newsfirstkannada.com

ಡೊನೇಷನ್ ಹಾವಳಿಗೆ ಬೇಸತ್ತ ಪೋಷಕರಿಗೆ ಸಿಹಿಸುದ್ದಿ; ಸರ್ಕಾರಿ ಶಾಲೆಯಲ್ಲೂ ಶುರುವಾಗುತ್ತಿದೆ ಪ್ರೀ ನರ್ಸರಿ

Share :

Published August 20, 2023 at 1:41pm

Update August 20, 2023 at 1:43pm

    ಎಲ್‌ಕೆಜಿಗೆ 4 ರಿಂದ 5 ವರ್ಷದೊಳಗಿನ ಮಕ್ಕಳಿಗೆ ಪ್ರವೇಶಾತಿ

    ರಾಜ್ಯದ 262 ಸರ್ಕಾರಿ ಶಾಲೆಗಳಲ್ಲಿ LKG ತರಗತಿಗಳು ಆರಂಭ

    ಪ್ರೀ ನರ್ಸರಿ ಮಕ್ಕಳಿಗೂ ಹಾಲು, ಊಟ, ಉಪಾಹಾರ ಉಚಿತ

ಬೆಂಗಳೂರು: ಲಕ್ಷ, ಲಕ್ಷ ಡೊನೇಷನ್ ಕಟ್ಟಿ ಸುಸ್ತಾಗಿರೋ ಪೋಷಕರಿಗೆ ರಾಜ್ಯ ಸರ್ಕಾರ ಒಂದು ಗುಡ್‌ನ್ಯೂಸ್‌ ಕೊಟ್ಟಿದೆ. ಇನ್ಮುಂದೆ ಸರ್ಕಾರಿ ಶಾಲೆಗಳಲ್ಲೂ ಪ್ರೀ ನರ್ಸರಿ ತರಗತಿಗಳು ಇರಲಿದೆ. ರಾಜ್ಯದ 262 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆ ಅಂದ್ರೆ ಪ್ರೀ ನರ್ಸರಿ ಅಥವಾ ಎಲ್‌ಕೆಜಿ ಶಾಲಾ ತರಗತಿಗಳನ್ನ ಪ್ರಾಯೋಗಿಕವಾಗಿ ನಡೆಸಲು ಪ್ಲಾನ್ ಮಾಡಿದೆ.

2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲೇ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದೇ ಆಗಸ್ಟ್ ತಿಂಗಳಿನಿಂದಲೇ ಸಿದ್ಧತೆ ಆರಂಭಿಸಲು ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಎಲ್‌ಕೆಜಿಗೆ 4 ರಿಂದ 5 ವರ್ಷದೊಳಗಿನ ಮಕ್ಕಳನ್ನು ಮಾತ್ರ ದಾಖಲಿಸಿಕೊಳ್ಳಬೇಕು. ಒಂದು ತರಗತಿಗೆ ಕನಿಷ್ಠ 20 ಮಕ್ಕಳು ಮತ್ತು ಗರಿಷ್ಠ 30 ಮಕ್ಕಳ ದಾಖಲಾತಿಗೆ ಅವಕಾಶ ನೀಡಲಾಗುತ್ತಿದೆ. ವಿಶೇಷ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಎಲ್‌ಕೆಜಿ ಒಂದು ವಿಭಾಗ ಮಾತ್ರ ಆರಂಭಿಸುವಂತೆ ಸೂಚನೆ ನೀಡಲಾಗಿದೆ.

ಹೇಗಿರಲಿದೆ ಪ್ರೀ ನರ್ಸರಿ ಶಾಲೆ?

ರಾಜ್ಯದ 262 ಸರ್ಕಾರಿ ಶಾಲೆಯಲ್ಲಿ ಪ್ರೀ ನರ್ಸರಿ ತರಗತಿಯನ್ನು ಶೀಘ್ರವೇ ಆರಂಭಿಸಲು ಸರ್ಕಾರ ಮುಂದಾಗಿದೆ. ಪೂರ್ವ ಪ್ರಾಥಮಿಕ ಶಾಲೆಗಳನ್ನ ನಡೆಸಲು ಪ್ರಾಥಮಿಕ ಶಾಲೆಗಳಲ್ಲಿ ಒಂದು ಸುಸಜ್ಜಿತ ಕೊಠಡಿ ಮೀಸಲಿಡಲಾಗುತ್ತಿದೆ. ಚಿತ್ರಕಲಾ ಶಿಕ್ಷಕರನ್ನ ಬಳಸಿಕೊಂಡು ಆಕರ್ಷಕವಾಗಿ ಚಿತ್ರ ಬಿಡಿಸಿ ಪಾಠ ಮಾಡಬೇಕು. ಅಗತ್ಯ ಸಾಧನ ಸಾಮಾಗ್ರಿಗಳನ್ನು ನಿಯಮಾನುಸಾರ ಖರೀದಿಸಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಮತ್ತೆ ಹೆಸರು ಬದಲಿಸಿಕೊಂಡ ಮಾಲಾಶ್ರೀ ಮುದ್ದಿನ ಮಗಳು; ಇನ್ಮುಂದೆ ಅವರು ರಾಧನಾ ಅಲ್ಲ..!

ಬೆಳಗ್ಗೆ 10ರಿಂದ ಮಧ್ಯಾಹ್ನ 3:30ರವರೆಗೆ ತರಗತಿ ನಡೆಸಬೇಕು. ಆಗಸ್ಟ್ ಅಂತ್ಯದೊಳಗೆ ಸರ್ಕಾರದಿಂದಲೇ ಪಠ್ಯ ಪುಸ್ತಕ ಪೂರೈಕೆ ಮಾಡಲಾಗುತ್ತಿದೆ. ಅಂಗನವಾಡಿಗಳಲ್ಲಿ ಮಕ್ಕಳಿಗೆ ನೀಡುವ ಹಾಲು, ಊಟ, ಉಪಾಹಾರ ಕೂಡ ಪ್ರೀ ನರ್ಸರಿ ಶಾಲೆಗಳಿಗೆ ನೀಡುವುದಾಗಿ ಸರ್ಕಾರ ತಿಳಿಸಿದೆ.

ಪ್ರೀ ನರ್ಸರಿ ಶಾಲೆಗಳಿಗೆ SDMCಗೆ ಅತಿಥಿ ಶಿಕ್ಷಕಿ ಅಥವಾ ಶಿಕ್ಷಕರೊಬ್ಬರನ್ನು ನೇಮಿಸಿಕೊಳ್ಳುವ ಹೊಣೆ ಹೊರಿಸಲಾಗಿದೆ. ಅತಿಥಿ ಶಿಕ್ಷಕರಿಗೆ ಮಾಸಿಕ 7,500 ರೂ, ಹಾಗೂ ಆಯಾರನ್ನು ನೇಮಿಸಿಕೊಳ್ಳಲು 5 ಸಾವಿರ ರೂಪಾಯಿ ಸಂಭಾವನೆ ನಿಗದಿಪಡಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡೊನೇಷನ್ ಹಾವಳಿಗೆ ಬೇಸತ್ತ ಪೋಷಕರಿಗೆ ಸಿಹಿಸುದ್ದಿ; ಸರ್ಕಾರಿ ಶಾಲೆಯಲ್ಲೂ ಶುರುವಾಗುತ್ತಿದೆ ಪ್ರೀ ನರ್ಸರಿ

https://newsfirstlive.com/wp-content/uploads/2023/08/Government-School-1.jpg

Load More