newsfirstkannada.com

Deal done! ಗೌತಮ್ ಬೆನ್ನುಬಿದ್ದ ಬಿಸಿಸಿಐ.. ಇಷ್ಟಕ್ಕೆಲ್ಲ ಕಾರಣ ಆ ಐದು ವಿಚಾರಗಳು..!

Share :

Published May 30, 2024 at 11:46am

    ಕ್ಲೈಮ್ಯಾಕ್ಸ್​ ಹಂತ ತಲುಪಿದ ಕೋಚ್​ ಆಯ್ಕೆ ಸರ್ಕಸ್​

    ದ್ರಾವಿಡ್​ ಉತ್ತರಾಧಿಕಾರಿ ಆಯ್ಕೆ ಬಹುತೇಕ ಅಂತ್ಯ

    ಗಂಭೀರ್​ ಸುತ್ತ ಗಿರಗಿರ ಸುತ್ತಿದ್ದೇಕೆ ಬಿಸಿಸಿಐ ಬಾಸ್​?

ಟೀಮ್​ ಇಂಡಿಯಾದ ನೂತನ ಹೆಡ್​ ಕೋಚ್​ ಆಯ್ಕೆಯ ಸರ್ಕಸ್​ ಕ್ಲೈಮಾಕ್ಸ್​​ ಹಂತ ತಲುಪಿದೆ. ರಾಹುಲ್​ ದ್ರಾವಿಡ್​ ಉತ್ತರಾಧಿಕಾರಿಯಾಗಿ ಗೌತಮ್​ ಗಂಭೀರ್​, ಪಟ್ಟಕ್ಕೇರೋದು ಬಹುತೇಕ ಕನ್​​ಫರ್ಮ್​ ಆಗಿದೆ. ಫಾರಿನ್​ ಕೋಚ್​​ಗಳನ್ನ ಸೈಡ್​ಲೈನ್​ ಮಾಡಿ ಕೋಚ್​ ಪಟ್ಟಕ್ಕೆ ಗಂಭೀರ್​ನ ಒಪ್ಪಿಸಲು ಬಿಸಿಸಿಐ ಬಾಸ್​ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅಷ್ಟಕ್ಕೂ ಗಂಭೀರ್​​ ಅವರೇ​ ಟೀಮ್​​ ಇಂಡಿಯಾದ ಕೋಚ್​ ಯಾಕಾಗಬೇಕು?

ಟೀಮ್​ ಇಂಡಿಯಾದ ಮುಂದಿನ ಹೆಡ್​ ಕೋಚ್​​ ಯಾರು? ಈ ಪ್ರಶ್ನೆಗೆ ಬಹುತೇಕ ಫೈನಲ್​ ಆನ್ಸರ್​ ಸಿಕ್ಕಾಗಿದೆ. ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ, ಕೊಲ್ಕತ್ತಾ ನೈಟ್​​ ರೈಡರ್ಸ್​ ತಂಡದ ಮೆಂಟರ್​​ ಗೌತಮ್​ ಗಂಭೀರ್​, ಕೋಚ್​ ಪಟ್ಟಕ್ಕೇರೋದು ಕನ್​ಫರ್ಮ್​ ಆಗಿದೆ. ಬಿಸಿಸಿಐ ಮೂಲಗಳ ಜೊತೆಗೆ ಐಪಿಎಲ್​ ಫ್ರಾಂಚೈಸಿ ಒಂದರ ಮಾಲೀಕ ಕೂಡ ಈ ಸುದ್ದಿಯನ್ನ ಕನ್​​ಫರ್ಮ್​ ಮಾಡಿದ್ದಾರೆ. ಇನ್ನೇನು ಅಧಿಕೃತ ಪ್ರಕಟಣೆ ಮಾತ್ರ ಬಾಕಿ ಉಳಿದಿದೆ.

ಇದನ್ನೂ ಓದಿ:ಭಾರತ – ಪಾಕ್ ನಡುವಿನ ಪಂದ್ಯಕ್ಕೆ ಭಾರೀ ಆತಂಕ.. ಏನಾಯ್ತು..?

ಗಂಭೀರ್​ ಸುತ್ತ ಗಿರಗಿರ ಸುತ್ತಿದ್ದೇಕೆ ಬಿಸಿಸಿಐ ಬಾಸ್​
ಕೋಚ್​ ಹುದ್ದೆಗೆ ಅರ್ಜಿ ಆಹ್ವಾನಿಸಿದ ಸಂದರ್ಭದಲ್ಲಿ ಫಾರಿನ್​ ಕೋಚ್​ಗಳ ಹೆಸರುಗಳು ರೇಸ್​ನಲ್ಲಿ ಮುಂಚೂಣಿಯಲ್ಲಿದ್ವು. ಅದೇ ವೇಳೆ ದಿಢೀರ್​ ಎಂದು ಈ ರೇಸ್​ಗೆ ಗೌತಮ್​ ಗಂಭೀರ್​ ಹೆಸ್ರು ಎಂಟ್ರಿಯಾಯ್ತು. ಅಸಲಿಗೆ ಆರಂಭದಲ್ಲಿ ಗಂಭೀರ್​ಗೆ ಅಷ್ಟೇನು ಆಸಕ್ತಿ ಇರಲಿಲ್ಲ. ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, ಗೌತಿ ಸುತ್ತ ಗಿರಿಗಿರಿ ತಿರುಗಿ ಕೊನೆಗೂ ಒಪ್ಪಿಸುವಲ್ಲಿ ಸಕ್ಸಸ್​ ಆಗಿದ್ದಾರೆ. ಬಿಸಿಸಿಐ ಬಾಸ್​ ಹೀಗೆ ಗಂಭೀರ್​ ಹಿಂದೆ ಬಿದ್ದು ಒಪ್ಪಿಸಿರೋದಕ್ಕೆ ಕಾರಣಗಳು ಸಾಕಷ್ಟಿವೆ.

ಕಾರಣ 1: ಡಿಸಿಷನ್​ ಮೇಕರ್​​, ಯಾರಿಗೂ ಕೇರ್ ಮಾಡಲ್ಲ
ಕ್ರಿಕೆಟ್​ ಅಂತಾ ಬಂದ್ರೆ ಗೌತಮ್​ ಗಂಭೀರ್ ಸಂಪೂರ್ಣ ಅಗ್ರೆಸ್ಸೀವ್​ ಆಗಿ ಕಾಣಿಸಿಕೊಳ್ತಾರೆ. ತಂಡದ ಗೆಲುವಷ್ಟೇ ಗಂಭೀರ್ ಗುರಿ​. ಇದಕ್ಕಾಗಿ ಎಂತಹ ಟಫ್​ ಡಿಸಿಷನ್​ ಬೇಕಾದ್ರೂ ತೆಗೆದುಕೊಳ್ತಾರೆ. ಈ ನಿರ್ಧಾರ ತೆಗೆದುಕೊಳ್ಳೋ ಸಮಯದಲ್ಲಿ ಯಾರಿಗೂ ಕೇರ್​​ ಮಾಡಲ್ಲ. ಡೇರಿಂಗ್​ ಡಿಸಿಷನ್​ ತೆಗೆದುಕೊಳ್ಳೋ ಈ ಕ್ವಾಲಿಟಿ ಟೀಮ್​ ಇಂಡಿಯಾ ಕೋಚ್​ಗೆ ಬೇಕೆ ಬೇಕು.

ಕಾರಣ 2: ಭವಿಷ್ಯದ ತಂಡ ಕಟ್ಟೋಕೆ ಗಂಭೀರ್​ ಬೆಸ್ಟ್​ ಆಯ್ಕೆ
ಟೀಮ್​ ಇಂಡಿಯಾ ಸದ್ಯ TRANSITION PERIODನಲ್ಲಿದೆ. ಇನ್ನೆರಡು ವರ್ಷಗಳಲ್ಲಿ ತಂಡದ ಬಹುತೇಕ ಸೀನಿಯರ್​ಗಳು ನಿವೃತ್ತಿ ಘೋಷಿಸಲಿದ್ದಾರೆ. ಅವರ ಸ್ಥಾನಕ್ಕೆ ಸೂಕ್ತ ಆಟಗಾರರನ್ನ ಹುಡುಕಬೇಕಿದೆ. ಟ್ಯಾಲೆಂಟ್​ ಹಂಟ್​ ಮಾಡೋದ್ರಲ್ಲಿ ಗಂಭೀರ್​​ ಪಂಟರ್​. ಭವಿಷ್ಯದ ತಂಡ ಕಟ್ಟಬೇಕಿರೋದ್ರಿಂದ ಗಂಭೀರ್​​ರಂತಹ ಕೋಚ್​ ಅಗತ್ಯತೆ ತಂಡಕ್ಕಿದೆ.

ಇದನ್ನೂ ಓದಿ:ಟಿ20 ವಿಶ್ವಕಪ್​ನಲ್ಲಿ ಆಫ್​ ಸ್ಪಿನ್ನರ್ಸ್ ಇಲ್ಲವೇ ಇಲ್ಲ -ಲೆಫ್ಟಿ ಸ್ಪಿನ್ನರ್ಸ್ ಆಯ್ಕೆ ಹಿಂದಿನ ಅಸಲಿ ಸತ್ಯ ರಿವೀಲ್..!

ಕಾರಣ 3: ಯುವ ಆಟಗಾರರನ್ನ ಬೆಳೆಸೋ ಗುರು
ಯುವ ಆಟಗಾರರ ಪಾಲಿಗೆ ಗಂಭೀರ್ ಅಕ್ಷರಶಃ ಗುರು. ಟ್ಯಾಲೆಂಟ್​ ಒಂದಿದ್ರೆ ಸಾಕು, ಆ ಆಟಗಾರನಿಗೆ ಅವಕಾಶ ನೀಡಿ, ತಿದ್ದಿ, ತೀಡಿ ಬೆಳೆಸೋದ್ರಲ್ಲಿ ಗಂಭೀರ್​ ಎತ್ತಿದ ಕೈ. ಹಿಂದೆ ಕೆಕೆಆರ್​ ನಾಯಕನಾಗಿದ್ದಾಗ, ಇದೀಗ ಮೆಂಟರ್​ ಆಗಿದ್ದಾಗ ಗಂಭೀರ್, ಯುವ ಆಟಗಾರರನ್ನ ಸಿಕ್ಕಾಪಟ್ಟೆ ಬ್ಯಾಕ್​ ಮಾಡಿದ್ರು. ಇದು ಆಟಗಾರರಿಗೆ ಹೆಚ್ಚಿನ ಕಾನ್ಫಿಡೆನ್ಸ್​ ನೀಡುತ್ತೆ.

ಕಾರಣ 4: ಟೀಮ್​ ಇಂಡಿಯಾದ ಡ್ರೆಸ್ಸಿಂಗ್​ ರೂಮ್​ ವಾತಾವರಣ
ಟೀಮ್​ ಇಂಡಿಯಾದ ಡ್ರೆಸ್ಸಿಂಗ್​ ರೂಮ್​ನಲ್ಲಿ ಸ್ಟಾರ್​​ಗಳೇ ತುಂಬಿಕೊಂಡಿದ್ದಾರೆ. ಸಾಮಾನ್ಯ ಕೋಚ್​​ ಆಯ್ಕೆ ಮಾಡಿದ್ರೆ, ಆಟಗಾರರನ್ನ ಹ್ಯಾಂಡಲ್​ ಮಾಡೋದು ಅಸಾಧ್ಯದ ವಿಚಾರವಾಗಲಿದೆ. ತಂಡ ಒಗ್ಗಟ್ಟಾಗಿ ಹೋಗದಿದ್ರೆ ಎತ್ತು ಏರಿಗೆಳೆದ್ರೆ, ಕೋಣ ನೀರಿಗೇಳಿತು ಅನ್ನೋ ಸ್ಥಿತಿ ನಿರ್ಮಾಣವಾಗೋ ಸಾಧ್ಯತೆಯಿದೆ. ಗಂಭೀರ್​ಗೆ ಈ ವಿಚಾರಗಳನ್ನು ಖಡಕ್​ ಆಗಿ ಹ್ಯಾಂಡೆಲ್​​ ಮಾಡುವ ಸಾಮರ್ಥ್ಯ ಇದೆ.

ಇದನ್ನೂ ಓದಿ:Pushpa 2: The Rule ಸಿನಿಮಾಗೆ ದೊಡ್ಡ ಸಂಕಷ್ಟ.. ರಿಲೀಸ್​ಗೂ ಮುನ್ನವೇ ಅನುಮಾನ ಶುರು..!

ಕಾರಣ 5: ICC ಟ್ರೋಫಿ ಗೆಲುವಿನ ಬರಕ್ಕೆ ಬ್ರೇಕ್​ ಹಾಕೋ ಗುರಿ
2013ರ ಬಳಿಕ ಐಸಿಸಿ ಟ್ರೋಫಿ ಗೆಲ್ಲದ ಬರ ಟೀಮ್​ ಇಂಡಿಯಾವನ್ನ ಕಾಡ್ತಿದೆ. ಲೀಗ್​ನಲ್ಲಿ ಚನ್ನಾಗಿ ಆಡೋ ಟೀಮ್​ ಇಂಡಿಯಾ, ಬರಿಗೈಯಲ್ಲಿ ವಾಪಾಸ್ಸಾಗ್ತಿದೆ. ಗಂಭೀರ್​ ಕೋಚ್​ ಆದರೆ ಈ ಕೊರತೆಯನ್ನ ನೀಗಿಸಬಲ್ಲರು. ಈ ಬಾರಿ ಮೆಂಟರ್​ ಆಗಿ ಕೆಕೆಆರ್​ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಿದ್ದು, ಆ ನಿರೀಕ್ಷೆಯನ್ನ ಮತ್ತಷ್ಟು ಹೆಚ್ಚಿಸಿದೆ. ಈ ಎಲ್ಲಾ ಕಾರಣಗಳಿಂದಲೇ ಬಿಸಿಸಿಐ ಬಾಸ್​ಗಳು ಗಂಭೀರ್​ ಹಿಂದೆ ಬಿದ್ದಿದ್ದಾರೆ. ಬಹುತೇಕ DEAL DONE ಎನ್ನೋ ಸುದ್ದಿ ಹೊರಬಿದ್ದಿದ್ದು, ಅಧಿಕೃತ ಆದೇಶ ಯಾವಾಗ ಹೊರಬರುತ್ತೆ ಅನ್ನೋದಷ್ಟೇ ಸದ್ಯದ ಕುತೂಹಲವಾಗಿದೆ.

ಇದನ್ನೂ ಓದಿ:ಉಳಿದಿರೋದು ಐದೇ ದಿನ.. ಯಾವುದರಲ್ಲೂ ಕ್ಲಾರಿಟಿಯೇ ಇಲ್ಲ.. ತಂಡ ಒಂದೇ ಆದರೂ ಯಾಕೆ ಹೀಗೆ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Deal done! ಗೌತಮ್ ಬೆನ್ನುಬಿದ್ದ ಬಿಸಿಸಿಐ.. ಇಷ್ಟಕ್ಕೆಲ್ಲ ಕಾರಣ ಆ ಐದು ವಿಚಾರಗಳು..!

https://newsfirstlive.com/wp-content/uploads/2024/05/GAMBHIR.jpg

Load More