Advertisment

ಆ ಸೀರಿಯಲ್​ ಶೂಟಿಂಗ್ ವೇಳೆ ನಾನು ಡಿಪ್ರೆಶನ್​ಗೆ ಹೋಗಿದ್ದೆ; ನಯನಾ ನಾಗಾರಾಜ್ ಶಾಕಿಂಗ್​ ಹೇಳಿಕೆ

author-image
Veena Gangani
Updated On
ಗಿಣಿರಾಮ ಸೀರಿಯಲ್ ನಾನೇ​ ಬಿಟ್ಟು ಬಂದೆ- ಕಹಿ ಘಟನೆ ಬಗ್ಗೆ ನಟಿ ನಯನಾ ನಾಗರಾಜ್​ ಹೇಳಿದ್ದೇನು?
Advertisment
  • ಸೀರಿಯಲ್ ಶೂಟಿಂಗ್‌ನ ಕಹಿ ಘಟನೆ ಬಗ್ಗೆ ನಯನಾ ನಾಗಾರಾಜ್ ಬೇಸರ
  • ಶೂಟಿಂಗ್‌ಗೆ ಹೋಗಬೇಕಾ ಅಂತಾ ಮನೆಯಲ್ಲಿ ಕುಳಿತುಕೊಂಡು ಅಳುತ್ತಿದ್ದೆ
  • ಆಫ್‌ಸ್ಕ್ರೀನ್‌ನಲ್ಲಿ ಏನೇನಾಯ್ತು ಅನ್ನೋದನ್ನ ಎಳೆಎಳೆಯಾಗಿ ಬಿಚ್ಚಿಟ್ಟ ನಟಿ

ಉತ್ತರ ಕರ್ನಾಟಕ ಭಾಷೆಯ ಸೊಗಡನ್ನ ಹೊಂದಿದ್ದ ಗಿಣಿರಾಮ ಸೀರಿಯಲ್​​ ಅನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಬಂದ ಮೊದಲ ಎಪಿಸೋಡ್​ನಿಂದ ಗಿಣಿರಾಮ ಧಾರಾವಾಹಿಯು ಎಲ್ಲರ ನೆಚ್ಚಿನ ಸೀರಿಯಲ್ ಆಗಿತ್ತು. ಬಣ್ಣದ ಜಗತ್ತು ನೋಡೋಕೆ ತುಂಬಾನೇ ಕಲರ್​ಫುಲ್​. ಆದ್ರೆ, ಅದಕ್ಕೆ ಇನ್ನೊಂದು ಮುಖವೇ ಇದೇ. ಟಿವಿಯಲ್ಲಿ ಕಾಣಿಸುವಂತೆ ಅಲ್ಲಿ ಸುಂದರ ವಾತಾವರಣ ಇರೋದಿಲ್ಲ. ಕಿವಿಗೆ ಇಂಪಾಗುವ ಡೈಲಾಗ್‌ಗಳು ಇರೋದಿಲ್ಲ. ಪರದೆಯಲ್ಲಿ ಕಾಣಿಸುವಂತಹ ಶುಭ್ರತೆ ಅಂತೂ ಇರೋದೇ ಇಲ್ಲ ಅಂತಾ ಕಿರುತೆರೆಯ ಜನಪ್ರಿಯ ನಟಿ ಆರೋಪಗಳ ಮಳೆ ಸುರಿದಿದ್ದಾರೆ.

Advertisment

ಇದನ್ನೂ ಓದಿ: ರಿಷಿ ಸುನಕ್ ಭಾಷಣದ ವೇಳೆ ಟ್ರೋಲ್ ಆದ ಪತ್ನಿ ಅಕ್ಷತಾ ಮೂರ್ತಿ.. ಕಾರಣ ಏನು ಗೊತ್ತಾ..?

publive-image

ಹೌದು, ಗಿಣಿರಾಮ ಸೀರಿಯಲ್ ವೈಂಡಪ್ ಆಗಿ ಒಂದು ವರ್ಷವಾಯ್ತು. ಆದರೂ ಈ ಸೀರಿಯಲ್‌ನ ನೆನಪಿಸಿಕೊಳ್ಳುವವರು ತುಂಬಾನೇ ವೀಕ್ಷಕರಿದ್ದಾರೆ. ನಯನಾ ನಾಗರಾಜ್‌ ಗಿಣಿರಾಮ ಸೀರಿಯಲ್​​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದರು. ಆದರೆ ಈಗ ಇದೇ ಸೀರಿಯಲ್​ ಮೇಲೆ ನಯನಾ ನಾಗರಾಜ್‌ ಗಂಭೀರ ಆರೋಪ ಮಾಡಿದ್ದಾರೆ. ಗಿಣಿರಾಮ ಧಾರವಾಹಿಯ ನಟಿ ನಯನಾ ನಾಗಾರಾಜ್ ಅವರು ಕೆಲವೊಂದು ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದಾರೆ. ಆನ್​ಸ್ಕ್ರೀನ್​ನಲ್ಲಿ ವೀಕ್ಷಕರ ಮುಂದೆ ಎಲ್ಲರೂ ಕಲರ್​ ಕಲರ್​ ಆಗಿ ಕಾಣಿಸುತ್ತಾರೆ. ಆದರೆ ಅದೇ ಆಫ್‌ಸ್ಕ್ರೀನ್‌ನಲ್ಲಿ ಏನೇನಾಯ್ತು ಅನ್ನೋದನ್ನ ನಯನಾ ಭಾವುಕರಾಗಿ ಹೇಳಿಕೊಂಡಿದ್ದಾರೆ.

publive-image

ರೇಡಿಯೋ ಸಿಟಿಗೆ ನೀಡಿರೋ ಸಂದರ್ಶನದಲ್ಲಿ ಮಾತನಾಡಿರೋ ನಯನಾ ನಾಗರಾಜ್‌, ಶೂಟಿಂಗ್‌ ಸಮಯದಲ್ಲಾಗಿರುವ ಅನೇಕ ನೋವಿನ ಸಂಗತಿಗಳನ್ನ ಹೇಳಿಕೊಂಡಿದ್ದಾರೆ. ಅದರಲ್ಲಿ ಪ್ರಮುಖವಾದದ್ದು ಕೋವಿಡ್ ಎರಡನೇ ಅಲೆಯಲ್ಲಿ ನಡೆದಂತಹ ಘಟನೆ. ಕೋವಿಡ್‌ ಪಾಸಿಟಿವ್ ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ಅವರನ್ನ ಶೂಟಿಂಗ್‌ಗೆ ಬಲವಂತವಾಗಿ ಕರೆಸಿಕೊಂಡರಂತೆ. ನನ್ನ ತಾಯಿಗೆ ಪಾಸಿಟಿವ್ ಆಗಿದೆ. ನನಗೂ ಪಾಸಿಟಿವ್ ಆಗಿರಬಹುದು. ನನ್ನಿಂದ ಬೇರೆಯವರಿಗೆ ತೊಂದರೆಯಾಗಬಹುದು ಅಂತ ಹೇಳಿದ್ರೂ ಕೇಳಲಿಲ್ಲವಂತೆ. ಪಾಸಿಟಿವ್‌ವೆಂದು ರಿಸಲ್ಟ್ ಬಂದ ನಂತರ ಸೀರಿಯಲ್ ತಂಡದ ವರಸೇನೇ ಬದಲಾಯ್ತು ಅಂತಾ ನಯನಾ ಆರೋಪಿಸಿದ್ದಾರೆ. ಜೊತೆಗೆ ಗಿಣಿರಾಮ ಸೀರಿಯಲ್‌ನನ್ನು ನಾನೇ ಕ್ವಿಟ್ ಮಾಡಿದ್ದು. ಈ ತೀರ್ಮಾನ ತೆಗೆದುಕೊಂಡು ನಂತರ, ಆ ವ್ಯಕ್ತಿ ನನ್ನ ಜೀವನ ಹಾಳು ಮಾಡೋಕೆ ಪ್ರಯತ್ನ ಪಟ್ಟರು ಅಂತಾ ನಯನಾ ಆರೋಪಿಸಿದ್ದಾರೆ. ಆದ್ರೆ, ಆ ವ್ಯಕ್ತಿ ಯಾರು ಎಂದು ನಟಿ ಬಹಿರಂಗಗೊಳಿಸಿಲ್ಲ.

Advertisment

ಇದನ್ನೂ ಓದಿ: ಒಂದು ಕೋಟಿ ರೂ ಮೌಲ್ಯದ ಮನೆ, Audi car.. ಅಬ್ಬಬ್ಬಾ! ಶ್ರೀಮಂತ ಕಳ್ಳನ ಬಂಧಿಸಿ ಬೆಚ್ಚಿಬಿದ್ದ ಪೊಲೀಸರು..!

publive-image

ಇದಷ್ಟೇ ಅಲ್ಲ, ಶೂಟಿಂಗ್ ಸಮಯದಲ್ಲಿ ನಾನು ಡಿಪ್ರೆಶನ್​ಗೆ ಹೋಗಿದ್ದೇ ಅಂತಾನೂ ಆರೋಪಿಸಿದ್ದಾರೆ. ಶೂಟಿಂಗ್‌ಗೆ ಹೋಗಬೇಕಾ ಅಂತಾ ನಾನು ಮನೆಯಲ್ಲಿ ಕುಳಿತುಕೊಂಡು ಅಳುತ್ತಿದ್ದೆ ಅಂತಾ ಹೇಳಿದ್ದಾರೆ. ಶೂಟಿಂಗ್‌ ಸ್ಥಳದಲ್ಲಿ ಕೆಲಸ ಮಾಡೋರು ನನಗೆ ಗುಡ್ ಮಾರ್ನಿಂಗ್ ಅಂತಾ ಹೇಳಿದ್ದಕ್ಕೆ ಆ ಹುಡುಗನಿಗೆ ಬೈದ್ದಿದ್ದು ಇದೇ ಅಂತಾ ನಯನಾ ಹೇಳಿದ್ದಾರೆ. ಶೂಟಿಂಗ್ ನಡೆಯುವ ಸಮಯದಲ್ಲಿ ನಡೆದ ಇನ್ನೊಂದು ಕಹಿ ಘಟನೆಯನ್ನೂ ನಯನಾ ರೀ-ಕಾಲ್ ಮಾಡಿಕೊಂಡಿದ್ದಾರೆ. ಆ ಘಟನೆಯಿಂದ ಅವರ ತೀವ್ರವಾಗಿ ನೊಂದಿದ್ದರಂತೆ. ಈ ರೀತಿಯ ಘಟನೆಗಳು ನಡೆದಾಗ ಕಲಾವಿದರು ಧ್ವನಿ ಎತ್ತುವುದಿಲ್ಲ. ನಾನು ಇಂತಹ ವಿಚಾರಗಳ ಬಗ್ಗೆ ವಾಯ್ಸ್ ರೈಸ್ ಮಾಡ್ತೀನಿ ಹಾಗಾಗಿ, ನಾನು ಕೆಟ್ಟವಳಾಗಿ ಕಂಡೆ ಅಂತಾ ನಯನಾ ಹೇಳಿದ್ದಾರೆ. ಆದ್ರೆ, ಯಾರಿಂದ ಸಮಸ್ಯೆಯಾಯ್ತು ಅನ್ನೋದನ್ನ ರಿವೀಲ್ ಮಾಡಿಲ್ಲ. ಒಟ್ಟಾರೆಯಾಗಿ ನಯನಾ ಅವರ ಆರೋಪಗಳು ಇಂಡಸ್ಟ್ರಿಯ ಇನ್ನೊಂದು ಮುಖವನ್ನ ತೆರೆದಿಟ್ಟಿರುವಂತದ್ದು ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment