/newsfirstlive-kannada/media/post_attachments/wp-content/uploads/2024/03/Gambhir_Kohli1.jpg)
ಐಪಿಎಲ್-2024 ಒಂದಷ್ಟು ಅವಿಸ್ಮರಣೀಯ ಘಟನೆಗಳಿಗೆ ಸಾಕ್ಷಿ ಆಯಿತು. ಪಂದ್ಯಗಳು ಮಾತ್ರವಲ್ಲ, ಆಫ್​ ದ ಫೀಲ್ಡ್​ನಲ್ಲೂ ಮರೆಯಲಾಗದ ಸಂಗತಿಗಳು ಜರುಗಿವೆ. ಅದರಲ್ಲಿ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ವೈಮನಸ್ಸು ಮರೆತು ಪರಸ್ಪರ ತಬ್ಬಿಕೊಂಡಿರೋದು ಕೂಡ ಒಂದು.
2023ರಲ್ಲಿ ಗಂಭೀರ್​ ಎಲ್​​ಎಸ್​​​ಜಿ ತಂಡದ ಮೆಂಟರ್ ಆಗಿದ್ದ ಸಂದರ್ಭದಲ್ಲಿ ಗಂಭೀರ್ ಮತ್ತು ಕೊಹ್ಲಿ ನಡುವೆ ದೊಡ್ಡ ಹೈಡ್ರಾಮಾಗಳು ನಡೆದಿದ್ದವು. 2024ರ ಐಪಿಎಲ್​ನಲ್ಲಿ ಗಂಭೀರ್ ನೇತೃತ್ವ ಕೆಕೆಆರ್​ ತಂಡ ಆರ್​ಸಿಬಿ ವಿರುದ್ಧ ಆಡುವಾಗ ಅಹಿತಕರ ಪ್ರಸಂಗಗಳು ನಡೆಯುತ್ತೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದರು. ಆದರೆ, ಇಬ್ಬರು ದಂತಕತೆಗಳು ಕ್ರಿಕೆಟ್ ಅಭಿಮಾನಿಗಳಿಗೆ ಕ್ರೀಡಾಭಿಮಾನ ಮತ್ತು ಆತ್ಮೀಯತೆಯನ್ನು ಸಾರಿದ್ದಾರೆ.
ಇದನ್ನೂ ಓದಿ:Deal done! ಗೌತಮ್ ಬೆನ್ನುಬಿದ್ದ ಬಿಸಿಸಿಐ.. ಇಷ್ಟಕ್ಕೆಲ್ಲ ಕಾರಣ ಆ ಐದು ವಿಚಾರಗಳು..!
ಇದೀಗ ಗೌತಮ್ ಗಂಭೀರ್ ಅವರು ವಿರಾಟ್ ಕೊಹ್ಲಿ ಕುರಿತು ದೊಡ್ಡ ಹೇಳಿಕೆ ನೀಡಿದ್ದಾರೆ. ಸಂದರ್ಶನ ಒಂದರಲ್ಲಿ ಮಾತನಾಡಿರುವ ಗಂಭೀರ್​.. ನಮ್ಮಿಬ್ಬರ ಸಂಬಂಧ ನಿಮ್ಮ ಗೃಹಿಕೆಗೆ ದೂರವಾಗಿದೆ. ವಿರಾಟ್ ಕೊಹ್ಲಿ ಜೊತೆಗಿನ ನನ್ನ ಸಂಬಂಧ ದೇಶಕ್ಕೆ ತಿಳಿಯಬೇಕಿಲ್ಲ. ಅವರಿಗೆ (ಕೊಹ್ಲಿ) ಅಭಿಪ್ರಾಯ ವ್ಯಕ್ತಪಡಿಸಲು ಮತ್ತು ತಂಡವನ್ನು ಗೆಲ್ಲಿಸಲು ಸಹಾಯ ಮಾಡಲು ನನ್ನಂತೆಯೇ ಹಕ್ಕಿದೆ. ನಮ್ಮ ಸಂಬಂಧ ಸಾರ್ವಜನಿಕರಿಗೆ ಮಸಾಲಾ ಕೊಡುವುದಲ್ಲ ಎಂದು ಗಂಭೀರ್ ಹೇಳಿದ್ದಾರೆ. ಇದೇ ವೇಳೆ ಕೊಹ್ಲಿಯನ್ನು ಮುಕ್ತ ಕಂಠದಿಂದ ಹೊಗಳಿರುವ ಗಂಭೀರ್​.. ಸಿಕ್ಸರ್ ಬಾರಿಸಲು ಅವರಿಗೆ ಇರುವ ಸಾಮರ್ಥ್ಯವನ್ನೂ ಶ್ಲಾಘಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್