ಮನೆಯಲ್ಲಿದ್ದಾಗ ನಾನು ಪೌಷ್ಠಿಕ (ಪ್ರೊಟೀನ್) ಆಹಾರ ಸೇವಿಸುತ್ತಿದ್ದೆ
ಜೈಲಿಗೆ ಬಂದ ಮೇಲೆ ನನ್ನ ದೇಹದ ತೂಕದಲ್ಲಿ 10 ಕೆಜಿ ತೂಕ ಇಳಿದಿದೆ
ಮೂರು ತಿಂಗಳ ಹಿಂದೆ ನನಗೆ ಮೂಳೆ ಸಂಬಂಧ ಶಸ್ತ್ರ ಚಿಕಿತ್ಸೆ ಆಗಿದೆ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಹಕ್ಕಿಯಾಗಿರುವ ದರ್ಶನ್ ಅವರು ಕಂಬಿ ಹಿಂದೆ ಮನೆ ಊಟಕ್ಕಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಕೋರ್ಟ್ ಮೆಟ್ಟಿಲೇರಿದ ದರ್ಶನ್ ಅವರಿಗೆ ಮೊದಲಿಗೆ ಹಿನ್ನೆಡೆಯಾಗಿದೆ. ಇದೀಗ ಮನೆ ಊಟ, ಬಟ್ಟೆ, ಹಾಸಿಗೆಗಾಗಿ ಮತ್ತೆ ಹೈಕೋರ್ಟ್‌ಗೆ ದರ್ಶನ್ ಇಂದು ಅರ್ಜಿ ಸಲ್ಲಿಸಿದ್ದಾರೆ.
ಮನೆ ಊಟಕ್ಕಾಗಿ ದರ್ಶನ್ ಅವರು ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ದರ್ಶನ್ ಅರ್ಜಿ ವಜಾಗೊಂಡಿತ್ತು. ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಪ್ರಶ್ನಿಸಿ ದರ್ಶನ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ ತಮ್ಮ ಕಕ್ಷಿದಾರರಿಗೆ ಮನೆಯಿಂದ ಊಟ, ಬಟ್ಟೆ, ಹಾಸಿಗೆ ಪಡೆಯಲು ಅನುಮತಿ ನೀಡುವ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಇದನ್ನೂ ಓದಿ: ‘ನಟ ದರ್ಶನ್ ಮನೆಗೆ ಬಂದ್ರೆ ಊಟ ಹಾಕ್ತೀವಿ’- ರೇಣುಕಾಸ್ವಾಮಿ ತಂದೆ ಉದಾರದ ಮಾತು
ನ್ಯಾಯಾಧೀಶರಿಗೆ ದರ್ಶನ್ ಮನವಿ ಪತ್ರ!
ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವುದರ ಜೊತೆಗೆ ದರ್ಶನ್ ಅವರು ಕಳೆದ ಜೂನ್ 06ರಂದು ಮನೆ ಊಟಕ್ಕಾಗಿ ನ್ಯಾಯಾಧೀಶರಿಗೆ ಪತ್ರವನ್ನು ಬರೆದಿದ್ದಾರೆ. ಆ ಪತ್ರದಲ್ಲಿ ಏನಿದೆ ಅನ್ನೋದರ ವಿವರ ಇಲ್ಲಿದೆ ನೋಡಿ.
ದರ್ಶನ್ ಪತ್ರದಲ್ಲಿ ಏನಿದೆ?
ದಿನಾಂಕ 22/06/24 ರಂದು ಕೇಂದ್ರ ಕಾರಾಗೃಹಕ್ಕೆ ನಾನು ಬಂದಿದ್ದೇನೆ. ನಾನು ದಿನನಿತ್ಯ ನನ್ನ ಮನೆಯಲ್ಲಿದ್ದಾಗ ವ್ಯಾಯಾಮ ಮಾಡುತ್ತಿದ್ದು ಅದರ ಜೊತೆ ಪೌಷ್ಠಿಕ (ಪ್ರೊಟಿನ್) ಆಹಾರ ಸೇವಿಸುತ್ತಿದ್ದೆ. ಕೇಂದ್ರ ಕಾರಾಗೃಹದಲ್ಲಿ ನನಗೆ ಬೇಕಾದ ಆಹಾರದ ಕೊರತೆ ಇದ್ದು ನನ್ನ ದೇಹದ ತೂಕದಲ್ಲಿ ಸುಮಾರು 10 ಕೆಜಿ ಇಳಿದಿದೆ. ಆದ ಕಾರಣ ದಯಮಾಡಿ ನನಗೆ ಮನೆ ಊಟದ ವ್ಯವಸ್ಥೆ ಮಾಡಕೊಡಬೇಕಾಗಿ ತಮ್ಮಲ್ಲಿ ಕೋರಿಕೊಳ್ಳುತ್ತೇನೆ.
ಇಂತಿ ತಮ್ಮ ವಿಶ್ವಾಸಿ 18/- 6106
ಇದು ಮನೆ ಊಟಕ್ಕೆ ದರ್ಶನ್ ಅವರು ಜೂನ್ ತಿಂಗಳಲ್ಲಿ ಬರೆದಿರೋ ಪತ್ರದ ಸಾರಾಂಶವಾದ್ರೆ, ಜುಲೈ 10ರಂದು ಹೆಚ್ಚು ಪ್ರೊಟೀನ್‌ಗಾಗಿ ದರ್ಶನ್ ಅವರು ಮತ್ತೊಂದು ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ದರ್ಶನ್ಗೆ ಜೈಲೂಟ ಫಿಕ್ಸ್.. ಮನೆಯೂಟ ಕೇಳಿದ್ದಕ್ಕೆ ಕೋರ್ಟ್ ಬಿಗ್ ಶಾಕ್; ಕಾರಣವೇನು?
ಪ್ರೊಟೀನ್ ಡೈಯಟ್ ನೀಡುವ ಬಗ್ಗೆ
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣಾ ಬಂಧಿ ಸಂಖ್ಯೆ 6106, ದರ್ಶನ್ ಎಸ್ ಆದ ನಾನು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ವಿಚಾರಣಾ ಬಂಧಿಯಾಗಿರುತ್ತೇನೆ. ಕಳೆದ ಮೂರು ತಿಂಗಳ ಹಿಂದೆ ನನಗೆ ಮೂಳೆ ಸಂಬಂಧ ಶಸ್ತ್ರ ಚಿಕಿತ್ಸೆಯಾಗಿರುತ್ತದೆ. ಹಾಗೂ ನಾನು ದಿನ ನಿತ್ಯ ಕೆಲಸದ ನಿಮಿತ್ತ ಕಸರತ್ತು ನಡೆಸುತ್ತಿದ್ದು ನನ್ನ ದೇಹಕ್ಕೆ ಪ್ರೊಟೀನ್ ಡಯೆಟ್ ಅವಶ್ಯಕತೆ ಇರುತ್ತದೆ. ಕಾರಾಗೃಹಕ್ಕೆ ದಾಖಲಾದ ದಿನದಿಂದ ನಾನು ಕಾರಾಗೃಹದಲ್ಲಿ ನೀಡಿದ ಆಹಾರವನ್ನು ಸೇವಿಸುತ್ತಿದ್ದು ನನ್ನ ಆರೋಗ್ಯ ಮತ್ತು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬಿರುತ್ತಿದೆ. ನನ್ನ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಕಾರಾಗೃಹದಲ್ಲಿ ದೊರೆಯುವ ಆಹಾರದ ಜೊತೆ ಮಾನ್ಯರಲ್ಲಿ ಮನವಿ ಇರುವ ಆಹಾರವನ್ನು ನೀಡಬೇಕಾಗಿ ಕೇಳಿ ಕೊಳ್ಳುತ್ತೇನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ