Advertisment

ದುಬಾರಿ ಕಾರನ್ನು ಖರೀದಿಸಿದ ಗಿಚ್ಚಿ ಗಿಲಿಗಿಲಿ ಪ್ರಶಾಂತ್ ಗೌಡ; ಅದರ ಬೆಲೆ ಎಷ್ಟು ಗೊತ್ತಾ?

author-image
Veena Gangani
Updated On
ದುಬಾರಿ ಕಾರನ್ನು ಖರೀದಿಸಿದ ಗಿಚ್ಚಿ ಗಿಲಿಗಿಲಿ ಪ್ರಶಾಂತ್ ಗೌಡ; ಅದರ ಬೆಲೆ ಎಷ್ಟು ಗೊತ್ತಾ?
Advertisment
  • ರೀಲ್ಸ್​ ಮಾಡುತ್ತಾ ನೆಟ್ಟಿಗರನ್ನು ರಂಜಿಸುತ್ತ ಇರುತ್ತಾರೆ ಪ್ರಶಾಂತ್​ ಗೌಡ
  • ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಈ​ ವಿಡಿಯೋ
  • ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಮೂಲಕ ಫೇಮಸ್ ಆಗಿದ್ದ ಕಲಾವಿದ

ದೇವರು ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಟ್ಯಾಲೆಂಟ್​ ಕೊಟ್ಟಿರುತ್ತಾನೆ. ಅದನ್ನು ಸರಿಯಾದ ಸಮಯದಲ್ಲಿ ಉಪಯೋಗ ಮಾಡಿಕೊಂಡರೇ ಆ ಪ್ರತಿಭೆ​ಗೆ ಒಂದು ಬೆಲೆ ಬರುತ್ತದೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್​, ಒಂದೊಳ್ಳೆ ಕಂಟೆಂಟ್ ಇಟ್ಟುಕೊಂಡು ರೀಲ್ಸ್​ ಮಾಡುತ್ತಿದ್ದರು ಟ್ಯಾಲೆಂಟೆಡ್ ಕಲಾವಿದ ಪ್ರಶಾಂತ್​ ಗೌಡ.

Advertisment

ಇದನ್ನೂ ಓದಿ: ಲವ್ವರ್ ಜೊತೆ ಸೇರಿ ಗಂಡನ ಉಸಿರು ನಿಲ್ಲಿಸಿದ ಹೆಂಡತಿ.. ಸುಂದರಿ ಡ್ರಾಮಾ ಮಾಡಿ ಸಿಕ್ಕಿಬಿದ್ದಿದ್ದು ಹೇಗೆ?

ಬಳಿಕ ಇವರ ಟ್ಯಾಲೆಂಟ್​ ಅನ್ನು ದುಪಟ್ಟು ಮಾಡಲು ಗಿಚ್ಚಿ ಗಿಲಿಗಿಲಿ ವೇದಿಕೆ ಅವಕಾಶ ಮಾಡಿಕೊಟ್ಟಿತ್ತು. ಇದೇ ಗಿಚ್ಚಿ ಗಿಲಿಗಿಲಿ ಶೋ ಮೂಲಕ ಪ್ರಶಾಂತ್​ ಗೌಡ ಕನ್ನಡಿಗರ ಮನೆ ಮಾತಾಗಿದ್ದಾರೆ. ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಸೀಸನ್​ 3 ಮೂಲಕ ಖ್ಯಾತಿ ಪಡೆದುಕೊಂಡು ತಮ್ಮ ಕಾಮಿಡಿ ಮೂಲಕ ಫೇಮಸ್​ ಆಗಿದ್ದಾರೆ.

publive-image

ಆಗಾಗ ಗಿಚ್ಚಿ ಗಿಲಿಗಿಲಿ ವೇದಿಕೆ ಮೇಲೆ ಸಹ ಕಲಾವಿದರು ಪ್ರಶಾಂತ್ ಗೌಡ ಮೇಲೆ ಪ್ರಾಂಕ್ ಮಾಡುತ್ತಾ ಇರುತ್ತಾರೆ. ಪದೇ ಪದೇ ಬಕ್ರಾ ಮಾಡಿದರೂ, ಸ್ಪೋರ್ಟಿವ್ ಆಗಿಯೇ ಸ್ವೀಕರಿಸಿ ಎಲ್ಲರ ಮೆಚ್ಚುಗೆ ಗಳಿಸುತ್ತಾ ಇರುತ್ತಾರೆ. ಆದರೆ ಇದೀಗ ಪ್ರಶಾಂತ್ ಗೌಡ ಅವರ ಮನೆಗೆ ಹೊಸ ಅತಿಥಿ ಆಗಮನವಾಗಿದೆ.

Advertisment

ಇದನ್ನೂ ಓದಿ:ಗಿಚ್ಚಿ ಗಿಲಿಗಿಲಿ ಪ್ರಶಾಂತ್​ ಡ್ಯಾನ್ಸ್​ಗೆ ನೆಟ್ಟಿಗರು ಫಿದಾ; ನೀನು ಮಲ್ಟಿ ಟ್ಯಾಲೆಂಟೆಡ್ ಕಲಾವಿದ ಕಣಯ್ಯಾ ಎಂದ ಫ್ಯಾನ್

ಹೌದು, ಪ್ರಶಾಂತ್ ಗೌಡ ಅವರು ಹೊಚ್ಚ ಹೊಸ ಬೀಸ್ಟ್ ಟಾಟಾ CURVV ಕಾರನ್ನು ಖರೀದಿ ಮಾಡಿದ್ದಾರೆ. ಈ BEAST TATA CURVV ಕಾರಿನ ಬೆಲೆಯೂ 9,99,990 ಲಕ್ಷದ್ದಾಗಿದೆ. ಇನ್ನೂ ಹೊಸ ಕಾರನ್ನು ಖರೀದಿ ಮಾಡಿದ ವಿಡಿಯೋವನ್ನು ಪ್ರಶಾಂತ್ ಗೌಡ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ಪ್ರಶಾಂತ್ ಗೌಡ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment