newsfirstkannada.com

ಗೂಗಲ್‌ ಸಹ ಸಂಸ್ಥಾಪಕನ ಪತ್ನಿ ಜೊತೆ ಎಲೋನ್ ಮಸ್ಕ್‌ ಅಕ್ರಮ ಸಂಬಂಧ?; ಸದ್ದಿಲ್ಲದೇ ಡಿವೋರ್ಸ್‌ ಕೊಟ್ಟ ಸೆರ್ಗೆ ಬ್ರಿನ್‌

Share :

Published September 16, 2023 at 8:46pm

Update September 16, 2023 at 8:47pm

  ವಿಶ್ವದ ಇಬ್ಬರು ಶ್ರೀಮಂತ ಉದ್ಯಮಿಗಳ ಮಧ್ಯೆ ‘ಸಂಗಾತಿ’ಗಾಗಿ ಕಿತ್ತಾಟ

  2015ರಲ್ಲಿ ಡೇಟಿಂಗ್ ಆರಂಭಿಸಿದ್ದ ಸೆರ್ಗೆ ಬ್ರಿನ್, ನಿಕೋಲ್ ಶಾನಹನ್

  ನಿಕೋಲ್ ಶಾನಹನ್‌ ಜೊತೆ ಎಲೋನ್ ಮಸ್ಕ್ ರೊಮ್ಯಾನ್ಸ್‌ ನಿಜಾನಾ?

ನ್ಯೂಯಾರ್ಕ್‌: ವಿಶ್ವದ ಇಬ್ಬರು ಶ್ರೀಮಂತ ಉದ್ಯಮಿಗಳ ಮಧ್ಯೆ ಹೆಣ್ಣಿನ ವಿಚಾರದಲ್ಲಿ ಜಗಳ ಶುರುವಾಗಿದೆ. ಗೂಗಲ್ ಸಹ ಸಂಸ್ಥಾಪಕ ಸೆರ್ಗೆ ಬ್ರಿನ್ ಅವರು ಸದ್ದಿಲ್ಲದೇ ತಮ್ಮ ಪತ್ನಿ ನಿಕೋಲ್ ಶಾನಹನ್‌ಗೆ ಡಿವೋರ್ಸ್‌ ಕೊಟ್ಟಿದ್ದಾರೆ. ನಿಕೋಲ್ ಶಾನಹನ್‌ ಜೊತೆ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ ಜೊತೆ ಸಂಬಂಧ ಹೊಂದಿದ್ದ ಆರೋಪ ಕೇಳಿ ಬಂದಿತ್ತು. ಹೆಂಡತಿಯಿಂದ ಅಂತರ ಕಾಯ್ದುಕೊಂಡಿದ್ದ ಗೂಗಲ್ ಸಹ ಸಂಸ್ಥಾಪಕ ಕೊನೆಗೂ ತಮ್ಮ ಪತ್ನಿಗೆ ವಿಚ್ಛೇದನ ನೀಡಿದ್ದಾರೆ ಎನ್ನಲಾಗಿದೆ.

ಗೂಗಲ್ ಸಹ ಸಂಸ್ಥಾಪಕ ಸೆರ್ಗೆ ಬ್ರಿನ್ ಅವರು ಕಳೆದ ಮೇ ತಿಂಗಳಲ್ಲೇ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಪತ್ನಿ ನಿಕೋಲ್ ಶಾನಹನ್ ಇದಕ್ಕೆ ಒಪ್ಪಿರಲಿಲ್ಲ. ವೃತ್ತಿಯಲ್ಲಿ ವಕೀಲೆ ಹಾಗೂ ಉದ್ಯಮಿ ಆಗಿರುವ ಶಾನಹನ್ ಅವರು ಪತಿಯಿಂದ ಬೃಹತ್ ಮೊತ್ತದ ಪರಿಹಾರ ಕೋರಿದ್ದರು ಎನ್ನಲಾಗಿದೆ. ಕೋರ್ಟ್‌ನಲ್ಲಿ ರಹಸ್ಯ ಮಧ್ಯಸ್ಥಿಕೆ ನಡೆದಿದ್ದು, ಆಸ್ತಿಯ ಪಾಲುದಾರಿಕೆ ಸೇರಿದಂತೆ ಪರಿಹಾರದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಾಗಿದೆ. ಇದೀಗ ಸೆರ್ಗೆ ಬ್ರಿನ್ ಹಾಗೂ ಶಾನಹನ್ ದಂಪತಿ ವಿಚ್ಛೇದನ ಪಡೆದಿದ್ದಾರೆ ಎನ್ನಲಾಗಿದೆ.

ಗೂಗಲ್ ಸಹ ಸಂಸ್ಥಾಪಕ ಸೆರ್ಗೆ ಬ್ರಿನ್, ನಿಕೋಲ್ ಶಾನಹನ್‌ ಜೊತೆ ಎಲೋನ್ ಮಸ್ಕ್

ಇದನ್ನೂ ಓದಿ: ಅಮೆರಿಕಾದ ಬುಲ್ಲಿ ಡಾಗ್‌ಗೆ ಬೆಚ್ಚಿ ಬಿದ್ದ ಇಂಗ್ಲೆಂಡ್‌; ಬ್ಯಾನ್ ಮಾಡಲು ಪ್ರಧಾನಿ ರಿಷಿ ಸುನಕ್‌ ಆದೇಶ; ಏನಾಯ್ತು?

ಸೆರ್ಗೆ ಬ್ರಿನ್ ಹಾಗೂ ನಿಕೋಲ್ ಶಾನಹನ್ 2015ರಲ್ಲಿ ಡೇಟಿಂಗ್ ನಡೆಸಿದ್ದರು. 2018ರಲ್ಲಿ ಮೊದಲ ಪತ್ನಿಗೆ ಡಿವೋರ್ಸ್ ಕೊಟ್ಟಿದ್ದ ಸೆರ್ಗೆ ಬ್ರಿನ್ ಅವರು ನಿಕೋಲ್ ಶಾನಹನ್‌ ಅವರ ವಿವಾಹವಾಗಿದ್ದರು. ಇದಾದ ಮೇಲೆ ಇವರಿಬ್ಬರ ಮಧ್ಯೆ ಜಗತ್ತಿನ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ ಅವರ ಹೆಸರು ತಳುಕು ಹಾಕಿಕೊಂಡಿದೆ. ನಿಕೋಲ್ ಶಾನಹನ್ ಜೊತೆ ಎಲೋನ್ ಮಸ್ಕ್ ಅವರ ಸಂಬಂಧದ ಆರೋಪ ಕೇಳಿ ಬಂದಿದ್ದು, 2021ರಲ್ಲಿ ಸೆರ್ಗೆ ಬ್ರಿನ್ ದಂಪತಿ ಬೇರೆ, ಬೇರೆಯಾಗಿ ವಾಸಿಸುತ್ತಿದ್ದರು. ಎಲಾನ್ ಮಸ್ಕ್‌ ಸಂಬಂಧದ ಅನುಮಾನ ಜಾಸ್ತಿಯಾಗಿ ಸೆರ್ಗೆ ಬ್ರಿನ್ ಅವರು 2022ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ಎಲೋನ್ ಮಸ್ಕ್ ಅವರೊಂದಿಗೆ ತನ್ನ ಪತ್ನಿ ಸಂಬಂಧವನ್ನು ಹೊಂದಿದ್ದರು ಎಂದು ಸೆರ್ಗೆ ಬ್ರಿನ್ ಆರೋಪಿಸಿದ್ದರು. ಆದ್ರೆ ಈ ಆರೋಪವನ್ನು ಎಲೋನ್ ಮಸ್ಕ್‌ ಅವರು ನಿರಾಕರಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದ ಅವರು, ಇದು ಸಂಪೂರ್ಣವಾಗಿ ಆಧಾರರಹಿತವಾದ ಆರೋಪವಾಗಿದೆ. ನಾನು ನಿಕೋಲ್ ಶಾನಹನ್ ಅವರ ಅಪರೂಪದ ಗೆಳೆಯ. ಮೂರು ವರ್ಷಗಳಲ್ಲಿ 2 ಬಾರಿ ಮಾತ್ರ ಅವರನ್ನು ನೋಡಿದ್ದೇನೆ. ಆ 2 ಬಾರಿಯೂ ತುಂಬಾ ಜನರ ಮಧ್ಯೆಯೇ ಭೇಟಿಯಾಗಿದ್ದೇನೆ. ಇದರಲ್ಲಿ ಯಾವುದೇ ರೊಮ್ಯಾನ್ಸ್‌ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಎಲೋನ್ ಮಸ್ಕ್ ಅವರ ಈ ಮಾತಿನ ಬಳಿಕವೂ ಗೂಗಲ್ ಸಹ ಸಂಸ್ಥಾಪಕ ದಾಂಪತ್ಯ ಸರಿ ಹೋಗದೇ ಡಿವೋರ್ಸ್‌ ಅಲ್ಲಿ ಅಂತ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಗೂಗಲ್‌ ಸಹ ಸಂಸ್ಥಾಪಕನ ಪತ್ನಿ ಜೊತೆ ಎಲೋನ್ ಮಸ್ಕ್‌ ಅಕ್ರಮ ಸಂಬಂಧ?; ಸದ್ದಿಲ್ಲದೇ ಡಿವೋರ್ಸ್‌ ಕೊಟ್ಟ ಸೆರ್ಗೆ ಬ್ರಿನ್‌

https://newsfirstlive.com/wp-content/uploads/2023/09/Elon-Musk-1.jpg

Load More