/newsfirstlive-kannada/media/post_attachments/wp-content/uploads/2024/04/Gold-2.jpg)
ನಾಳೆ ಕೃಷ್ಣ ಜನ್ಮಾಷ್ಟಮಿ. ದೇಶದಾದ್ಯಂತ ಜನರು ಕೃಷ್ಣನ ಆಚರಣೆಯಲ್ಲಿ ಮುಳುಗಿರುತ್ತಾರೆ. ಶುಭದಿನವಾದ ನಾಳೆ ಹಲವರು ಬಂಗಾರ ಖರೀದಿಸಲು ಮುಂದಾಗೋದು ಮಾಮೂಲಿ. ಆದರೆ ನಿನ್ನೆಗಿಂತ ಇಂದು ಚಿನ್ನ ದಿಢೀರ್​ ಏರಿಕೆಯಾಗಿದೆ. ಗ್ರಾಹಕರಿಗೆ ಈ ಬೆಲೆ ಏರಿಕೆ ಕೊಂಚ ಶಾಕ್​ ನೀಡಿದಂತಾಗಿದೆ.
ಚಿನ್ನಕ್ಕೆ ಡಿಮ್ಯಾಂಡ್​ ಕಡಿಮೆಯಾಗಲ್ಲ. ಬಹುತೇಕರು ದೀರ್ಘಾವದಿಯ ಹಣ ಹೂಡಿಕೆಗಾಗಿ ಚಿನ್ನದತ್ತ ಒಲವು ತೋರಿಸುತ್ತಾರೆ. ಅದಕ್ಕಾಗಿ ಚಿನ್ನ ಖರೀದಿಸಲು ಮುಂದಾಗುತ್ತಾರೆ. ಕೆಲವರಂತೂ ಬೆಲೆ ಏರಿಕೆ ಕಂಡರೂ ಸಹ ಮಾರುಕಟ್ಟೆಯಲ್ಲಿ ಮುಗಿಬಿದ್ದು ಚಿನ್ನ ಖರೀದಿಸುತ್ತಾರೆ. ಆದರೆ ನಿನ್ನೆ ಮತ್ತು ಇಂದಿನ ಮಾರುಕಟ್ಟೆಯನ್ನ ಗಮನಿಸಿದಾಗ ಚಿನ್ನದ ಬೆಲೆ 36 ರೂಪಾಯಿ ಏರಿಕೆ ಕಂಡಿದೆ.
22 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು?
- ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ ₹ 6,695 ಇದೆ.
- 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 66,950 ಇದೆ.
24 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು?
- ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್​ನ 1 ಗ್ರಾಂ ಚಿನ್ನದ ದರ ₹ 7,304 ಆಗಿದೆ.
- 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 73,040 ಇದೆ.
/newsfirstlive-kannada/media/post_attachments/wp-content/uploads/2024/07/GOLD.jpg)
ಇದನ್ನೂ ಓದಿ:154 ರೂಪಾಯಿಯ ಪ್ಲಾನ್​ಗೆ ಮುಗಿಬಿದ್ದ ಜನ​.. 14ಕ್ಕೂ ಹೆಚ್ಚು OTT ಸಂಪೂರ್ಣ ಉಚಿತ!
ಬೆಳ್ಳಿಯ ಬೆಲೆ ಎಷ್ಟಿದೆ?
- ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 88 ಇದೆ.
- ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹ 88,000 ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us