newsfirstkannada.com

ಹಮೀದಾ ಬಾನುಗೆ ಗೂಗಲ್​ ಡೂಡಲ್​ ಗೌರವ.. ಪುರುಷರನ್ನೇ ಕುಸ್ತಿಯಲ್ಲಿ ಸೋಲಿಸಿದ ಗಟ್ಟಿಗಿತ್ತಿ ಈಕೆ

Share :

Published May 4, 2024 at 2:05pm

Update May 4, 2024 at 2:08pm

    ಒಂದಲ್ಲಾ, ಎರಡಲ್ಲಾ 300 ಪಂದ್ಯಗಳನ್ನು ಗೆದ್ದ ಮಹಿಳಾ ಕುಸ್ತಿಪಟು

    ಕುಸ್ತಿಯಾಡಿ ಸೋಲಿಸುವ ಗಂಡಿನ ಜೊತೆ ವಿವಾಹ ಎಂದು ಸವಾಲೆಸೆದ ಮಹಿಳೆ

    ಪಟಿಯಲಾ ಚಾಂಪಿಯನ್​, ಛೋಟೆ ಗಾಮಾ ಪಹಲ್ವಾನ್​ನನ್ನು ಸೋಲಿಸಿದ ಗಟ್ಟಿಗಿತ್ತಿ

ಇಂದು ಮೇ 4. ಜನಪ್ರಿಯ ಗೂಗಲ್​ ತನ್ನ ಡೂಡಲ್​ ಅನ್ನು ವಿನ್ಯಾಸಗೊಳಿಸಿದೆ. ಭಾರತೀಯ ಮಹಿಳೆಯೊಬ್ಬರನ್ನು ತನ್ನ ಡೂಗಲ್​ನಲ್ಲಿ ಚಿತ್ರಿಸಿದೆ. ಅಂದಹಾಗೆಯೇ ಈಕೆ ಯಾರು ಗೊತ್ತಾ? ಮಾಡಿರುವ ಸಾಧನೆ ಎಂಥಾದ್ದು ಗೊತ್ತಾ? ಈ ಸ್ಟೋರಿ ಓದಿ.

ಹಮೀದಾ ಬಾನು. ಈಕೆ ಭಾರತದ ವೃತ್ತಿಪರ ಕುಸ್ತಿಪಟು. 1900ರ ದಶಕದಲ್ಲಿ ಉತ್ತರ ಪ್ರದೇಶದ ಅಲಿಗಢದಲ್ಲಿ ಜನಿಸಿದರು. ಬೆಳೆಯುತ್ತಾ ಕುಸ್ತಿ ಪಂದ್ಯದಲ್ಲಿ ಸಾಧನೆ ಬರೆದರು. ಅಚ್ಚರಿ ಸಂಗತಿ ಎಂದರೆ ಸುಮಾರು 300 ಪಂದ್ಯಗಳನ್ನು ಇವರು ಗೆದ್ದಿದ್ದಾರೆ. ಹೀಗಾಗಿ ಹಮೀದಾ ಬಾನು ಅವರನ್ನು ‘ಅಮೆಜಾನ್​ ಆಫ್​ ಅಲಿಘರ್​’ ಎಂದು ಕರೆಯುತ್ತಾರೆ.

ಅಂದಹಾಗೆಯೇ ಹಮೀದಾ ಬಾನು ಕುಸ್ತಿ ಆಡುವ ಕುಟುಂಬದಲ್ಲಿ ಜನಿಸಿದರು. ಅಂದಿನ ಕಾಲದಲ್ಲಿ ಮಹಿಳೆಯರು ಕುಸ್ತಿ ಆಡುವ ವಿರೋಧದ ನಡುವೆಯು ಹಮೀದಾ ಬಾನು ತನ್ನ ಕೌಶಲ್ಯವನ್ನು ಬೆಳೆಸಿಕೊಂಡರು. ಹೀಗೆ ಬೆಳೆಯುತ್ತಾ ವೃತ್ತಿಪರ ಕುಸ್ತಪಟುವಾದರು.

1940ರಿಂದ 1950ರ ದಶಕದವರೆಗೆ ಹಮೀದಾ ಬಾನು ಅನೇಕ ಪಂದ್ಯಗಳಲ್ಲಿ ಜಯಿಸಿದ್ದಾರೆ. ಪಟಿಯಲಾ ಚಾಂಪಿಯನ್​, ಛೋಟೆ ಗಾಮಾ ಪಹಲ್ವಾನ್​ನಂತಹ ಪ್ರಸಿದ್ಧ ಕುಸ್ತಿಪಟುವನ್ನು ಸೋಲಿಸಿದ್ದಾರೆ.

ಮತ್ತೊಂದು ಅಚ್ಚರಿ ಸಂಗತಿ ಎಂದರೆ ಹಮೀದಾ ಬಾನು ತನ್ನನ್ನು ಕುಸ್ತಿಯಲ್ಲಿ ಸೋಲಿಸಿದ ಗಂಡಿನ ಜೊತೆಗೆ ಮದುವೆಯಾಗುವುದಾಗಿ ಸಾರ್ವಜನಿಕ ಸವಾಲು ಹಾಕುತ್ತಾಳೆ. ಅದರಂತೆ ಬರೋಡಾದ ಮಹರಾಜರು ಛೋಟೆ ಗಾಮಾ ಪಹಲ್ವಾನ್​ನನ್ನು ಆಕೆಯ ವಿರುದ್ಧ ಸ್ಫರ್ಧಿಸಲು ಬಿಡುತ್ತಾರೆ. ಆದರೆ ಅವರು ಮಹಿಳೆ ಜೊತೆ ಕುಸ್ತಿ ಆಡುವುದಿಲ್ಲ ಎಂದು ಪಂದ್ಯದಿಂದ ಹೊರಬಂದರು ಎನ್ನಲಾಗುತ್ತಿದೆ.

ಮಾಹಿತಿ ಪ್ರಕಾರ ಹಮೀದಾ ಬಾನು 108 ಕೆಜಿ ತೂಕ. 5.3 ಫೀಟ್ ಎತ್ತರವನ್ನು ಹೊಂದಿದ್ದಳು. ಕುಸ್ತಿ ಆಡಲು ಆಕೆ ಆರು ಮೊಟ್ಟೆ, ಎರಡು ಬ್ರೆಡ್​, 2 ಪ್ಲೇಟ್​ ಬಿರಿಯಾನಿ, 2.8 ಲೀಟರ್​ ಸೂಪ್​, 1.8 ಲೀಟರ್​ ಜ್ಯೂಸ್​, ಕೋಳಿ, ಆಡು, ಬಾದಾಮಿ ಮತ್ತು ಅರ್ಧ ಕೆಜಿ ಬೆಣ್ಣೆ ಸೇವಿಸುತ್ತಿದ್ದಳಂತೆ​.

ಇದನ್ನೂ ಓದಿ: ಯಾವ ಮಾಡೆಲ್​ಗೂ ಕಮ್ಮಿ ಇಲ್ಲ ವಿಲ್​ ಜಾಕ್ಸ್​ ಲವ್ವರ್​! ಕಾಲೇಜು ವಿದ್ಯಾರ್ಥಿಯನ್ನ ಲವ್​ ಮಾಡ್ತಿದ್ದಾರಾ RCB ಪ್ಲೇಯರ್​?

ಅಂದಹಾಗೆಯೇ ಮೇ4ರಂದು ಹಮೀದಾ ಬಾನು ಅವರ ಹುಟ್ಟುಹಬ್ಬ. ಹೀಗಾಗಿ ಗೂಗಲ್​ ಇಂಥಾ ದೊಡ್ಡ ಸಾಧನೆ ಮಾಡಿದ ಗಟ್ಟಿಗಿತ್ತಿಯನ್ನು ಸ್ಮರಿಸಿಕೊಂಡಿದೆ. ವಿಶೇಚಷ ಡೀಡಲ್​ ರಚಿಸುವ ಮೂಲಕ ನೆನಪಿಸಿಕೊಂಡಿದೆ. ಹಮೀದಾ ಸಾಧನೆ ಈಕೆ ಯುವತಿಯರಿಗೆ ಸ್ಫೂರ್ತಿ ಎಂದರೆ ತಪ್ಪಾಗಲಾರದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಮೀದಾ ಬಾನುಗೆ ಗೂಗಲ್​ ಡೂಡಲ್​ ಗೌರವ.. ಪುರುಷರನ್ನೇ ಕುಸ್ತಿಯಲ್ಲಿ ಸೋಲಿಸಿದ ಗಟ್ಟಿಗಿತ್ತಿ ಈಕೆ

https://newsfirstlive.com/wp-content/uploads/2024/05/hamida-banu.jpg

Load More