ಗಿಚ್ಚಿ ಗಿಲಿಗಿಲಿಯಲ್ಲಿ ಸೀಸನ್ 2 ಮೂಲಕ ಫೇಮಸ್ ಆಗಿದ್ದ ಧನರಾಜ್ ಆಚಾರ್ಯ
ಹೊಸ ಕಾಮಿಡಿಗಳ ಮೂಲಕ ನೆಟ್ಟಿಗರನ್ನು ನಕ್ಕು ನಗಿಸುತ್ತಾರೆ ಈ ಸ್ಟಾರ್ ಜೋಡಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ ಧನರಾಜ್ ಕಾಮಿಡಿ
ವಿಭಿನ್ನ ಮ್ಯಾನರಿಸಂನಿಂದ ಕಾಮಿಡಿ ಮಾಡುವ ಮೂಲಕ ಎಲ್ಲರನ್ನೂ ನಕ್ಕು ನಲಿಸುವ ಕಲಾವಿದ ಎಂದರೆ ಧನರಾಜ್ ಆಚಾರ್ಯ. ಸದ್ಯ ಧನರಾಜ್ ಆಚಾರ್ಯ ಅವರು ಅಭಿಮಾನಿಗಳಿಗೆ ಗುಡ್ನ್ಯೂಸ್ವೊಂದನ್ನು ಕೊಟ್ಟಿದ್ದಾರೆ. ಹೊಸ ಹೊಸ ಕಾಮಿಡಿಗಳನ್ನು ಕ್ರಿಯೇಟ್ ಮಾಡಿ ನೆಟ್ಟಿಗರನ್ನು ನಕ್ಕು ನಲಿಸುತ್ತಿದ್ದ ಧನರಾಜ್ ಆಚಾರ್ಯ ಹಾಗೂ ಪ್ರಜ್ಞಾ ಆಚಾರ್ಯ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಸದ್ಯ ವಿಚಾರನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಧನರಾಜ್ ಆಚಾರ್ಯ ಅವರು ತಮ್ಮ ವಿಭಿನ್ನ ಕಾಮಿಡಿಯಿಂದ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದಾರೆ. ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಸೀಸನ್ 2ನಲ್ಲಿ ಕಂಟೆಸ್ಟೆಂಟ್ ಆಗಿದ್ದರು. ತಮ್ಮ ಕುಟುಂಬಸ್ಥರ ಜೊತೆ ಸೇರಿಕೊಂಡು ಕಂಟೆಂಟ್ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು. ಧನರಾಜ್ ಆಚಾರ್ಯ ವಿಭಿನ್ನ ಕಾಮಿಡಿ ಮ್ಯಾನರಿಸಂಗೆ ನೆಟ್ಟಿಗರು ಮನಸೋತಿದ್ದರು. ಒಂದು ಸಮಯದಲ್ಲಿ ಹಾಸ್ಯ ನಟ ಧನರಾಜ್ ಆಚಾರ್ಯ ಕಾಮಿಡಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದವು.
View this post on Instagram
ಇದರಿಂದ ಧನರಾಜ್ ಆಚಾರ್ಯ ಅವರು ಗಿಚ್ಚಿ ಗಿಲಿಗಿಲಿ ಶೋಗೆ ಎಂಟ್ರಿ ಕೊಟ್ಟಿದ್ದರು. ಈ ಶೋನಲ್ಲಿಯೂ ಕೂಡ ಧನರಾಜ್ ಸಖತ್ ಕಾಮಿಡಿ ಮಾಡುವ ಮೂಲಕ ತನ್ನದೆ ಆದ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಇವರ ಜೊತೆಗೆ ಪತ್ನಿ ಪ್ರಜ್ಞಾ ಕೂಡ ಗಿಚ್ಚಿ ಗಿಲಿಗಿಲಿಯಲ್ಲಿ ಌಂಕರ್ ಸ್ಕ್ರಿಟ್ ಮಾಡಿದ್ದರು.
ಇನ್ನು ಪ್ರಜ್ಞಾ ಆಚಾರ್ಯ ಹಾಗೂ ಧನರಾಜ್ ಆಚಾರ್ಯ ಅವರಿಗೆ ಸಂಬಂಧಿಕರು ಗುಡ್ನ್ಯೂಸ್ ಇಲ್ವಾ ಅಂತ ತಮಾಷೆ ಮಾಡುತ್ತಿದ್ದರು. ಇದೀಗ ದಂಪತಿ ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಧನರಾಜ್ ಆಚಾರ್ಯ ದಂಪತಿಗೆ ಶುಭ ಹಾರೈಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ