾಡುವ ಕೆಲಸ ವರ್ಕ್​ ಆಗುತ್ತಿಲ್ವ ಅಂತ ಎಲ್ಲರ ಮುಂದೆ ಕಣ್ಣೀರು ಹಾಕಿದ್ದಾರೆ.

Advertisment

ಆದರೆ ಇದೇ ವಿಡಿಯೋ ನೋಡಿದ ಅಭಿಮಾನಿಗಳು, ಹಾಗೇನು ಇಲ್ಲ ಅತ್ಯುತ್ತಮ ಹಾಸ್ಯ ಕಲಾವಿದ ಚಂದ್ರಪ್ರಭ ಅವರು. ನಮ್ಮನ್ನು ನಕ್ಕು ನಗಿಸುವ ಇವರೆಲ್ಲರೂ ಸದಾ ನಗ್ತಾ ಇರಬೇಕು. ಚಂದ್ರಪ್ರಭಾ ನೀವು ಅದ್ಭುತ ಹಾಸ್ಯ ಕಲಾವಿದ. ನಮ್ಮ ಮನೆಯಲ್ಲಿ ನಾವೆಲ್ಲರೂ ನಿಮಗಾಗಿ ಗಿಚ್ಚಿಗಿಲಿಗಿಲಿ ನೋಡುತ್ತೇವೆ. ಗಿಚ್ಚಿ ಗಿಲಿ ಅಂದ್ರೆ ಚಂದ್ರಪ್ರಭಾ. ಚಂದ್ರಪ್ರಭಾ ಅಂದ್ರೆ ಗಿಚ್ಚಿಗಿಲಿ ಗಿಲಿ ಅಂತಾ ಕಾಮೆಂಟ್​ ಮಾಡುವ ಮೂಲಕ ಧೈರ್ಯ ತುಂಬುತ್ತಿದ್ದಾರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment