Advertisment

ಪ್ರೇಕ್ಷಕರ ಮನ ಗೆದ್ದ ‘ಕೃಷ್ಣಂ ಪ್ರಣಯ ಸಖಿ’; ವೀಕೆಂಡಲ್ಲೂ ಗೋಲ್ಡನ್’ ಸಿನಿಮಾ​ ಹೌಸ್ ಫುಲ್

author-image
Veena Gangani
Updated On
ಪ್ರೇಕ್ಷಕರ ಮನ ಗೆದ್ದ ‘ಕೃಷ್ಣಂ ಪ್ರಣಯ ಸಖಿ’; ವೀಕೆಂಡಲ್ಲೂ ಗೋಲ್ಡನ್’ ಸಿನಿಮಾ​ ಹೌಸ್ ಫುಲ್
Advertisment
  • ತೆರೆಮೇಲೆ ಕಮಾಲ್ ಮಾಡಿದ ಗೋಲ್ಡನ್ ಸ್ಟಾರ್​ ಸಿನಿಮಾ
  • ಥಿಯೇಟರ್ ಕಡೆ ನುಗ್ತಿರೋ ಫ್ಯಾಮಿಲಿ ಪ್ರೇಕ್ಷಕ ಪ್ರಭುಗಳು
  • ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಖಿಗೆ ಫ್ಯಾನ್ಸ್​ ಅಂದ್ರು ಜೈ

ಫ್ಯಾಮಿಲಿ ಎಂಟರ್ಟೈನರ್ ಸಿನಿಮಾಗಳಿಗೆ ಯಾವತ್ತೂ ಸೋಲಿಲ್ಲ. ಆದ್ರೀಗ ಪ್ಯಾನ್ ಇಂಡಿಯಾ ರೇಸ್​ನಲ್ಲಿ ಅಂಥಾ ಸಿನಿಮಾಗಳೇ ಕಮ್ಮಿ ಆಗ್ತಿವೆ. ಈ ಮಧ್ಯೆ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಕೃಷ್ಣಂ ಪ್ರಣಯ ಸಖಿ' ಫ್ಯಾಮಿಲಿ ಪ್ರೇಕ್ಷಕರನ್ನು ಥಿಯೇಟರ್ ಕಡೆ ನುಗ್ಗುವಂತೆ ಮಾಡಿದೆ.

Advertisment

ಇದನ್ನೂ ಓದಿ: ಡಾ.ಬ್ರೋ ಕಾರ್ಯಕ್ಕೆ ಫ್ಯಾನ್ಸ್‌ ಫಿದಾ.. ಸ್ವಾತಂತ್ರ್ಯ ದಿನಾಚರಣೆ ದಿನವೇ ಗಗನ್ ಹೊಸ ಸಾಹಸ; ಏನದು?

publive-image

ಗೋಲ್ಡನ್ ಸ್ಟಾರ್ ಗಣೇಶ್ ಅಂದ್ರೆ ಫ್ಯಾಮಿಲಿ ಪ್ರೇಕ್ಷಕರ ಫೇವರಿಟ್. ಮಕ್ಕಳು, ಮಹಿಳೆಯರ ಅಚ್ಚು ಮೆಚ್ಚು. ಮುಂಗಾರು ಮಳೆಯಿಂದ ಇಲ್ಲಿ ತನಕ ಅದು ಪ್ರೂವ್ ಆಗ್ತಾನೆ ಬಂದಿದೆ. ಕಳೆದ ಆರೇಳು ತಿಂಗಳಿಂದ ಇಂಡಸ್ಟ್ರಿಗೆ ಸಂಕಷ್ಟದ ಸಮಯ. ಹೇಳಿಕೊಳ್ಳುವಂತ ಯಾವುದೇ ಸಕ್ಸಸ್ ಸಿಕ್ಕಿರಲಿಲ್ಲ. ಅದರಲ್ಲೂ ಫ್ಯಾಮಿಲಿ ಪ್ರೇಕ್ಷಕರು ಥಿಯೇಟರ್ ಕಡೆ ಕಾಲಿಟ್ಟು, ತುಂವಾ ವರ್ಷಗಳೇ ಆಗೋಯ್ತು.

publive-image

ಆದ್ರೀಗ ಗೋಲ್ಡನ್ ಸ್ಟಾರ್ ನಟನೆಯ ಕೃಷ್ಣಂ ಪ್ರಣಯ ಸಖಿ ದೊಡ್ಡ ಮ್ಯಾಜಿಕ್ ಸೃಷ್ಟಿಸಿದೆ. ಫ್ಯಾಮಿಲಿ ಪ್ರೇಕ್ಷಕರು ಸಿನಿಮಾಗೆ ರೆಡ್ ಕಾರ್ಪೆಟ್ ವೆಲ್ಕಂ ಕೊಟ್ಟಿದ್ದು, ಥಿಯೇಟರ್ ಕಡೆ ಕಿಕ್ಕಿರಿದು ನುಗ್ತಿದ್ದಾರೆ. ರಿಲೀಸ್​ಗೂ ಮೊದಲೇ ಕೃಷ್ಣಂ ಪ್ರಣಯ ಸಖಿ, ದೊಡ್ಡ ಇಂಪ್ಯಾಕ್ಟ್ ಕ್ರಿಯೇಟ್ ಮಾಡಿತ್ತು. ಬರೀ ಹಾಡುಗಳಿಂದಲೇ ಜನ - ಮನ ಗೆದ್ದಿತ್ತು. ಟೀಸರ್ -ಟ್ರೈಲರ್ ಬಿಡುಗಡೆ ಮಾಡದೇ, ಕಥೆ ಮೇಲೆ ಕ್ಯೂರಿಯಾಸಿಟಿ ಹೆಚ್ಚಿಸಿದ್ರು. ಈ ಐಡಿಯಾಗಳೆಲ್ಲವೂ ಸಿನಿಮಾ ಗೆಲುವಿಗೆ ಕಾರಣ ಆಗಿತ್ತು. ಲವ್ ಸ್ಟೋರಿಯಲ್ಲೂ ನಾನ್ -ಲೀನಿಯರ್ ಸ್ಕ್ರೀನ್ ಪ್ಲೇ ಪ್ರಯೋಗಿಸಿದ್ದು, ಮತ್ತೊಂದು ಹೆಗ್ಗಳಿಕೆ.

Advertisment

ಇದನ್ನೂ ಓದಿ:40 ವರ್ಷದಲ್ಲೇ ಸಿದ್ದರಾಮಯ್ಯಗೆ ಬಿಗ್‌ ಶಾಕ್‌.. ಸಿಎಂ ಸ್ಥಾನಕ್ಕೆ ಎದುರಾಗೋ 10 ಪರಿಣಾಮಗಳೇನು?

publive-image

ಗೋಲ್ಡನ್ ಸ್ಟಾರ್ ನಟನೆ ಬಗ್ಗೆ ದೂಸ್ರಾ ಮಾತಿಲ್ಲ. ಪ್ರತಿ ಫ್ರೇಮಲ್ಲೂ ಸಿನಿಮಾನಾ ಆವರಿಸಿದ್ದು, ಜನರಿಂದ ಅಭೂತಪೂರ್ವ ಮೆಚ್ಚುಗೆ ಸಿಕ್ಕಿದೆ. ದ್ವಾಪರ, ಚಿನ್ನಮ್ಮ ಚಿನ್ನಮ್ಮ ಹಾಡಲ್ಲಂತೂ ಗಣೇಶ್ ಯಂಗ್ ಮತ್ತು ಎನರ್ಜಿಟಿಕ್ ಆಗಿ ಕಾಣಿಸಿದ್ದು, ಸಿಂಗಲ್ ಟೇಕ್ ಸ್ಟೆಪ್ ಶಿಳ್ಳೆ, ಚಪ್ಪಾಳೆ ಗಿಟ್ಟಿಸ್ತಿದೆ. ದಿನದಿಂದ ದಿನಕ್ಕೆ ಗೋಲ್ಡನ್ ಪ್ರಣಯಕ್ಕೆ ಬೇಡಿಕೆ ಹೆಚ್ಚಾಗ್ತಿದ್ದು, ವೀಕ್ ಡೇಸ್ ಮತ್ತು ವೀಕೆಂಡ್​ನಲ್ಲೂ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣ್ತಿದ್ದು, ಈ ಅಬ್ಬರ ಇನ್ನೂ ಕಂಟಿನ್ಯೂ ಆಗೋದು ಗ್ಯಾರಂಟಿ ಎನ್ನಲಾಗ್ತಿದೆ. ಒಟ್ಟಾರೆ ಥಿಯೇಟರ್​ನಿಂದ ದೂರ ಉಳಿದಿದ್ದ, ಫ್ಯಾಮಿಲಿ ಪ್ರೇಕ್ಷಕರನ್ನು ಕೃಷ್ಣಂ ಪ್ರಣಯ ಸಖಿ ವಾಪಸ್ ಕರೆಸಿದ್ದು, ಇಂಡಸ್ಟ್ರಿಯಲ್ಲಿ ಹೊಸ ಚೈತನ್ಯ ತುಂಬಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment