ಟೀಂ ಇಂಡಿಯಾದ ಸ್ಫೋಟಕ ಸ್ಪಿನ್ನರ್ ಯುಜ್ವೇಂದ್ರ ಚಹಾಲ್
ಆತನ ಕಾಲರ್ ಬೋನ್ಸ್ ಮುರಿಯಿರಿ ಎಂದ ಆಟಗಾರ
ಅಷ್ಟಕ್ಕೂ ಯುಜ್ವೇಂದ್ರ ಚಹಾಲ್ ಹೀಗಂದಿದ್ದು ಯಾರಿಗೆ?
ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚೆಗೆ ನಡೆದ ಕೋಲ್ಕತ್ತಾ ಆರ್ಜಿ ಕಾರ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಮಹಿಳಾ ವೈದ್ಯೆಯ ಅತ್ಯಾಚಾರ ಪ್ರಕರಣ ದೇಶವನ್ನೇ ತಲ್ಲಣಗೊಳಿಸಿದೆ. ಈ ಪ್ರಕರಣ ಬೆಳಕಿಗೆ ಬಂದಂತೆ ದೇಶದೆಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿವೆ.
ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂಬ ಒಕ್ಕೊರಳಿನ ಒತ್ತಾಯ ಜೋರಾಗಿ ಕೇಳಿಬರುತ್ತಿದೆ. ಕ್ರೀಡಾ ಜಗತ್ತು ಕೂಡ ಒತ್ತಾಯಿಸಿದೆ. ಟೀಂ ಇಂಡಿಯಾದ ಆಟಗಾರ ಯುಜ್ವೇಂದ್ರ ಚಹಾಲ್ ಕೂಡ ಈ ಘೋರ ಅಪರಾಧದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಶುರುವಾಯ್ತು ಮತ್ತೊಂದು ತಲೆನೋವು.. ಈ ವರ್ಷದಿಂದಲೇ PG ಕೋರ್ಸ್ಗಳಿಗೂ CET ಪರೀಕ್ಷೆ ನಡೆಸೋ ಸಾಧ್ಯತೆ
ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಯುಜ್ವೇಂದ್ರ ಚಹಾಲ್, ‘ಸಾಯುವ ತನಕ ನೇಣು ಹಾಕ್ತೀರಾ? ಇಲ್ಲ. 90 ಡಿಗ್ರಿಗಳಲ್ಲಿ ಆತನ ಕಾಲು ಮುರಿಯಿರಿ. ಕಾಲರ್ ಬೋನ್ಸ್ ಮುರಿಯಿರಿ. ಖಾಸಗಿ ಭಾಗಗಳಿಗೆ ಗಾಯ ಮಾಡಿ. ಎಲ್ಲಾ ಭಯಾನಕ ಚಿತ್ರಹಿಂಸೆಗಳನ್ನು ಅನುಭವಿಸಲು ಅತ್ಯಾಚಾರಿಯನ್ನು ಜೀವಂತವಾಗಿಡಿ. ನಂತರ ಗಲ್ಲಿಗೇರಿಸಿ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಸ್ಮಶಾನದಲ್ಲೊಂದು ನಶಾ ಲೋಕ.. ರುದ್ರಭೂಮಿಯಲ್ಲಿ ಗಾಂಜಾ ಗಿಡ ಬೆಳೆದ ಕಿರಾತಕರು
ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದರು, ‘ಇದೊಂದು ಹೇಯ ಘಟನೆ, ಇಂತಹ ಅಪರಾಧಗಳಿಗೆ ಕ್ಷಮೆ ಕೇಳಲು ಸಾಧ್ಯವಿಲ್ಲ’ ಎಂದು ಹೇಳಿದ್ದರು.
ಇದನ್ನೂ ಓದಿ: ಗಂಡ-ಹೆಂಡತಿ ಜಗಳ ಕೊ*ಲೆಯಲ್ಲಿ ಅಂತ್ಯ.. ಸ್ಕ್ರೂಡ್ರೈವರ್ನಿಂದ ಚುಚ್ಚಿ, ಕೊಡಲಿಯಿಂದ ಕೊಚ್ಚಿ ಕೊಂ*ದೇ ಬಿಟ್ಟ
‘ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆ ಎಲ್ಲಬೇಕಾದರೂ ನಡೆಯಬಹುದು. ಆದರೆ ಆಸ್ಪತ್ರೆಯೊಳಗೆ ನಡೆದಿರುವುದು ದುರದೃಷ್ಟಕರ’ ಎಂದು ಗಂಗೂಲಿ ಹೇಳಿದ್ದಾರೆ.
ಏನಿದು ಘಟನೆ?
ಆಗಸ್ಟ್ 9ರಂದು ಆಸ್ಪತ್ರೆಯಯಲ್ಲಿ ಮಹಿಳಾ ವೈದ್ಯೆಯ ಶವ ಪತ್ತೆಯಾಗಿತ್ತು. ಆಗಸ್ಟ್ 10 ರಂದು ಆರೋಪಿಯನ್ನು ಬಂಧಿಸಲಾಗಿದೆ. ಇನ್ನು ಈ ಘಟನೆ ಬೆಳಕಿಗೆ ಬಂದಂತೆ ದೇಶದೆಲ್ಲೆಡೆ ಆಕ್ರೋಶ ಹೊರಬಿದ್ದಿದೆ. ಆಗಸ್ಟ್ 13ರಂದು ಈ ಪ್ರಕರಣವನ್ನು ಕೋಲ್ಕತ್ತಾ ಹೈಕೋರ್ಟ್ ಆದೇಶದಂತೆ ಪೊಲೀಸರಿಂದ ಸಿಬಿಐಗೆ ಹಸ್ತಾಂತರಿಸಿದರು. ಸದ್ಯ ತನಿಖೆ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ