newsfirstkannada.com

ಉಳಿದಿರೋದು ಐದೇ ದಿನ.. ಯಾವುದರಲ್ಲೂ ಕ್ಲಾರಿಟಿಯೇ ಇಲ್ಲ.. ತಂಡ ಒಂದೇ ಆದರೂ ಯಾಕೆ ಹೀಗೆ?

Share :

Published May 29, 2024 at 12:50pm

  ಟಿ20 ವಿಶ್ವಕಪ್​ ಟೂರ್ನಿಗೆ ಕೌಂಟ್​​ಡೌನ್ ಸ್ಟಾರ್ಟ್​

  ದ್ರಾವಿಡ್​ ಅಂಡ್ ರೋಹಿತ್​​ಗೆ ಹೊಸ ಟೆನ್ಶನ್ ಟೆನ್ಶನ್

  5 ದಿನ ಮಾತ್ರ ಬಾಕಿ.. ಪ್ರಿಪರೇಷನ್ ಶುರುವೇ ಆಗಿಲ್ಲ

ಟಿ20 ವಿಶ್ವಕಪ್​​​​​​​​​​​​​​​ ಟೂರ್ನಿಗಾಗಿ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ನ್ಯೂಯಾರ್ಕ್​ ತಲುಪಿದೆ. ಈ ಸಲನಾದರೂ ಕಪ್ ಗೆಲ್ಲಬೇಕು ಅನ್ನೋ ಮಹಾದಾಸೆಯಿಂದಲೇ ಅಮೆರಿಕಾಗೆ ಕಾಲಿಟ್ಟಿದೆ. ಟಿ20 ವಿಶ್ವಕಪ್​ನ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾದಲ್ಲಿ ಹೊಸ ಟೆನ್ಶನ್ ಶುರುವಾಗಿದೆ.

ವಿಶ್ವಕಪ್ ಅಂದಾಗಲೇ ನೆನಪಾಗೋದು ರೋಚಕ ಕ್ಷಣಗಳು. ವಿಶ್ವ ಕಿರೀಟ ಮುಡಿಗೇರಿಸಿಕೊಂಡ ತಂಡಗಳು, ಚಂಚಲೆಯನ್ನ ಒಲಿಸಿಕೊಳ್ಳಲು ನಡೆಸುವ ಆ ತಂಡಗಳ ಕಸರತ್ತು.. ಇಂಥ ವಿಶ್ವ ಸಮರಕ್ಕೆ ಕೌಂಟ್​ಡೌನ್​ ಶುರುವಾಗಿದ್ದು, ಬರೋಬ್ಬರಿ 20 ತಂಡಗಳು ಪೂಪೋಟಿಗೆ ಇಳಿಯುತ್ತಿವೆ. ಕಪ್​ ಗೆಲ್ಲೋ ನಿಟ್ಟಿನಲ್ಲಿ ದ್ವೀಪಕ್ಷೀಯ ಸರಣಿಗಳನ್ನಾಡುವುದರಲ್ಲಿ ಬ್ಯುಸಿಯಾಗಿವೆ. ಟೀಮ್ ಇಂಡಿಯಾ ಮಾತ್ರ, ಈಗಷ್ಟೇ ಐಪಿಎಲ್​ ಮುಗಿಸಿ ಅಮೆರಿಕಾಗೆ ಕಾಲಿಟ್ಟಿದೆ.

ಇದನ್ನೂ ಓದಿ:ಕೊಡಲಿಯಿಂದ ಕೊಚ್ಚಿ ಅಪ್ಪ-ಅಮ್ಮ, ಹೆಂಡತಿ, ಮಗು ಸೇರಿ ಒಂದೇ ಕುಟುಂಬ 8 ಮಂದಿಯ ಬರ್ಬರ ಹತ್ಯೆ

2 ತಿಂಗಳ ಕಾಲ ಐಪಿಎಲ್​ನಲ್ಲಿ ಬ್ಯುಸಿಯಾಗಿದ್ದ ಟೀಮ್ ಇಂಡಿಯಾ ಆಟಗಾರರು, ಟಿ20 ವಿಶ್ವಕಪ್ ಗೆಲುವಿನ ಕನವರಿಕೆಯಲ್ಲಿ ಅಮೆರಿಕಾದಲ್ಲಿ ತಲುಪಿದ್ದಾರೆ. ನ್ಯೂಯಾರ್ಕ್​ಗೆ ಬಂದಿಳಿದಿರುವ ದ್ರಾವಿಡ್ ಆ್ಯಂಡ್ ರೋಹಿತ್​ಗೆ ಹೊಸ ಟೆನ್ಶನ್ ಶುರುವಾಗಿದೆ.

5 ದಿನ ಮಾತ್ರ ಬಾಕಿ.. ಶುರುವಾಗಿಲ್ಲ ಪ್ರಿಪರೇಷನ್
ಟಿ20 ವಿಶ್ವಕಪ್​​​ಗಾಗಿ ಟೀಮ್ ಇಂಡಿಯಾ ಅಮೆರಿಕಾಗೆ ಕಾಲಿಟ್ಟಿದೆ. ಟಿ20 ವಿಶ್ವಕಪ್​ ಆರಂಭಕ್ಕೆ ಜಸ್ಟ್ 5 ದಿನಗಳಷ್ಟೇ ಬಾಕಿ ಇದೆ.​​ ಉಳಿದೆಲ್ಲಾ ಟೀಮ್ಸ್, ಟಿ20 ವಿಶ್ವಕಪ್​​​​ಗೆ ಅಂತಾನೇ ಬ್ಲೂಪ್ರಿಂಟ್ ರೆಡಿ ಮಾಡಿಕೊಂಡಿವೆ. ಬೇಟೆಗೆ ಹೊಂಚು ಹಾಕಿ ಕುಳಿತಿವೆ. ಆದ್ರೆ ಐಪಿಎಲ್​​ನಲ್ಲಿ ಬ್ಯುಸಿಯಾಗಿದ್ದ ಇಂಡಿಯಾ, ಇನ್ನು ಪ್ರಿಪರೇಷನ್​​​​​ ಶುರುಮಾಡಿಲ್ಲ. ಕೆಲ ಆಟಗಾರರು ಇನ್ನು ಟೀಮ್ ಸೇರಿಕೊಂಡಿಲ್ಲ. ಇದು ಹಲವು ಗೊಂದಲಗಳ ಹುಟ್ಟಿಗೆ ಕಾರಣವಾಗ್ತಿದೆ.

ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ.. ಬಿಸಿಸಿಐನ ಈ ತಾರತಮ್ಯ ಯಾಕೆ?

ಒಂದೇ ಅಭ್ಯಾಸ ಪಂದ್ಯ.. ಕಂಡೀಷನ್ಸ್​ಗೆ ಒಗ್ಗಿಕೊಳ್ಳಬೇಕು..!
ಜೂನ್​​ 5ರಂದು ಟೀಮ್ ಇಂಡಿಯಾದ ಅಭಿಯಾನ ಶುರುವಾಗುತ್ತೆ. ಇದಕ್ಕೂ ಮುನ್ನ ಜೂನ್​1 ರಂದು ಬಾಂಗ್ಲಾ ಎದುರು ಒಂದೇ ಒಂದು ಅಭ್ಯಾಸ ಪಂದ್ಯವನ್ನಷ್ಟೇ ಆಡಲಿದೆ. ಸದ್ಯ ತಂಡದಲ್ಲಿರುವ ಹಲವು ಆಟಗಾರರಿಗೆ ಅಮೆರಿಕಾ ಹಾಗೂ ವೆಸ್ಟ್​ ಇಂಡೀಸ್ ಕಂಡೀಷನ್ಸ್​ನಲ್ಲಿ ಆಡಿದ ಅನುಭವವೇ ಇಲ್ಲ. ಇದೆಲ್ಲಕ್ಕಿಂತ ಮಿಗಿಲಾಗಿ ಈ ಕಂಡೀಷನ್ಸ್​ ಭಾರತೀಯ ಹವಾಮಾನಕ್ಕೆ ತದ್ವಿರುದ್ಧ. ಹೀಗಾಗಿ ಈ ವಾತಾವರಣಕ್ಕೆ ಒಗ್ಗಿಕೊಳ್ಳುವ ಚಾಲೆಂಜ್. ಟೀಮ್ ಇಂಡಿಯಾ ಆಟಗಾರರಿಗೆ ಇದೆ. 8 ದಿನ ಮುಂಚೆ ಅಮೆರಿಕಾಗೆ ಕಾಲಿಟ್ಟಿರುವ ಆಟಗಾರರು ಈ ವಾತವಾರಣಕ್ಕೆ ಎಷ್ಟರ ಮಟ್ಟಿಗೆ ಒಗ್ಗಿಕೊಳ್ಳುತ್ತಾರೆ ಎಂಬ ಪ್ರಶ್ನೆ ಕಾಡ್ತಿದೆ.

ಇದನ್ನೂ ಓದಿ:ಅಂತೆ-ಕಂತೆ ವದಂತಿಗಳ ಮಧ್ಯೆ ಟ್ವೀಟ್ ಮಾಡಿ ನಾಲ್ಕು ಫೋಟೋ ಶೇರ್ ಮಾಡಿದ ಹಾರ್ದಿಕ್ ಪಾಂಡ್ಯ

ಫಾರ್ಮ್‌ನಲ್ಲಿಲ್ಲ ತಂಡದಲ್ಲಿರುವ ಹಲವು ಆಟಗಾರರು
ಕೆಲ ಆಟಗಾರರು ಇನ್ನು ನ್ಯೂಯಾರ್ಕ್​ ಫ್ಲೈಟ್ ಹತ್ತಿಲ್ಲ ಅನ್ನೋ ಚಿಂತೆಯಾದ್ರೆ. ಮತ್ತೊಂದೆಡೆ ವಿಶ್ವಕಪ್​​ ತಂಡದಲ್ಲಿ ಸ್ಥಾನ ಪಡೆದಿರುವ ಹಲವರ ಪ್ರದರ್ಶನ ಕುಸಿದಿದೆ. ವಿರಾಟ್ ಕೊಹ್ಲಿ, ಜಸ್​ಪ್ರಿತ್ ಬುಮ್ರಾ, ಆರ್ಶ್​ದೀಪ್, ಕುಲ್​ದೀಪ್ ಯಾದವ್ ಬಿಟ್ಟರೆ, ಉಳಿದೆಲ್ಲ ಆಟಗಾರರು ಪರದಾಡಿದ್ದಾರೆ. ನಾಯಕ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್ ಫಾರ್ಮ್​ನಲ್ಲಿ ಇಲ್ಲ. ಸಂಜು ಫಾರ್ಮ್​ನಲ್ಲಿದ್ದರೂ, ಚಾಲೆಂಜಿಂಗ್ ಕಂಡೀಷನ್ಸ್​ನಲ್ಲಿ ಕೈಕೊಟ್ಟಿದ್ದಾರೆ. ಈಗ ಟೀಮ್ ಇಂಡಿಯಾಗೆ ದೊಡ್ಡ ತಲೆನೋವಾಗಿದೆ.

ಆಟಗಾರರ ಸ್ಲಾಟ್ ಬಗ್ಗೆಯೂ ಇಲ್ಲ ಕ್ಲಾರಿಟಿ..!
ವಿಶ್ವಕಪ್​ ಬರುತ್ತೆ ಅಂದ್ರೆ ವರ್ಷಕ್ಕೂ ಮಂಚೇನೆ ಟೀಮ್​ ಸಿದ್ಧವಾಗಿರುತ್ತೆ.. ಯಾವ್​ ಸ್ಲಾಟ್​​​ಗೆ ಯಾರ​ನ್ನ ಫಿಕ್ಸ್​ ಮಾಡಬೇಕು? ಮಿಡಲ್​ ಆರ್ಡರ್​​​, ಆಲ್​ರೌಂಡರ್ಸ್​, ಸ್ಪಿನ್ನರ್​, ಫಾಸ್ಟ್​ ಬೌಲರ್ಸ್​ ಹೀಗೆ ಎಲ್ಲಾ ಸ್ಲಾಟ್​​​ಗಳಲ್ಲಿ ಇಂತಹ ಆಟಗಾರರೇ ಫಿಕ್ಸ್​ ಅಂತ ರೆಡಿಯಾಗಿರಬೇಕು. ಟೀಮ್ ಇಂಡಿಯಾದಲ್ಲಿ ರೋಹಿತ್​​​ ಶರ್ಮಾ ಸ್ಲಾಟ್​ವೊಂದು ಬಿಟ್ಟರೆ, ಉಳಿದ್ಯಾವ ಸ್ಲಾಟ್​ಗೂ ಯಾವೊಬ್ಬ ಫಿಕ್ಸ್​ ಆಗಿಲ್ಲ. ಹೀಗಾಗಿ ಬೆಸ್ಟ್​ ಪ್ಲೇಯಿಂಗ್ ಇಲೆವೆನ್ ಆಯ್ಕೆ ನಿಜಕ್ಕೂ ಕೋಚ್ ಆ್ಯಂಡ್ ಕ್ಯಾಪ್ಟನ್​​ಗೆ ಸವಾಲಾಗಿದೆ.

ಕೋರ್​ ಟೀಮ್​ ಇಲ್ಲ.. ಇದು ಸೆಟ್ ಬ್ಯಾಕ್ ಆಗುತ್ತಾ?
ಟಿ20 ವಿಶ್ವಕಪ್​​ಗೆ ಪ್ರಕಟವಾಗಿರುವ ಟೀಮ್ ಇಂಡಿಯಾದಲ್ಲಿ ಕೋರ್ ಗ್ರೂಪ್ ಇಲ್ಲ. ಯಾಕಂದ್ರೆ ಅರ್ಧ ಮಂದಿ ಏಕದಿನ ಫಾರ್ಮೆಟ್​ನಲ್ಲಿ ಬ್ಯುಸಿಯಾಗಿದ್ದ ಆಟಗಾರರು ಆಗಿದ್ರೆ ಕೆಲ ಆಟಗಾರರು ಟಿ20ಗೆ ಮಾತ್ರವೇ ಸೀಮಿತವಾಗಿದ್ರು. ಈ ಪೈಕಿ ರೋಹಿತ್, ವಿರಾಟ್ ಕೊಹ್ಲಿ ಐಪಿಎಲ್ ಆರಂಭಕ್ಕೂ ಮುನ್ನವೇ ಟಿ20ಗೆ ವಾಪಾಸ್ ಆಗಿದ್ರು. ಬೂಮ್ರಾ ಕೂಡ ಐರ್ಲೆಂಡ್ ಸರಣಿಯೇ ಲಾಸ್ಟ್. ಇಂಜುರಿಯಿಂದ ದೂರವಾಗಿದ್ದ ಹಾರ್ದಿಕ್, ಐಪಿಎಲ್ ಬಳಿಕ ಆಡ್ತಿರೋ ಫಸ್ಟ್ ಟಿ20 ಮ್ಯಾಚ್. ಪಂತ್ ಕೂಡ ಇದೇ ಲಿಸ್ಟ್​ನಲ್ಲಿದ್ದಾರೆ.

ಇದನ್ನೂ ಓದಿ:ಈ 5 ಆಟಗಾರರ ಮೇಲೆ ಭಾರೀ ನಿರೀಕ್ಷೆ.. ಪುಟಿದೆದ್ರೆ ಭಾರತಕ್ಕೆ ವಿಶ್ವಕಪ್ ಗ್ಯಾರಂಟಿ..!

ವಿಶ್ವಕಪ್​ ತಂಡದಲ್ಲಿರೋ ಆಟಗಾರರು ಮಹತ್ವದ ಟೂರ್ನಿಗೂ ಮುನ್ನ ಒಟ್ಟಾಗಿ ಒಂದೇ ಒಂದು ಟಿ20 ಸರಣಿಯನ್ನೂ ಆಡಿಲ್ಲ. ಇದ್ರಿಂದ ತಂಡದಲ್ಲಿ ಸಮನ್ವಯತೆಯ ಕೊರತೆ ಕಾಡುವ ಪ್ರಶ್ನೆಯೂ ಇದೆ. ಒಟ್ಟಿನಲ್ಲಿ, ಟಿ20 ವಿಶ್ವಕಪ್ ಗೆಲ್ಲಲು ಹೊರಟಿರುವ ದ್ರಾವಿಡ್ ಆ್ಯಂಡ್ ರೋಹಿತ್​ ಮುಂದೆ, ಸಾಲು ಸಾಲು ಸವಾಲುಗಳಿದ್ದು, ಇವಕ್ಕೆಲ್ಲಾ ಹೇಗೆ ಪರಿಹಾರ ಕಂಡುಕೊಳ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಉಳಿದಿರೋದು ಐದೇ ದಿನ.. ಯಾವುದರಲ್ಲೂ ಕ್ಲಾರಿಟಿಯೇ ಇಲ್ಲ.. ತಂಡ ಒಂದೇ ಆದರೂ ಯಾಕೆ ಹೀಗೆ?

https://newsfirstlive.com/wp-content/uploads/2024/05/ROHIT-4.jpg

Load More