/newsfirstlive-kannada/media/post_attachments/wp-content/uploads/2024/04/KPL-GIRL-1.jpg)
ಕೊಪ್ಪಳ: ಫೋನಿನಲ್ಲಿ ಯುವಕನ ಕಿರುಕುಳ ತಾಳಲಾರದೇ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳದ ಉಚ್ಚಲಕುಂಟ ಗ್ರಾಮದಲ್ಲಿ ನಡೆದಿದೆ. ಆರೋಪಿ ಬಂಧನಕ್ಕೆ ಆಗ್ರಹಿಸಿ ಪೊಲೀಸ್ ಠಾಣೆ ಎದುರು ಬಾಲಕಿಯ ಶವವಿಟ್ಟು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಪುರುಷೋತ್ತಮ ಎನ್ನುವ ಯುವಕ ಪೂಜಾಳ ಮನೆಯ ಮೊಬೈಲ್​ಗೆ ಕರೆ ಮಾಡುತ್ತಿದ್ದ. ಬೇರೊಂದು ನಂಬರ್ ಮೂಲಕ ಹಲವು ಬಾರಿ ಕಾನ್ಫರೆನ್ಸ್ ಕಾಲ್ ಮಾಡಿ ಕಿರುಕುಳ ನೀಡುತ್ತಿದ್ದ. ಯುವಕನ ಕಿರುಕುಳ ತಾಳಲಾರದೇ ಎಪ್ರಿಲ್ 7 ರಂದು ಪೂಜಾ ವಿಷ ಸೇವಿಸಿದ್ದಳು ಎಂದು ಪೋಷಕರು ಆರೋಪಿಸಿದ್ದಾರೆ.
ಇದನ್ನೂ ಓದಿ:ಮೇಲ್ಸೇತುವೆಯಿಂದ ಬಸ್ ಪಲ್ಟಿ, ಐವರು ಸಾವು.. 38 ಪ್ರಯಾಣಿಕರು ಗಂಭೀರ
ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಪೂಜಾ ಸಾವನ್ನಪ್ಪಿದ್ದಾಳೆ. ಈ ಹಿನ್ನೆಲೆಯಲ್ಲಿ ಆರೋಪಿ ಪುರಷೋತ್ತಮನ ಬಂಧನಕ್ಕೆ ಆಗ್ರಹಿಸಿರುವ ಉಚ್ಚಲಕುಂಟ ಗ್ರಾಮಸ್ಥರು ಬೇವೂರು ಪೊಲೀಸ್ ಠಾಣೆ ಎದುರು ಪೂಜಾ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us