newsfirstkannada.com

×

VIDEO: RCB ತಂಡದ ಮುದ್ದಿನ ಯುವರಾಣಿ ಶ್ರೇಯಾಂಕ ಪಾಟೀಲ್​ಗೆ ತವರಿನಲ್ಲಿ ಅದ್ಧೂರಿ ಸ್ವಾಗತ

Share :

Published April 3, 2024 at 9:46pm

    ಆತ್ಮೀಯವಾಗಿ, ಹೆಮ್ಮೆಯಿಂದ ಅದ್ಧೂರಿಯಾಗಿ ಸ್ವಾಗತಿಸಿದ ಗ್ರಾಮಸ್ಥರು

    ಗ್ರಾಮದ ಶ್ರೀ ಸಿದ್ಧಬಸವೇಶ್ವರ ದೇವಸ್ಥಾನದವರೆಗೂ ಭವ್ಯ ಮೆರವಣಿಗೆ

    ಗ್ರಾಮಸ್ಥರಿಂದ ಶ್ರೇಯಾಂಕ ಪಾಟೀಲ್ ಹಾಗೂ ಕುಟುಂಬಸ್ಥರಿಗೆ ಸನ್ಮಾನ

ಕಲಬುರಗಿ: ಕರ್ನಾಟಕ ಕ್ರಶ್, ಟಗರು ಪುಟ್ಟಿ ಎಂದೆಲ್ಲಾ ಖ್ಯಾತಿ ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಆಟಗಾರ್ತಿ ಶ್ರೇಯಾಂಕ ಪಾಟೀಲ್ ಅವರು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ.

ಮೊನ್ನೆ ಮೊನ್ನೆಯಷ್ಟೇ ಜೋಳದ ರೊಟ್ಟಿ, ಕಾಳು ಪಲ್ಯ, ಮೊಸರು ಚಟ್ನಿ ತಿಂದು ಸಖತ್​ ಸುದ್ದಿಯಲ್ಲಿದ್ದ ಶ್ರೇಯಾಂಕ ಪಾಟೀಲ್ ಇದೀಗ ಸ್ವಂತ ಊರಿಗೆ ಭೇಟಿ ಕೊಟ್ಟಿದ್ದಾರೆ. ಹೌದು, RCB ತಂಡದ ಆಟಗಾರ್ತಿ ಶ್ರೇಯಾಂಕಾ ಪಾಟೀಲ್​ ಅವರು ಸ್ವಂತ ಊರು ಜೇವರ್ಗಿ ತಾಲ್ಲೂಕಿನ ಕೋಳಕೂರು ಗ್ರಾಮಕ್ಕೆ ಹೋಗಿದ್ದಾರೆ. ಈ ವೇಳೆ ಹುಟ್ಟೂರಿಗೆ ಬಂದ ಶ್ರೇಯಾಂಕಾ ಪಾಟೀಲ್​ಗೆ ಹೆಮ್ಮೆಯಿಂದ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.

ಇದನ್ನೂ ಓದಿ: RCB ತಂಡದ ಮುದ್ದಿನ ಯುವರಾಣಿ ಶ್ರೇಯಾಂಕ ಪಾಟೀಲ್; ಕಪ್ ಗೆಲ್ಲುವಲ್ಲಿ ಕನ್ನಡತಿಯ ಪಾಲು ದೊಡ್ಡದು..!

ಶ್ರೇಯಾಂಕಾ ಅವರ ಮೇಲೆ ಹೂ ಮಳೆ ಗೈದ ಗ್ರಾಮಸ್ಥರು ಶ್ರೀ ಸಿದ್ಧಬಸವೇಶ್ವರ ದೇವಸ್ಥಾನದವರೆಗೂ ಅದ್ಧೂರಿಯಾಗಿ ಮೆರವಣಿಗೆ ಮಾಡಿ ಸ್ವಾಗತಿಸಿದ್ದಾರೆ. ಬಳಿಕ ಸಿದ್ದಬಸವೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಶ್ರೇಯಾಂಕಾ ಪಾಟೀಲ್​ಗೆ ಹಾಗೂ ಕುಟುಂಬಸ್ಥರಿಗೆ ಗ್ರಾಮಸ್ಥರು ಸನ್ಮಾನ ಮಾಡಿದ್ದಾರೆ. ಈ ವೇಳೆ ಮತ್ತಷ್ಟು ಉನ್ನತ ಮಟ್ಟಕ್ಕೆ ಶ್ರೇಯಾಂಕಾ ಪಾಟೀಲ್ ಬೆಳೆಯಲೆಂದು ಹಾರೈಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: RCB ತಂಡದ ಮುದ್ದಿನ ಯುವರಾಣಿ ಶ್ರೇಯಾಂಕ ಪಾಟೀಲ್​ಗೆ ತವರಿನಲ್ಲಿ ಅದ್ಧೂರಿ ಸ್ವಾಗತ

https://newsfirstlive.com/wp-content/uploads/2024/04/shreyaka.jpg

Load More