ಮ್ಯಾಕ್ಸ್​ವೆಲ್​​ಗೆ ಕ್ಲಾಸ್..! ಆಕ್ರೋಶ ಹೊರ ಹಾಕಿದ RCB ಮಾಜಿ ಆಟಗಾರ..!

author-image
Ganesh
Updated On
ಮ್ಯಾಕ್ಸ್​ವೆಲ್​​ಗೆ ಕ್ಲಾಸ್..! ಆಕ್ರೋಶ ಹೊರ ಹಾಕಿದ RCB ಮಾಜಿ ಆಟಗಾರ..!
Advertisment
  • 2024ರಲ್ಲಿ 8 ಪಂದ್ಯವನ್ನಾಡಿ 36 ರನ್​ಗಳಿಸಿರುವ ಮ್ಯಾಕ್ಸಿ
  • ಐದು ವಿಕೆಟ್ ಪಡೆದು 104 ರನ್ ಹೊಡೆಸಿಕೊಂಡಿದ್ದಾರೆ
  • ಮ್ಯಾಕ್ಸ್​​ವೆಲ್ ವಿರುದ್ಧ ಸಮೀಕ್ಷೆ ಆರಂಭಿಸಿದ ಮಾಜಿ ಆಟಗಾರ

ಐಪಿಎಲ್ 2024ರ 52ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಗುಜರಾತ್ ತಂಡವನ್ನು ಬೆಂಗಳೂರು ಸುಲಭವಾಗಿ ಸೋಲಿಸಿತು. ರಾಯಲ್ ಚಾಲೆಂಜರ್ಸ್‌ಗೆ ಇದು ಸತತ ಮೂರನೇ ಗೆಲುವು.

ಬೆಂಗಳೂರಿನ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು. ಆದರೆ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮಾತ್ರ ಬ್ಯಾಟಿಂಗ್​ನಲ್ಲಿ ಇನ್ನೂ ಫಾರ್ಮ್​​ಗೆ ಬಂದಿಲ್ಲ. ಬ್ಯಾಟಿಂಗ್ ಮಾತ್ರವಲ್ಲ, ಬೌಲಿಂಗ್​ನಲ್ಲೂ ಅಷ್ಟಕಷ್ಟೇ. ಇದೇ ವಿಚಾರಕ್ಕೆ ಭಾರತದ ಮಾಜಿ ಆಟಗಾರ ಪಾರ್ಥಿವ್ ಪಟೇಲ್, ತುಂಬಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್​ ಮುಖಂಡನ ಕಪಾಳಕ್ಕೆ ಬಾರಿಸಿದ DK ಶಿವಕುಮಾರ್​​.. ಅಸಲಿಗೆ ಆಗಿದ್ದೇನು..? Video

ಟ್ವೀಟ್ ಮಾಡಿರುವ ಪಟೇಲ್.. ಗ್ಲೆನ್ ಮ್ಯಾಕ್ಸ್‌ವೆಲ್.. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೌಲ್ಯಯುತ ಆಟಗಾರ.. ಅವರ ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಕೆಲವರು ಮ್ಯಾಕ್ಸ್‌ವೆಲ್‌ಗೆ ಬೆಂಬಲ ನೀಡಿದ್ದಾರೆ, ಇನ್ನು ಕೆಲವರು ಪಟೇಲ್‌ರ ಕಮೆಂಟ್ ವಿರೋಧಿಸಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಪಟೇಲ್.. ಸಮೀಕ್ಷೆ ನಡೆಸಿದ್ದಾರೆ. ಮ್ಯಾಕ್ಸ್‌ವೆಲ್ ಆಸ್ಟ್ರೇಲಿಯಾಕ್ಕೆ ಅಥವಾ ಐಪಿಎಲ್‌ಗೆ ಉತ್ತಮ ಆಟಗಾರರೇ ಎಂದು ಜನರನ್ನು ಕೇಳಿದ್ದಾರೆ.

ಇದನ್ನೂ ಓದಿ:ಕೊಹ್ಲಿಯನ್ನೇ ಮೀರಿಸಿದ ಗ್ರೀನ್.. ಈ ಬಾರಿ ಹೃದಯ ಗೆದ್ದಿದ್ದು ವಿರಾಟ್ ಅಲ್ಲ..! Video

2024ರಲ್ಲಿ ಪ್ರದರ್ಶನ..!
ಐಪಿಎಲ್‌ನ ಕಳೆದ ಮೂರು ಋತುಗಳಲ್ಲಿ 300ಕ್ಕೂ ಹೆಚ್ಚು ರನ್ ಗಳಿಸಿರುವ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಈ ಬಾರಿ ಏನೂ ಆಡಿಲ್ಲ. 2024ರಲ್ಲಿ ಇಲ್ಲಿಯವರೆಗೆ 8 ಪಂದ್ಯಗಳನ್ನು ಆಡಿದ್ದಾರೆ. ಈ ಎಂಟು ಪಂದ್ಯಗಳಲ್ಲಿ ಅವರು ಸ್ಟ್ರೈಕ್ ರೇಟ್‌ 97.30. ಗಳಿಸಿರುವ ರನ್ ಕೇವಲ 36 ರನ್. ಎಂಟು ಪಂದ್ಯಗಳಲ್ಲಿ 104 ರನ್ ಬಿಟ್ಟುಕೊಟ್ಟು 5 ವಿಕೆಟ್ ಪಡೆದಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment