/newsfirstlive-kannada/media/post_attachments/wp-content/uploads/2024/03/Maxwell_RCB1.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಮತ್ತೆ ಕೈ ಕೊಟ್ಟಿದ್ದಾರೆ. ಬ್ಯಾಟಿಂಗ್ ಮಾಡುವಾಗ ಎರಡು ಲೈಫ್ ಸಿಕ್ಕರೂ ಮತ್ತೆ ಅದೇ ರೀತಿ ಶಾಟ್ಗೆ ಕೈ ಹಾಕಿ ವಿಕೆಟ್ ಒಪ್ಪಿಸಿದ್ರು.
ಎಂ.ಎ ಚಿನ್ನಸ್ವಾಮಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಪಂದ್ಯದಲ್ಲಿ ಕ್ಯಾಮರಾನ್ ಗ್ರೀನ್ ಔಟಾದ ಬಳಿಕ ಬಂದ ಮ್ಯಾಕ್ಸಿ ಎಂದಿನಂತೆಯೇ ಬ್ಯಾಟ್ ಬೀಸಿದ್ರು. ಕೇವಲ 19 ಬಾಲ್ನಲ್ಲಿ 1 ಸಿಕ್ಸರ್, 3 ಫೋರ್ ಸಮೇತ 29 ರನ್ ಸಿಡಿಸಿದ್ರು.
ಆದರೆ, ಮ್ಯಾಕ್ಸಿ ಮಾಡಿದ ತಪ್ಪು ಒಂದಾ? ಎರಡಾ? ಅನ್ನೋ ಚರ್ಚೆ ಶುರುವಾಗಿದೆ. ಎರಡು ಬಾರಿ ಮ್ಯಾಕ್ಸ್ವೆಲ್ಗೆ ಲೈಫ್ ಸಿಕ್ಕಿದೆ. ಕೊನೆಗೆ ಸುನಿಲ್ ನರೈನ್ ಬೌಲಿಂಗ್ನಲ್ಲಿ 14ನೇ ಓವರ್ನಲ್ಲಿ ಮತ್ತೆ ಸಿಕ್ಸ್ ಸಿಡಿಯಲು ಹೋದ ಮ್ಯಾಕ್ಸಿ ರಿಂಕು ಸಿಂಗ್ಗೆ ಕ್ಯಾಚ್ ನೀಡಿದ್ರು.
??? ??????‼️
Sunil Narine makes up for the dropped catch by eventually getting Glenn Maxwell for 28(19) ?#RCB 134/3 after 15 overs
Watch the match LIVE on @JioCinema and @StarSportsIndia ??#TATAIPL | #RCBvKKRpic.twitter.com/7dHb9BQVaJ
— IndianPremierLeague (@IPL)
𝐁𝐢𝐠 𝐖𝐢𝐜𝐤𝐞𝐭‼️
Sunil Narine makes up for the dropped catch by eventually getting Glenn Maxwell for 28(19) 💪#RCB 134/3 after 15 overs
Watch the match LIVE on @JioCinema and @StarSportsIndia 💻📱#TATAIPL | #RCBvKKRpic.twitter.com/7dHb9BQVaJ— IndianPremierLeague (@IPL) March 29, 2024
">March 29, 2024
ಈ ಮುನ್ನ ನಡೆದಿದ್ದ ಎರಡು ಪಂದ್ಯಗಳಲ್ಲೂ ಮ್ಯಾಕ್ಸಿ ಇದೇ ರೀತಿ ಔಟಾಗಿದ್ದರು. ಇದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಂಕಷ್ಟಕ್ಕೆ ಸಿಲುಕಿ ಒಂದು ಪಂದ್ಯದಲ್ಲಿ ಸೋಲು ಅನುಭವಿಸಿತ್ತು.
ಇದನ್ನೂ ಓದಿ: ವಿರಾಟ್ ಕೊಹ್ಲಿ ಬ್ಯಾಟಿಂಗ್ ಬೆಚ್ಚಿಬಿದ್ದ ಕೆಕೆಆರ್.. ಕಿಂಗ್ ಕೊಹ್ಲಿ ಮತ್ತೊಂದು ಅರ್ಧಶತಕ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ