ಪ್ರಿಯಕರನ ಜೊತೆ ಮದುಮಗಳು ಪರಾರಿ.. ಕಣ್ಣೀರು ಇಡುತ್ತ ಪೊಲೀಸರ ಬಳಿ ಬಂದ ಪೋಷಕರು

author-image
Ganesh
Updated On
ಪ್ರಿಯಕರನ ಜೊತೆ ಮದುಮಗಳು ಪರಾರಿ.. ಕಣ್ಣೀರು ಇಡುತ್ತ ಪೊಲೀಸರ ಬಳಿ ಬಂದ ಪೋಷಕರು
Advertisment
  • ಮದುಮಗನಿಗೆ ಕೈಕೊಟ್ಟ ಮದುಮಗಳು.. ಅಷ್ಟಕ್ಕೂ ಆಗಿದ್ದೇನು?
  • ಮದುವೆ ಕಾರ್ಡ್​ ಹಂಚಿ, ಸಂಬಂಧಿಕರಿಗೆಲ್ಲ ಕರೆದಿದ್ದ ಪೋಷಕರು
  • ಮದುವೆ ಕಾರ್ಯಕ್ಕೆ ದಿನಸಿ ತರಲು ಮಾರ್ಕೆಟ್​ಗೆ ಹೋದಾಗ ಪರಾರಿ

ಮದುವೆ ತಯಾರಿ ನಡೆಯುತ್ತಿದ್ದ ವೇಳೆ ಮದುಮಗಳು ಪ್ರಿಯಕರನೊಂದಿಗೆ ಓಡಿ ಹೋದ ಘಟನೆ ಉತ್ತರ ಪ್ರದೇಶದ ಬಾಂದಾದಲ್ಲಿ ನಡೆದಿದೆ. ಆಘಾತಕ್ಕೆ ಒಳಗಾದ ಪೋಷಕರು ಮಗಳನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಆಗಿದ್ದೇನು..?
ಬಾಂದಾ ಪೊಲೀಸ್ ಠಾಣೆ ವ್ಯಾಪ್ತಿಯ 22 ವರ್ಷದ ಯುವತಿಗೆ ಮದುವೆ ಫಿಕ್ಸ್ ಆಗಿತ್ತು. ಜುಲೈ 13 ರಂದು ಮನೆಯವರು ನೋಡಿದ ಹುಡುಗನ ಜೊತೆ ಸಪ್ತಪದಿ ತುಳಿಯಬೇಕಿತ್ತು. ಹೀಗಾಗಿ ಮದುವೆ ತಯಾರಿ ನಡೆಸಿದ್ದ ಕುಟುಂಬಸ್ಥರು, ಅದ್ದೂರಿಯಾಗಿ ನೆರವೇರಿಸಲು ನಿರ್ಧರಿಸಿದ್ದರು. ಇಡೀ ಊರಿಗೆ, ಸಂಬಂಧಿಕರಿಗೆ ಮದುವೆ ಕಾರ್ಡ್​ ನೀಡಿ ಆಹ್ವಾನ ಮಾಡಿದ್ದರು.

ಇದನ್ನೂ ಓದಿ:2 ವರ್ಷ.. 2 ಬಾರಿ ಹೃದಯ ಛಿದ್ರ.. ರೋಹಿತ್​​ ಶರ್ಮಾರ ಬೆನ್ನೇರಿದ ದುರಾದೃಷ್ಟಗಳು..!

ಮದುವೆಗೂ ಮುನ್ನ ನಡೆಯುವ ಶುಭ ಕಾರ್ಯಗಳ ನಿಮಿತ್ತ ಕುಟುಂಬಸ್ಥರು ದಿನಸಿ ವಸ್ತುಗಳನ್ನು ತರಲು ಮಾರುಕಟ್ಟೆಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಒಬ್ಬಳೇ ಇದ್ದ ಮದುಮಗಳು ನಾಪತ್ತೆಯಾಗಿದ್ದಾಳೆ. ಮನೆಗೆ ಬಂದು ಪೋಷಕರು ಮಗಳು ಎಲ್ಲಿದ್ದಾಳೆಂದು ಹುಡುಕಾಡಿದ್ದಾಳೆ. ಎಲ್ಲಿಯೂ ಕಾಣದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಆಕೆಯು ಪ್ರಿಯತಮನ ಜೊತೆ ಹೋಗಿದ್ದಾಳೆ. ನಮ್ಮ ಮಗಳನ್ನು ಹುಡುಕಿಕೊಡಿ ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ನಮ್ಮ ಸಂಬಂಧ ಮಸಾಲೆ ಹಾಕುವಂತದ್ದಲ್ಲ.. ಮತ್ತೆ ಕೊಹ್ಲಿ ಬಗ್ಗೆ ದೊಡ್ಡ ಹೇಳಿಕೆ ಕೊಟ್ಟ ಗೌತಮ್ ಗಂಭೀರ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment