newsfirstkannada.com

×

VIDEO: ಓಡಿ ಓಡಿ ಬಂದು.. ಡಿಡಿಕ್ಕ, ಡಿಡಿಕ್ಕ ಡಿಡಿಕ್ಕ.. ಎಲ್ಲರೂ ತಲೆದೂಗುವಂತೆ ಮಾಡಿರೋ ಶಾಲ್ಮಲಿಯ ಹಾಡು ಮತ್ತೆ ವೈರಲ್

Share :

Published July 27, 2023 at 4:21pm

Update July 27, 2023 at 4:22pm

    ‘ಓಡಿ ಓಡಿ ಬಂದು ಹಣೆಗೆ ನೀಡಿ ನೀಡಿ ಡಿಡಿಕ್ಕ, ಡಿಡಿಕ್ಕ ಸಾಂಗ್​ ವೈರಲ್​​

    ಮತ್ತೆ ವೈರಲ್​ ಆಯ್ತು ಪುಟ್ಟ ಕಂದಮ್ಮ ಶಾಲ್ಮಲಿ ಹಾಡಿದ ಅದ್ಭುತ ಹಾಡು

    ಪ್ರಧಾನಿ ಮೋದಿ ಅವರಿಂದ ಮೆಚ್ಚುಗೆ ಗಳಿಸಿದ್ದ ಪುಟ್ಟ ಬಾಲಕಿ ಶಾಲ್ಮಲಿ

ಇತ್ತೀಚೆಗೆ ಸೋಷಿಯಲ್‌ ಮೀಡಿಯಾ ಅನ್ನೋದು ಕೆಲವರಿಗೆ ವರವಾಗಿದೆ. ಒಂದೇ ದಿನದಲ್ಲಿ ಯಾರು ಯಾವಾಗ ಫೇಮಸ್ ಆಗುತ್ತಾರೆ ಎಂದು ಗೊತ್ತೇ ಆಗೋದಿಲ್ಲ. ಕೇವಲ ಒಂದೇ ಒಂದು ವಿಡಿಯೋದಿಂದ ದೇಶ ವಿದೇಶದಲ್ಲೂ ಸುದ್ದಿ ಆಗುತ್ತಾರೆ. ಅದೇ ರೀತಿ ಇಲ್ಲೊಂದು ಪುಟ್ಟ ಕಂದಮ್ಮ ಹಾಡಿರೋ ಅದ್ಭುತವಾದ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಅದೇ ‘ಓಡಿ ಓಡಿ ಬಂದು ಹಣೆಗೆ ನೀಡಿ ನೀಡಿ ಡಿಡಿಕ್ಕ್, ಡಿಡಿಕ್ಕ್ ಡಿಡಿಕ್ಕ್ ಡಿಡಿಕ್ಕ್ ಎಂದು ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾನೆ’ ಎಂಬ ಭಕ್ತಿಗೀತೆಯನ್ನು ಮುದ್ದಾಗಿ ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

ಈ ಪುಟ್ಟ ಕಂದಮ್ಮ ಹಾಡಿರೋ ಹಾಡನ್ನು ಕೇಳಿದ ಸಾಕಷ್ಟು ನೆಟ್ಟಿಗರು ಮನಸೋತಿದ್ದಾರೆ. ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಬಗೆ ಬಗೆಯಾಗಿ ಕಾಮೆಂಟ್​ ಮಾಡುತ್ತಿದ್ದಾರೆ. ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕನ್ನೋ ಧ್ವನಿ.. ನೀನು ಆ ದೇವರು ಕೊಟ್ಟ ವರ, ಅದ್ಭುತ.. ಮುದ್ದಾದ ಮಗುವಿನ ಮುದ್ದಾದ ಧ್ವನಿ ಗೆ ಫಿದಾ ಆಗಿ ಕಣ್ಣಲ್ಲಿ ಆನಂದ ಬಾಷ್ಪ ಬಂತು, ವಿಠ್ಠಲನ ದರ್ಶನವನ್ನೇ ಮಾಡಿದಷ್ಟು ಖುಷಿಯಾಯಿತು, ಸೋ ಕ್ಯೂಟ್ ಬಂಗಾರಿ ಸೂಪರ್.. ನಿನ್ನೆ ಒಳ್ಳೆಯದಾಗಲಿ ಎಂದು ಕಾಮೆಂಟ್​ ಹಾಕುತ್ತಿದ್ದಾರೆ.

ಈ ಪುಟ್ಟ ಬಾಲಕಿಯ ಹೆಸರು ಶಾಲ್ಮಲಿ. ಈ ಹಿಂದೆಯು ಕೂಡ ‘ಪಲ್ಲವಿಗಳ ಪಲ್ಲವಿಯಲಿ ಗರಿಗೆದರಿದೆ ಗೀತ’ ಅನ್ನೋ ಹಾಡಿನ ಮೂಲಕ ವೈರಲ್ ಆಗಿದ್ದಳು. ಜೊತೆಗೆ ಬಾಲಕಿ ಅದ್ಭುತವಾಗಿ ಕೀಬೋರ್ಡ್ ಕೂಡ ನುಡಿಸುತ್ತಾಳೆ. ಹೀಗಾಗಿ ಬಾಲಕಿಯ ಪ್ರತಿಭೆಗೆ ಅದೇಷ್ಟೋ ಜನರ ಗಮನ ಸೆಳೆದಿದ್ದಾಳೆ. ವಿಶೇಷ ಎಂದರೆ ಈ ಪುಟ್ಟ ಬಾಲಕಿಯ ಹಾಡನ್ನು ಪ್ರಧಾನಿ ಮೋದಿ ಅವರು ಟ್ವಿಟರ್​​ ಖಾತೆಯಲ್ಲಿ ಶೇರ್‌ ಮಾಡಿದ್ದರು. ಜೊತೆಗೆ ಈ ವಿಡಿಯೋ ಪ್ರತಿಯೊಬ್ಬರ ಮುಖದಲ್ಲಿ ನಗುವನ್ನು ಮೂಡಿಸುತ್ತದೆ. ಅಸಾಧಾರಣ ಪ್ರತಿಭೆ ಮತ್ತು ಕ್ರಿಯಾಶೀಲತೆ ಈ ಬಾಲಕಿಯಲ್ಲಿದೆ. ಬೆಸ್ಟ್‌ ವಿಶಸ್‌ ಟು ಶಾಲ್ಮಲೀ ಎಂದು ಬರೆದುಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಓಡಿ ಓಡಿ ಬಂದು.. ಡಿಡಿಕ್ಕ, ಡಿಡಿಕ್ಕ ಡಿಡಿಕ್ಕ.. ಎಲ್ಲರೂ ತಲೆದೂಗುವಂತೆ ಮಾಡಿರೋ ಶಾಲ್ಮಲಿಯ ಹಾಡು ಮತ್ತೆ ವೈರಲ್

https://newsfirstlive.com/wp-content/uploads/2023/07/child-2.jpg

Load More