newsfirstkannada.com

ನಟ ಕಿಚ್ಚ ಸುದೀಪ್ vs ಎಮ್.ಎನ್.ಕುಮಾರ್ ಕೇಸ್​​; ಹೈಕೋರ್ಟ್​ನಿಂದ ಮಹತ್ವದ ಆದೇಶ.. ಏನದು?

Share :

Published March 27, 2024 at 8:49am

    ಸಮನ್ಸ್ ರದ್ದು ಕೋರಿ ನಿರ್ಮಾಪಕ ಎನ್.ಎಂ.ಸುರೇಶ್ ಅರ್ಜಿ ಸಲ್ಲಿಕೆ

    ಬೆಂಗಳೂರಿನ 13ನೇ ಎಸಿಎಂಎಂ ಕೋರ್ಟ್ ಸಮನ್ಸ್ ಜಾರಿಗೊಳಿಸಿತ್ತು.

    ಅರ್ಜಿ ವಜಾಗೊಳಿಸಿ ಎಂದು ಆದೇಶ ಹೊರಡಿಸಿದ ನ್ಯಾ. ಎಸ್. ವಿಶ್ವಜಿತ್

ಬೆಂಗಳೂರು: ಸ್ಯಾಂಡಲ್​ವುಡ್​ ಸ್ಟಾರ್ ಕಿಚ್ಚ ಸುದೀಪ್​ ವಿರುದ್ಧ ನಿರ್ಮಾಪಕ ಮತ್ತು ವಿತರಕ ಎಮ್.ಎನ್​.ಕುಮಾರ್ ಅವರು ಗಂಭೀರ ಆರೋಪ ಮಾಡಿದ್ದರು. ನನಗೆ ಕಾಲ್​ಶೀಟ್ ಕೊಡುತ್ತೇನೆ ಎಂದು ಹೇಳಿ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದು ಸಾಲು ಸಾಲು ಆರೋಪ ಮಾಡಿದ್ದರು. ಈ ಪ್ರಕರಣ ಕೋರ್ಟ್​ ಮೆಟ್ಟಿಲೇರಿತ್ತು.

ಇದನ್ನೂ ಓದಿ: ಸುದೀಪ್ vs ಎಮ್.ಎನ್.ಕುಮಾರ್; ಕಿಚ್ಚನ ವಿರುದ್ಧ ಮುಂದಿನ ಹೆಜ್ಜೆ ಇಡಲು ಮುಂದಾದ ಮಾಣಿಕ್ಯ ನಿರ್ಮಾಪಕ

ಇದೀಗ ನಟ ಕಿಚ್ಚ ಸುದೀಪ್ ಅವರು ನಿರ್ಮಾಪಕರ ವಿರುದ್ಧ ದಾಖಲಿಸಿದ್ದ ಕೇಸ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ನಿರ್ಮಾಪಕ ಎನ್.ಎಂ. ಸುರೇಶ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಸುದ್ದಿಗೋಷ್ಠಿಯಲ್ಲಿ ಸುದೀಪ್ ಅವರ ವಿರುದ್ಧ ಎಂ.ಎನ್. ಕುಮಾರ್ ಮತ್ತು ಸುರೇಶ್ ಆರೋಪ ಮಾಡಿದ್ದರು. ಈ ಆರೋಪಗಳಿಂದ ನನ್ನ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ನಟ ಸುದೀಪ್ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಇದನ್ನೂ ಓದಿ: ಹೋಳಿ ಸಂಭ್ರಮದ ವೇಳೆ ಸ್ಪೀಕರ್​ ಬಾಕ್ಸ್​ ಬಿದ್ದು 6 ವರ್ಷದ ಬಾಲಕ ಸಾವು

ಈ ಕೇಸ್​ ಸಂಬಂಧ ಬೆಂಗಳೂರಿನ 13ನೇ ಎಸಿಎಂಎಂ ಕೋರ್ಟ್ ಸಮನ್ಸ್ ಜಾರಿ ಮಾಡಿದ್ದು, ಸಮನ್ಸ್ ರದ್ದು ಕೋರಿ ಸುರೇಶ್ ಅರ್ಜಿ ಸಲ್ಲಿಸಿದ್ದರು. ಸುದೀಪ್ ಮಾನನಷ್ಟವಾಗಿದೆ ಎಂದು ಹೇಳಿದ್ದು, ವಿಚಾರಣಾ ನ್ಯಾಯಾಲಯ ಸಮನ್ಸ್ ಜಾರಿ ಮಾಡಿರುವುದು ಸೂಕ್ತವಾಗಿದೆ ಎಂದು ನ್ಯಾ. ಎಸ್. ವಿಶ್ವಜಿತ್ ಅವರಿದ್ದ ಹೈಕೋರ್ಟ್ ಪೀಠದಿಂದ ಅರ್ಜಿ ವಜಾಗೊಳಿಸಿ ಆದೇಶ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟ ಕಿಚ್ಚ ಸುದೀಪ್ vs ಎಮ್.ಎನ್.ಕುಮಾರ್ ಕೇಸ್​​; ಹೈಕೋರ್ಟ್​ನಿಂದ ಮಹತ್ವದ ಆದೇಶ.. ಏನದು?

https://newsfirstlive.com/wp-content/uploads/2023/07/kiccha-2.jpg

Load More