newsfirstkannada.com

×

‘ಅಮ್ಮ ಹರ್ಟ್​ ಆಗ್ತಾರೆ ಅಂತ ಭಯ ಇತ್ತು‘.. ಗಿಚ್ಚಿ ಗಿಲಿಗಿಲಿ ವಿನ್ನರ್​ ಹುಲಿ ಕಾರ್ತಿಕ್ ಹೀಗ್ಯಾಕೆ ಹೇಳಿದ್ರು?

Share :

Published September 19, 2024 at 9:49am

    ಕೊನೆಗೂ ಗಿಚ್ಚಿ ಗಿಲಿಗಿಲಿ ಶೋ ವಿನ್ನರ್ ಆದ ಹುಲಿ ಕಾರ್ತಿಕ್

    ಕನ್ನಡ ಕಿರುತೆರೆಯ ಅದ್ಭುತವಾಗಿ ಮೂಡಿ ಬಂದಿತ್ತು ಗಿಚ್ಚಿ ಗಿಲಿಗಿಲಿ

    ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದ ಹುಲಿ ಕಾರ್ತಿಕ್

ಕನ್ನಡ ಕಿರುತೆರೆಯ ಅದ್ಭುತವಾಗಿ ಮೂಡಿ ಬಂದಿತ್ತು ಗಿಚ್ಚಿ ಗಿಲಿಗಿಲಿ ಶೋ. ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದ ಹುಲಿ ಕಾರ್ತಿಕ್​ ಗಿಚ್ಚಿಗಿಲಿಗಿಲಿ ಸೀಸನ್ 3 ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಕಲರ್ಸ್ ಸೂಪರ್​ನಲ್ಲಿ ಮೂಡಿ ಬರುತ್ತಿದ್ದ ಮಜಾ ಭಾರತ, ಬಳಿಕ ಗಿಚ್ಚಿ ಗಿಲಿಗಿಲಿ ಶೋ ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದರು. ಬರೋಬ್ಬರಿ 8 ವರ್ಷದ ಬಳಿಕ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಇದನ್ನೂ ಓದಿ: ಗಿಚ್ಚಿ ಗಿಲಿಗಿಲಿ ಗೆದ್ದ ಹುಲಿ ಕಾರ್ತಿಕ್, ರನ್ನರ್-ಅಪ್ ಯಾರು? ಸಿಕ್ಕ ಹಣವೆಷ್ಟು?

ಹುಲಿ ಕಾರ್ತಿಕ್​ ವಿನ್ನರ್​ ಪಟ್ಟ ಗಿಟ್ಟಿಸಿಕೊಳ್ಳುತ್ತಿದ್ದಂತೆ, ಸ್ನೇಹಿತರು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇದೇ ಖುಷಿಯಲ್ಲಿದ್ದ ಹುಲಿ ಕಾರ್ತಿಕ್ ಅವರು ನ್ಯೂಸ್​ಫಸ್ಟ್​ನೊಂದಿಗೆ ಮಾತಾಡಿದ್ದಾರೆ. ಅದರಲ್ಲೂ ಗ್ರ್ಯಾಂಡ್​ ಫಿನಾಲೆಗೆ ಅಮ್ಮನನ್ನು ಏಕೆ ಕರೆದುಕೊಂಡು ಹೋಗಲಿಲ್ಲ ಎಂಬ ವಿಚಾರದ ಬಗ್ಗೆಯೂ ಮಾತಾಡಿದ್ದಾರೆ.

ಅಮ್ಮನಿಗೆ ತುಂಬಾ ಖುಷಿಯಾಗಿದೆ. ಪ್ರತಿ ವರ್ಷವೂ ಅಮ್ಮ ಗೆದ್ದೆ ಗೆಲ್ಲುತ್ತೀಯಾ, ನಿಮ್ಮ ಗೆಳೆಯರು ಚೆನ್ನಾಗಿ ಮಾಡಿದ್ದಾರೆ ಅಂತ ಹೇಳುತ್ತಿದ್ದರು. ಮೂರು ವರ್ಷದಿಂದಲೂ ಚೆನ್ನಾಗಿ ಮಾಡಿಕೊಂಡು ಬಂದಿದ್ದೀಯಾ. ಈ ವರ್ಷ ನಿನಗೆ ಸಿಗಬಹುದು ಕಣೋ ಅಂತ ಹೇಳಿದ್ರು. ದೇವರಿಗೆ ಬೇಡಿಕೊಂಡಿದ್ದರಂತೆ, ಪೂಜೆ ಮಾಡಿಸಿದ್ದರಂತೆ. ಆದರೆ ನಾನು ಗೆದ್ದಾಗ ಮನೆಯಲ್ಲಿದ್ದರು. ತುಂಬಾ ಖುಷಿ ಪಟ್ಟರಂತೆ. ಆದರೆ ನಾನು ಗ್ರ್ಯಾಂಡ್​ ಫಿನಾಲೆಗೆ ಏಕೆ ಕರೆದುಕೊಂಡು ಬಂದಿಲ್ಲ ಅಂದ್ರೆ, ನನಗೆ ಒಂದು ಭಯ ಇತ್ತು. ನಾನು ಅವರನ್ನು ಕರೆದುಕೊಂಡು ಹೋದರೆ ಗೆದ್ದು ಗೆಲ್ಲುತ್ತೇನೆ ಅಂತ ಅಂದುಕೊಳ್ಳುತ್ತಾರೆ. ಆಗ ನಾನು ಗೆಲ್ಲಲಿಲ್ಲ ಅಂದ್ರೆ ಅವರು ಬೇಸರ ಆಗ್ತಾರೆ ಅಂತ ಕರೆದುಕೊಂಡು ಬಂದಿಲ್ಲ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಅಮ್ಮ ಹರ್ಟ್​ ಆಗ್ತಾರೆ ಅಂತ ಭಯ ಇತ್ತು‘.. ಗಿಚ್ಚಿ ಗಿಲಿಗಿಲಿ ವಿನ್ನರ್​ ಹುಲಿ ಕಾರ್ತಿಕ್ ಹೀಗ್ಯಾಕೆ ಹೇಳಿದ್ರು?

https://newsfirstlive.com/wp-content/uploads/2024/09/huli-katik.jpg

Load More