newsfirstkannada.com

ಬಿಗ್‌ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ, ಜಾಹ್ನವಿ ‘ಅಧಿಪತ್ರ’ ಸಿನಿಮಾ ತಂಡದಿಂದ ಗುಡ್‌ನ್ಯೂಸ್‌

Share :

Published May 6, 2024 at 5:45pm

    ರೂಪೇಶ್ ಶೆಟ್ಟಿ, ಜಾಹ್ನವಿ ಅಭಿನಯದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ

    ಅಧಿಪತ್ರ ಸಿನಿಮಾದ ಆಡಿಯೋ ರೈಟ್ಸ್‌ ಭಾರೀ ಮೊತ್ತಕ್ಕೆ ಖರೀದಿಸಿದ ಲಹರಿ

    ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯೂಸಿಯಾಗಿರುವ ಅಧಿಪತ್ರ ಚಿತ್ರತಂಡ

ಬೆಂಗಳೂರು: ಬಿಗ್‌ಬಾಸ್ ಸೀಸನ್ 9ರ ವಿನ್ನರ್‌ ರೂಪೇಶ್ ಶೆಟ್ಟಿ ಹಾಗೂ ನಟಿ ಜಾಹ್ನವಿ ಅಭಿನಯದ ಅಧಿಪತ್ರ ಚಿತ್ರತಂಡ ಬಿಗ್‌ ಅಪ್ಡೇಟ್ ನೀಡಿದೆ. ಅಧಿಪತ್ರ ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಸಿನಿಮಾದ ಟೀಸರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಅಧಿಪತ್ರ ಟೀಸರ್ ಬಿಡುಗಡೆಯ ಜೊತೆಗೆ ಸಿನಿಮಾದ ಆಡಿಯೋ ರೈಟ್ಸ್‌ ಭಾರೀ ಮೊತ್ತಕ್ಕೆ ಸೇಲ್ ಆಗಿದೆ.

ರೂಪೇಶ್ ಶೆಟ್ಟಿ ಹಾಗೂ ಜಾಹ್ನವಿ ಅಭಿನಯದ ಅಧಿಪತ್ರ ಸಿನಿಮಾದ ಆಡಿಯೋ ಹಕ್ಕನ್ನು ಪ್ರತಿಷ್ಠಿತ ಆಡಿಯೋ ಸಂಸ್ಥೆ ಲಹರಿ ಖರೀದಿ ಮಾಡಿದೆ. ಅಧಿಪತ್ರ ಸಿನಿಮಾ ಶೂಟಿಂಗ್ ಹಾಗೂ ಮೇಕಿಂಗ್‌ನಿಂದಲೇ ಎಲ್ಲರ ಗಮನ ಸೆಳೆದಿತ್ತು. ಇದೀಗ ಟೀಸರ್ ಬಿಡುಗಡೆ ಮಾಡುವ ಸಂದರ್ಭದಲ್ಲಿ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆಯ ಪಾಲಾಗಿದೆ.

ಬಹು ನಿರೀಕ್ಷಿತ ಅಧಿಪತ್ರ ಸಿನಿಮಾದ ಟೀಸರ್‌ ಅನ್ನು ಇದೇ ಮೇ 10ಕ್ಕೆ ಬಿಡುಗಡೆ ಮಾಡಲಾಗುತ್ತಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯೂಸಿಯಾಗಿರುವ ಅಧಿಪತ್ರ ಚಿತ್ರತಂಡ ಲಹರಿ ಆಡಿಯೋದಲ್ಲಿ ಅಧಿಪತ್ರ ಚಿತ್ರದ ಮೊದಲ ಝಲಕ್ ಬಿಡುಗಡೆ ಮಾಡುತ್ತಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದೆ.

ಇದನ್ನೂ ಓದಿ: 120-130 ವರ್ಷ ಜೀವಿಸಬಹುದು.. ವಯಸ್ಸು ಜಾಸ್ತಿ ಮಾಡೋ ಔಷಧ ಸಂಶೋಧನೆ; ವಿಜ್ಞಾನಿಗಳು ಹೇಳಿದ್ದೇನು? 

ಅಧಿಪತ್ರ ಸಿನಿಮಾ ನೈಜ ಘಟನೆಯಿಂದ ಸ್ಫೂರ್ತಿ ಪಡೆದು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಯಲ್ಲಿ ಮೂಡಿ ಬಂದಿದೆ. ಚಯನ್ ಶೆಟ್ಟಿ ಅಧಿಪತ್ರ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕೆ. ಆರ್ ಸಿನಿ ಕಂಬೈನ್ಸ್ ಬ್ಯಾನರ್‌ನಡಿ‌ ದಿವ್ಯಾ ನಾರಾಯಣ್, ಕುಲದೀಪ್ ರಾಘವ್ ಲಕ್ಷ್ಮಿ ಗೌಡ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್‌ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ, ಜಾಹ್ನವಿ ‘ಅಧಿಪತ್ರ’ ಸಿನಿಮಾ ತಂಡದಿಂದ ಗುಡ್‌ನ್ಯೂಸ್‌

https://newsfirstlive.com/wp-content/uploads/2024/05/Adhipatra-Movie.jpg

Load More