ಪಿಯುಸಿ ಪಾಸಾಗಿದ್ದೇನೆ, ಸರ್ಕಾರಿ ಕೆಲಸ ಬೇಕು ಅನ್ನೋ ಆಸೆ ಇದೆಯೇ?
ಕೇಂದ್ರ ಸರ್ಕಾರ ಹುದ್ದೆಯಾದ್ರೂ ಪರ್ವಾಗಿಲ್ಲ ಅನ್ನೋರಿಗೆ ಗುಡ್ನ್ಯೂಸ್!
ಸುದ್ದಿ ಪೂರ್ತಿ ಓದಿ ಕೂಡಲೇ ಕೇಂದ್ರ ಸರ್ಕಾರಿ ಕೆಲಸಕ್ಕೆ ಅಪ್ಲೈ ಮಾಡಿಬಿಡಿ
ಪಿಯುಸಿ ಪಾಸಾಗಿದ್ದೇನೆ, ನನಗೂ ಸರ್ಕಾರಿ ಕೆಲಸ ಬೇಕು ಅನ್ನೋ ಆಸೆ ಇದೆಯೇ? ರಾಜ್ಯ ಸರ್ಕಾರ ಮಾತ್ರವಲ್ಲ ಕೇಂದ್ರ ಸರ್ಕಾರ ಹುದ್ದೆಯಾದ್ರೂ ಪರ್ವಾಗಿಲ್ಲ. ದೇಶದ ಯಾವುದೇ ಪ್ರದೇಶದಲ್ಲಾದ್ರೂ ಕೆಲಸ ಮಾಡ್ತೀನಿ ಅನ್ನೋರಿಗೆ ಈ ಸುದ್ದಿ. ಸುದ್ದಿ ಪೂರ್ತಿ ಓದಿ ಕೂಡಲೇ ಸರ್ಕಾರಿ ಕೆಲಸಕ್ಕೆ ಅಪ್ಲೈ ಮಾಡಿ.
ಪ್ರತಿವರ್ಷ ಸಿಬ್ಬಂದಿ ನೇಮಕಾತಿ ಆಯೋಗ ಗಡಿ ಭದ್ರತಾ ಪಡೆ ಕಾನ್ಸ್‌ಟೇಬಲ್ ಮತ್ತು ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸುತ್ತದೆ. ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ವೇತನ ಎಷ್ಟು? ಅರ್ಹತೆಯೇನು? ನೇಮಕ ಪ್ರಕ್ರಿಯೆ ಹೇಗೆ ನಡೆಯುತ್ತೆ? ಅನ್ನೋ ಮಾಹಿತಿ ಇಲ್ಲಿದೆ.
ಬಿಎಸ್‌ಎಫ್ ಕಾನ್ಸ್‌ಟೇಬಲ್, ಹೆಡ್ ಕಾನ್ಸ್‌ಟೇಬಲ್, ಎಸ್‌ಐ, ಎಎಸ್‌ಐ ಪೋಸ್ಟ್‌ಗಳ ಭರ್ತಿಗೆ ಈ ವರ್ಷ ಕೂಡ ಅರ್ಜಿ ಆಹ್ವಾನ ಮಾಡಲಾಗಿದೆ. ಎಸ್‌ಎಸ್‌ಸಿ ಅಧಿಸೂಚನೆ ಬಿಡುಗಡೆ ಮಾಡಿದ್ದು, ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
BSF ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಹಾಕಲು ಅರ್ಹತೆಯೇನು?
ಬಿಎಸ್‌ಎಫ್ ಕಾನ್ಸ್‌ಟೇಬಲ್ ಪೋಸ್ಟ್‌ಗೆ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 – ಗರಿಷ್ಠ 25 ವರ್ಷ ಇರಬೇಕು. ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಗಡಿ ಪ್ರದೇಶಗಳಲ್ಲಿ ರಕ್ಷಣಾ ಸೇವೆ ಮಾಡಲು ಸಿದ್ಧರಾಗಿರಬೇಕು. ವೇತನ ಶ್ರೇಣಿ ರೂ.21,700- 69,100 ರೂ. ಇರಲಿದೆ. ಹಾಗೆಯೇ ಬಿಎಸ್ಎಫ್ ಹೆಡ್ ಕಾನ್ಸ್‌ಟೇಬಲ್ ವೇತನ ಶ್ರೇಣಿ ಪೇ ಮೆಟ್ರಿಕ್ಸ್ ಲೆವೆಲ್ 4ರ ಪ್ರಕಾರ ರೂ.25,500- 81,100 ರೂ. ಇರಲಿದೆ. ಇದಕ್ಕೆ ನೀವು ಮಾಡಬೇಕಾದದ್ದು 2 ಪೇಪರ್ ಲಿಖಿತ ಪರೀಕ್ಷೆ ಬರೆಯಬೇಕು ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ ಪೂರ್ಣಗೊಳಿಸಬೇಕು.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಮಹತ್ವದ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅಬ್ಬಬ್ಬಾ! ಸಂಬಳ ಮಾತ್ರ ₹1.52 ಲಕ್ಷದಿಂದ ₹2.7 ಲಕ್ಷ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ