newsfirstkannada.com

M.S ಧೋನಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌.. 2025ರಲ್ಲೂ ಐಪಿಎಲ್ ಆಡ್ತಾರಾ ಮಿಸ್ಟರ್ ಕೂಲ್? ಏನಿದರ ಗುಟ್ಟು?

Share :

Published May 28, 2024 at 2:17pm

  17 ವರ್ಷ ಫುಲ್ ಫಿಟ್​ & ಫೈನ್​ ಆಗಿ ಐಪಿಎಲ್ ಅಖಾಡಕ್ಕೆ ಎಂಟ್ರಿ

  ಕೆಲ ತಿಂಗಳಲ್ಲೇ ಎಂ.ಎಸ್‌ ಧೋನಿ 18ನೇ IPL ಆಡೋ ಭವಿಷ್ಯ ನಿರ್ಧಾರ

  IPL ಸೀಸನ್‌ 17ರಿಂದ ಹೊರ ಬಂದ ಮೇಲೆ ಮಿಸ್ಟರ್‌ ಕೂಲ್ ಮಾಡ್ತಿರೋದೇನು?

IPL ಸೀಸನ್‌ 17ರಲ್ಲಿ ಸಿಎಸ್​ಕೆ ಲೀಗ್​ನಲ್ಲೇ ಹೊರಬಿದ್ದು ಅಭಿಮಾನಿಗಳನ್ನ ತೀವ್ರ ನಿರಾಸೆಗೊಳಿಸಿದೆ. ಆ ದುಃಖದಿಂದ ಚೆನ್ನೈ ಫ್ಯಾನ್ಸ್‌ ಇನ್ನೂ ಹೊರ ಬಂದಿಲ್ಲ. ಇನ್ನೊಂದೆಡೆ ಚಾಂಪಿಯನ್ ಧೋನಿ ನಿಗೂಢ ನಡೆ ಇಟ್ಟಿದ್ದಾರೆ. ಆ ಮೂಲಕ ಫ್ಯಾನ್ಸ್​ ತಲೆಯಲ್ಲಿ ಹುಳ ಬಿಟ್ಟಿದ್ದಾರೆ.

2024ರ ಐಪಿಎಲ್​​​​ಗೂ ಮೊದಲೇ ಎಂ.ಎಸ್‌ ಧೋನಿ ಮೊಣಕಾಲು ಸರ್ಜರಿಗೆ ಒಳಗಾಗಿದ್ದರು. 17ನೇ ಸೀಸನ್​ನಲ್ಲಿ ಸಿಎಸ್​ಕೆ ಲೀಗ್​ ಹಂತದಲ್ಲೇ ಹೊರಬಿತ್ತು. ಇದರ ಬೆನ್ನಲ್ಲೆ ಮತ್ತೊಂದು ಸುದ್ದಿ ಕೇಳಿ ಬಂತು. ಅದೇನಂದ್ರೆ ಚಾಂಪಿಯನ್ ಕ್ಯಾಪ್ಟನ್​ ಮಾಹಿ ಐಪಿಎಲ್​​​ ಬಳಿಕ MUSCLE TEAR ಸರ್ಜರಿಗೆ ಒಳಗಾಗ್ತಾರೆ ಎಂದು ಸುದ್ದಿ ಹರಿದಾಡಿತ್ತು. ಆದ್ರೀಗ ಮಿಸ್ಟರ್ ಕೂಲ್ ನೋಡಿದ್ರೆ ಜಿಮ್​​​ನಲ್ಲಿ ಕಠಿಣ ವರ್ಕೌಟ್​ ನಡೆಸುವ ಮೂಲಕ ಎಲ್ಲರನ್ನ ಅಚ್ಚರಿಗೆ ತಳ್ಳಿದ್ದಾರೆ.

ಜಿಮ್‌ನಲ್ಲಿ ಅಭಿಮಾನಿ ಜೊತೆ ಸೆಲ್ಫಿಗೆ ಪೋಸ್‌ ಕೊಟ್ಟ ಎಂ.ಎಸ್‌ ಧೋನಿ

ಹಳೇ ಸಂಪ್ರದಾಯಕ್ಕೆ ಲೆಜೆಂಡ್ರಿ ಧೋನಿ ಬ್ರೇಕ್​​
IPL ಮುಗಿದ ಬೆನ್ನಲ್ಲೆ ಫಿಟ್ನೆಸ್​ ಕಡೆ ಗಮನ
ಜಿಮ್​​ನಲ್ಲಿ ಕಠಿಣ ವರ್ಕೌಟ್​​​​..ಏನಿದರ ಗುಟ್ಟು..?

ಧೋನಿ 17 ವರ್ಷಗಳ ಐಪಿಎಲ್ ಕರಿಯರ್​ನಲ್ಲಿ ಒಂದು ಸಂಪ್ರದಾವನ್ನು ಚಾಚು ತಪ್ಪದೇ ಫಾಲೋ ಮಾಡ್ತಿದ್ದರು. ಅದೇನಂದ್ರೆ ಐಪಿಎಲ್ ಟೂರ್ನಿ ಶುರುವಿಗೆ ಎರಡು ತಿಂಗಳು ಬಾಕಿ ಇದೆ ಅನ್ನುವಾಗ ಫಿಟ್ನೆಸ್ ಕಡೆ ಗಮನ ಕೊಡುತ್ತಿದ್ದರು. ಫುಲ್ ಫಿಟ್​ & ಫೈನ್​ ಆಗಿ ಐಪಿಎಲ್ ಅಖಾಡಕ್ಕೆ ಎಂಟ್ರಿ ಕೊಡುತ್ತಿದ್ದರು. ಉಳಿದ ಟೈಮ್​ ಅಲ್ಲಿ ಎಂದಿನಂತೆ ನಾರ್ಮಲ್ ಆಗಿ ಇರುತ್ತಿದ್ದರು. ತನ್ನಿಷ್ಟದ ಆಹಾರ ಸೇವಿಸಿ ದಪ್ಪವಾಗಿ ಕಾಣಿಸುತ್ತಿದ್ದರು. ಆದ್ರೀಗ ಫಾರ್​ ದ ಫಸ್ಟ್ ಟೈಮ್​​​​, ಧೋನಿ ಈ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ್ದಾರೆ.

ಇದನ್ನೂ ಓದಿ: IPL ಫೈನಲ್​​ನಲ್ಲಿ WPL ಘಟನೆಗಳು ಪುನರಾವರ್ತನೆ.. ಐದು ಅಚ್ಚರಿಯ ಕಾಕತಾಳೀಯಗಳು ಇಲ್ಲಿವೆ..! 

ಕಲರ್​ಫುಲ್ ಟೂರ್ನಿ ಮುಗಿಯುತ್ತಿದ್ದಂತೆ ಸಂಪೂರ್ಣ ವಿಶ್ರಾಂತಿ ಪಡೆಯುತ್ತಿದ್ದ ಮಾಹಿ, ಈ ಸಲ ಮಾತ್ರ ಹಾಗೇ ಮಾಡಿಲ್ಲ. ಚೆನ್ನೈ ಟೂರ್ನಿಯಿಂದ ಹೊರಬಿದ್ದಿದ್ದೇ ತಡ ಮತ್ತೆ ಜಿಮ್​ನತ್ತ ಮುಖ ಮಾಡಿದ್ದಾರೆ. ಆ ಮೂಲಕ ಫಿಟ್ನೆಸ್​ ಕಡೆ ಗಮನ ಹರಿಸಿದ್ದಾರೆ. ಇದು ಸಹಜವಾಗಿ ಧೋನಿ 2025ನೇ ಐಪಿಎಲ್​ ಆಡ್ತಾರಾ ಅನ್ನೋ ಪ್ರಶ್ನೆ ಹುಟ್ಟುವಂತೆ ಮಾಡಿದೆ.

ಕೆಲ ತಿಂಗಳಲ್ಲೇ ಧೋನಿ 18ನೇ IPL ಭವಿಷ್ಯ ನಿರ್ಧಾರ
ಮಾಹಿ ಮತ್ತೆ ಯೆಲ್ಲೋ ಜರ್ಸಿಯಲ್ಲಿ ಕಾಣಿಸಿಕೊಳ್ತಾರಾ..?
ಸದ್ಯ ಧೋನಿ ಫಿಟ್ನೆಸ್ ಕಡೆ ಒತ್ತು ಕೊಟ್ಟಿದ್ದಾರೆ. ಹಾಗೆಂದ ಮಾತ್ರಕ್ಕೆ 2025ನೇ ಐಪಿಎಲ್‌ನಲ್ಲಿ ಕಾಣಿಸಿಕೊಳ್ತಾರೆ ಅಂತಲ್ಲ. ಎಲ್ಲವೂ MUSCLE TEAR ಸರ್ಜರಿ ಮೇಲೆ ನಿಂತಿದೆ. ಮಾಹಿ ಹೀಗಾಗ್ಲೆ ಕೆಲ ತಿಂಗಳ ಬಳಿಕ ಮುಂದಿನ ಐಪಿಎಲ್​​ ಸೀಸನ್​​​​​​​​​​​​​ ಆಡುವುದರ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಸಿಎಸ್​ಕೆ ಫ್ರಾಂಚೈಸಿಗೆ ಹೇಳಿದ್ದಾರೆ. ಶೀಘ್ರದಲ್ಲಿ ಧೋನಿ ಸರ್ಜರಿಗೆ ಒಳಪಡಲಿದ್ದಾರೆ. ಬಳಿಕ ಕೆಲ ಸಮಯ ವಿಶ್ರಾಂತಿ ಪಡೆಯಲಿದ್ದಾರೆ. ರಿಕವರಿ ಬಳಿಕ ಆಡಲು ದೇಹ ಸ್ಪಂದಿಸಿದ್ರೆ ಮಾತ್ರ ಮತ್ತೆ ಯೆಲ್ಲೋ ಜರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಕ್ಷಣಕ್ಕಾಗಿ ಫ್ಯಾನ್ಸ್ ಕೂಡ ಕಾಯ್ತಿದ್ದಾರೆ.

ಎಂ.ಎಸ್ ಧೋನಿ ಆಟಗಾರನಾ? ಮೆಂಟರಾ? ಹೆಡ್​ಕೋಚಾ?
ಹಾಗೊಂದು ವೇಳೆ ಧೋನಿ 18ನೇ ಐಪಿಎಲ್​ಗೆ ಮರಳಿದ್ರೂ ಆಟಗಾರನಾಗಿ ಆಡ್ತಾರಾ, ಇಲ್ಲ ಮೆಂಟರ್ ಆಗ್ತಾರಾ ಅಥವಾ ಹೆಡ್​ಕೋಚ್​ ಆಗ್ತಾರಾ ಅನ್ನೋದು ಸಸ್ಪೆನ್ಸ್ ಆಗಿ ಉಳಿದಿದೆ. ಯಾಕಂದ್ರೆ ಸ್ಟೀಫನ್ ಫ್ಲೆಮಿಂಗ್​ ಟೀಮ್ ಇಂಡಿಯಾ ಹೆಡ್​ಕೋಚ್​​​ ಮೇಲೆ ಕಣ್ಣಿಟ್ಟಿದ್ದಾರೆ ಎಂದು ವರದಿಯಾಗಿದೆ. ಹಾಗೊಂದು ವೇಳೆ ಅದು ನಿಜವಾದ್ರೆ ಮಾಹಿ ಸಿಎಸ್​ಕೆ ಹೆಡ್​​​ಕೋಚ್​ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: RCB ವಿರುದ್ಧ ಸೋಲಿನ ಬಳಿಕ ಹೊಸ ತೀರ್ಮಾನಕ್ಕೆ ಬಂದ M.S ಧೋನಿ; ಫ್ಯಾನ್ಸ್‌ ಓದಲೇಬೇಕಾದ ಸ್ಟೋರಿ! 

ಧೋನಿ ಮತ್ತೆ ಸಿಎಸ್​ಕೆ ಪರ ಆಡಲಿ ಅನ್ನೋದು ಅಭಿಮಾನಿಗಳ ಹೆಬ್ಬಯಕೆಯಾಗಿದೆ. ಫ್ಯಾನ್ಸ್ ಡ್ರೀಮ್ ಅನ್ನ ಮಾಹಿ ಈಡೇರಿಸ್ತಾರಾ? ಈಡೇರಿಸಿದ್ರೂ ಅದು ಯಾವ ರೂಪದಲ್ಲಿ? ಅಥವಾ ಗುಡ್​​​ಬೈ ಹೇಳಿ​​ ಕಂಪ್ಲೀಟ್ ಐಪಿಎಲ್​ನಿಂದ ದೂರ ಆಗ್ತಾರಾ ಅನ್ನೋದಕ್ಕೆ ಕಾಲವೇ ಉತ್ತರಿಸಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

M.S ಧೋನಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌.. 2025ರಲ್ಲೂ ಐಪಿಎಲ್ ಆಡ್ತಾರಾ ಮಿಸ್ಟರ್ ಕೂಲ್? ಏನಿದರ ಗುಟ್ಟು?

https://newsfirstlive.com/wp-content/uploads/2024/05/MS-Dhoni-Gym-Work-Out.jpg

Load More