/newsfirstlive-kannada/media/post_attachments/wp-content/uploads/2024/06/GAMBHIR-1.jpg)
ಟೀಂ ಇಂಡಿಯಾ ನೂತನ ಕೂಚ್ ಹುಡುಕಾಟದಲ್ಲಿದೆ. ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆಯೇ ರಾಹುಲ್ ದ್ರಾವಿಡ್ ಅಧಿಕಾರವಧಿ ಮುಕ್ತಾಯ ಆಗ್ತಿದ್ದು, ನಂತರ ಯಾರು ಟೀಂ ಇಂಡಿಯಾದ ಕೋಚ್​ ಆಗ್ತಾರೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ಮಧ್ಯೆ ಐಪಿಎಲ್ ಮುಗಿದ ಬೆನ್ನಲ್ಲೇ ಕೆಕೆಆರ್ ಮೆಂಟರ್ ಗೌತಮ್ ಹೆಸರು ಜೋರಾಗಿ ಕೇಳಿಬರುತ್ತಿದೆ. ಇಲ್ಲಿಯವರೆಗೆ ಗಂಭೀರ್ ಈ ವಿಚಾರದ ಬಗ್ಗೆ ಮೌನವಾಗಿಯೇ ಇದ್ದರು.
Abu Dhabiನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ವಿದ್ಯಾರ್ಥಿಯೊಬ್ಬ ನೀವು ಟೀಂ ಇಂಡಿಯಾದ ಮುಖ್ಯ ಕೋಚ್ ಆಗ್ತೀರಾ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಉತ್ತರಿಸಿರುವ ಗಂಭಿರ್.. ನಾನು ಭಾರತ ತಂಡದ ಕೋಚ್ ಆಗಲು ಇಷ್ಟ ಪಡುತ್ತೇನೆ. ರಾಷ್ಟ್ರೀಯ ತಂಡದ ಕೋಚ್ ಆಗುವುದಕ್ಕಿಂತ ಮತ್ತೊಂದು ದೊಡ್ಡ ಗೌರವ ಬೇರೆ ಇಲ್ಲ. ನೀವು 140 ಕೋಟಿ ಭಾರತೀಯರನ್ನು ಮತ್ತು ಜಗತ್ತಿನಲ್ಲಿರೋರನ್ನೂ ಪ್ರತಿನಿಧಿಸುತ್ತಿರಿ.
140 ಕೋಟಿ ಭಾರತೀಯರೂ ಭಾರತ ವಿಶ್ವಕಪ್ ಗೆಲ್ಲಲು ಸಹಾಯ ಮಾಡುತ್ತಾರೆ. ಪ್ರತಿಯೊಬ್ಬರು ನಮಗಾಗಿ ಪ್ರಾರ್ಥಿಸಿದರೆ, ನಾವು ಅವರನ್ನು ಪ್ರತಿನಿಧಿಸಿ ಆಡಲು ಶುರು ಮಾಡಿದರೆ ಖಂಡಿತವಾಗಿಯೂ ವಿಶ್ವಕಪ್ ಗೆಲ್ಲುತ್ತೇವೆ. ಅತ್ಯಂತ ಮುಖ್ಯ ವಿಚಾರ ಅಂದರೆ ನಿರ್ಭಯವಾಗಿರೋದು.
ಸುರಕ್ಷಿತ ಡ್ರೆಸ್ಸಿಂಗ್ ರೂಮ್, ಸಂತೋಷದ ಡ್ರೆಸ್ಸಿಂಗ್ ರೂಮ್ ಆಗಿದೆ. ಸಂತೋಷದ ಡ್ರೆಸ್ಸಿಂಗ್ ರೂಮ್ ಗೆಲುವಿನ ಡ್ರೆಸ್ಸಿಂಗ್ ರೂಮ್ ಆಗಲಿದೆ. ಇದೇ ಮಂತ್ರವನ್ನು ನಾನು ಕೆಕೆಆರ್ನಲ್ಲಿ ಫಾಲೋ ಮಾಡಿದ್ದೇನೆ. ದೇವರ ಕೃಪೆ ಕೂಡ ಕೆಲಸ ಮಾಡುತ್ತದೆ ಎಂದಿದ್ದಾರೆ.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಶಾಕಿಂಗ್ ನ್ಯೂಸ್​.. ಇವತ್ತಿನಿಂದ ಹಾಲಿನ ದರ ಮತ್ತಷ್ಟು ಏರಿಕೆ
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್