ಗೋವಾದಲ್ಲಿ ನಾಪತ್ತೆಯಾಗಿದ್ದ ನೇಪಾಳದ ಮೇಯರ್ ಪುತ್ರಿ ಪ್ರತ್ಯಕ್ಷ.. ಅಸಲಿಗೆ ಆಗಿದ್ದೇನು?

author-image
Veena Gangani
Updated On
ಗೋವಾದಲ್ಲಿ ನಾಪತ್ತೆಯಾಗಿದ್ದ ನೇಪಾಳದ ಮೇಯರ್ ಪುತ್ರಿ ಪ್ರತ್ಯಕ್ಷ.. ಅಸಲಿಗೆ ಆಗಿದ್ದೇನು?
Advertisment
  • ಕೆಲವು ತಿಂಗಳುಗಳಿಂದ ಗೋವಾದಲ್ಲಿ ವಾಸ್ತವ್ಯ ಹೂಡಿದ್ದ ಮೇಯರ್ ಪುತ್ರಿ
  • ನೇಪಾಳದ ಮೇಯರ್ ಗೋಪಾಲ್ ಹಮಾಲ್ ಪುತ್ರಿ ಆರತಿ ಹಮಾಲ್ ಕಾಣೆ
  • ಅಶ್ವೆಮ್ ಸೇತುವೆಯ ಸಮೀಪದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಆರತಿ

ಕಠ್ಮಂಡು: ನೇಪಾಳದ ಮೇಯರ್ ಗೋಪಾಲ್ ಹಮಾಲ್ ಎಂಬುವವರ ಪುತ್ರಿ ಗೋವಾದಲ್ಲಿ ನಾಪತ್ತೆಯಾಗಿ ಎರಡು ದಿನಗಳ ಬಳಿಕ ಪತ್ತೆಯಾಗಿದ್ದಾರೆ. ಆರತಿ ಹಮಾಲ್ (36) ಕಾಣೆಯಾಗಿದ್ದ ಮೇಯರ್ ಮಗಳು. ಆರತಿ ಹಮಾಲ್ ಕಳೆದ ಕೆಲವು ತಿಂಗಳುಗಳಿಂದ ಗೋವಾದಲ್ಲಿ ವಾಸ್ತವ್ಯ ಹೂಡಿದ್ದರು.

ಇದನ್ನೂ ಓದಿ:ನಟ ಕಿಚ್ಚ ಸುದೀಪ್ vs ಎಮ್.ಎನ್.ಕುಮಾರ್ ಕೇಸ್​​; ಹೈಕೋರ್ಟ್​ನಿಂದ ಮಹತ್ವದ ಆದೇಶ.. ಏನದು?

ಓಶೋ ಧ್ಯಾನದ ಅನುಯಾಯಿ ಆಗಿರುವ ಆರತಿ ಹಮಾಲ್ ಸೋಮವಾರ ರಾತ್ರಿ 9.30ರ ಸುಮಾರಿಗೆ ಅಶ್ವೆಮ್ ಸೇತುವೆಯ ಸಮೀಪದಲ್ಲಿ ಆರತಿ ಕೊನೆಯದಾಗಿ ಕಾಣಿಸಿಕೊಂಡಿದ್ದರಂತೆ. ಬಳಿಕ ಯಾವುದೇ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ ಎಂದು ಆಕೆಯ ಸ್ನೇಹಿತೆ ಆಕೆಯ ಈ ಬಗ್ಗೆ ಕುಟುಂಬಸ್ಥರಿಗೆ ತಿಳಿಸಿದ್ದರು.

ಈ ವಿಚಾರ ತಿಳಿಯುತ್ತಿದ್ದಂತೆ ಧಂಗಧಿ ಉಪ-ಮಹಾನಗರದ ಮೇಯರ್ ಗೋಪಾಲ್ ಹಮಾಲ್ ಅವರು ತಮ್ಮ ಹಿರಿಯ ಮಗಳನ್ನು ಹುಡುಕಲು ಸಹಾಯ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಮಾಡಿ ಮನವಿ ಮಾಡಿಕೊಂಡಿದ್ದರು. ನನ್ನ ಹಿರಿಯ ಮಗಳು, ಆರತಿ ಅವರು ಓಶೋ ಧ್ಯಾನಸ್ಥರಾಗಿದ್ದರು. ಅವರು ಕೆಲವು ತಿಂಗಳುಗಳಿಂದ ಗೋವಾದಲ್ಲಿ ವಾಸಿಸುತ್ತಿದ್ದರು. ಆದರೆ ಆರತಿ ಜೋರ್ಬಾ ವೈಬ್ಸ್ ಅಶ್ವೆಮ್ ಬ್ರೀಜ್ ಅವರ ಸಂಪರ್ಕವನ್ನು ಕಳೆದುಕೊಂಡಿದ್ದಾರೆ ಎಂದು ಅವರ ಸ್ನೇಹಿತೆಯಿಂದ ನನಗೆ ಸಂದೇಶ ಬಂದಿದೆ. ನಾನು ವಿನಮ್ರವಾಗಿ ವಿನಂತಿಸುತ್ತೇನೆ. ಗೋವಾದಲ್ಲಿ ವಾಸಿಸುವವರು ನನ್ನ ಮಗಳು ಆರತಿಯ ಹುಡುಕಾಟದಲ್ಲಿ ಸಹಾಯ ಮಾಡುತ್ತಾರೆ. ನಮ್ಮ ಹಿರಿಯ ಮಗಳು ಆರತಿಯನ್ನು ಹುಡುಕಲು ನನ್ನ ಕಿರಿಯ ಮಗಳು ಅರ್ಜೂ ಮತ್ತು ಅಳಿಯ ಇಂದು ರಾತ್ರಿ ಗೋವಾಕ್ಕೆ ಹೋಗ್ತಿದ್ದಾರೆ ಎಂದು ಅವರು ಬರೆದುಕೊಂಡಿದ್ದರು. ಇನ್ನು, ಆರತಿ ಹಮಾಲ್ ಕಾಣಿಯಾಗಿರೋ ಮಾಹಿತಿ ತಿಳಿದ ಕೂಡಲೇ ದೂರನ್ನು ದಾಖಲಿಸಿಕೊಂಡ ಗೋವಾ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಇದಾದ ಬಳಿಕ ಪೊಲೀಸರು ತೀವ್ರ ಹುಡುಕಾಟ ನಡೆಸಿದ ಬಳಿಕ ನೇಪಾಳದ ಮೇಯರ್ ಪುತ್ರಿ ಸಿಕ್ಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment