ಇಲಿಗಳ ಕಾಟಕ್ಕೆ 12 ಲಕ್ಷ ಖರ್ಚು ಮಾಡಲು ಮುಂದಾದ ಸರ್ಕಾರ!
ಮೂಷಿಕನಿಂದ ತೊಂದರೆ.. ಮಹತ್ವದ ಮತ್ತು ಗೌಪ್ಯ ದಾಖಲೆ ನಾಶ
ಸಂಸತ್ತಿನಲ್ಲಿ ಇಲಿಗಳ ಕಾಟದಿಂದ ಸರ್ಕಾರಕ್ಕೆ ಸಂಕಟ ಮರುಕ
ಮೊದಲೇ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಇದೀಗ ಇಲಿಗಳ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ. ಸಂಸತ್ತಿನಲ್ಲಿ ಮಹತ್ವದ ದಾಖಲೆಗಳನ್ನು ಇಲಿಗಳು ತಿಂದು ಹಾಕಿವೆ. ಇದರ ಕಾಟದಿಂದ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪಾಕ್ ಆಡಳಿತವು ಬೆಕ್ಕುಗಳ ಮೊರೆ ಹೋಗಿವೆ.
ಪಾಕ್ ಸಂಸತ್ತಿನಲ್ಲಿ ಇಲಿಗಳ ಸಂಖ್ಯೆ ಹೆಚ್ಚುತ್ತಿವೆ. ಮೂಷಿಕಗಳ ಕಾಟದಿಂದ ಪ್ರಮುಖ ಮತ್ತು ಗೌಪ್ಯ ದಾಖಲೆಗಳು ನಾಶವಾಗಿವೆ. ಮಾತ್ರವಲ್ಲದೆ, ಕಂಪ್ಯೂಟರ್ ಕೇಬಲ್ಗಳನ್ನು ತಿಂದು ತೇಗಿವೆ. ಇಂಥಾ ಪರಿಸ್ಥಿತಿಯಲ್ಲಿ ಇಲಿಗಳನ್ನು ಹಿಡಿಯಲು ಸರ್ಕಾರ ಬೆಕ್ಕುಗಳನ್ನು ಬಿಡಲು ಮುಂದಾಗಿದೆ. ಇದಕ್ಕಾಗಿ ಖಾಸಗಿ ಸಂಸ್ಥೆಗಳ ಸಹಾಯವನ್ನು ಪಡೆಯುತ್ತಿದೆ.
ಇದನ್ನೂ ಓದಿ: ಇಂದೇ ದೆಹಲಿಗೆ ಹೋಗಲಿರುವ ಸಿಎಂ ಸಿದ್ದರಾಮಯ್ಯ.. ಹೈಕಮಾಂಡ್ ಜೊತೆ ಮಹತ್ವದ ಚರ್ಚೆ
ಸರ್ಕಾರವು 2008ರ ದಾಖಲೆಗಳನ್ನು ಪರಿಶೀಲಿಸಲು ಹೊರಟಾಗ ಸಮಸ್ಯೆ ಬೆಳಕಿಗೆ ಬಂದಿದೆ. ದಾಖಲೆಗಳನ್ನು ಪರಿಶೀಲಿಸಿದಾಗ ಬಹುತೇಕ ದಾಖಲೆಗಳನ್ನು ಇಲಿಗಳು ತಿಂದು ಹಾಕಿರುವುದು ಪತ್ತೆಯಾಗಿದೆ. ಸಂಸತ್ತಿನ 2ನೇ ಮಹಡಿಯಲ್ಲಿ ಇಲಿಗಳ ಸಂಖ್ಯೆ ಹೆಚ್ಚುತ್ತಿದ್ದು ಇದರಿಂದ ಸರ್ಕಾರಕ್ಕೆ ಸಂಕಟ ಮರುಕವಾಗಿದೆ.
ಇದನ್ನೂ ಓದಿ: ‘ಆತನ ಕಾಲು ಮುರಿಯಿರಿ, ಖಾಸಗಿ ಅಂಗಕ್ಕೆ ಹೊಡೆಯಿರಿ’.. ಕೋಪಗೊಂಡ ಯುಜ್ವೇಂದ್ರ ಚಹಾಲ್
ಹಗಲಿನಲ್ಲಿ ಸಂಸತ್ತಿನ 2ನೇ ಮಹಡಿಯಲ್ಲಿ ಸಭೆ ನಡೆಯುತ್ತಿರುತ್ತವೆ. ಹಗಲಿನಲ್ಲಿ ಹೆಚ್ಚಿನ ಜನಸಂದಣಿ ಇರುವುದರಿಂದ ಇಲಿಗಳು ವಿರಳವಾಗಿ ಕಂಡುಬರುತ್ತವೆ. ಆದರೆ ರಾತ್ರಿ ವೇಳೆ ಅವುಗಳ ಅವಾಂತರಗಳು ಹೆಚ್ಚಾಗಿವೆ. ಅಚ್ಚರಿ ಸಂಗತಿ ಎಂದರೆ ಇಲಿಗಳನ್ನು ಹಿಡಿಯಲೆಂದು ಸರ್ಕಾರ 12 ಲಕ್ಷ ರೂಪಾಯಿ ಖರ್ಚು ಮಾಡುತ್ತಿದೆ ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ