newsfirstkannada.com

ಉದ್ಯಮಿ ಕೃಷ್ಣೇಗೌಡ ಕೊಲೆ ಕೇಸ್;​ 6 ತಿಂಗಳು ತಲೆಮರೆಸಿಕೊಂಡಿದ್ದ ಕೊಲೆಗಾರ ಕೊನೆಗೂ ಅರೆಸ್ಟ್!

Share :

Published February 7, 2024 at 8:46pm

    ಉದ್ಯಮಿ ದುಡ್ಡಲ್ಲಿ ಶೋಕಿ, ಹಣ ವಾಪಸ್ ಕೇಳಿದ್ದಕ್ಕೆ ನಡೆದಿತ್ತು ಕೊಲೆ

    ಜೆಡಿಎಸ್​ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮೃತ ಕೃಷ್ಣಗೌಡ

    ತರಕಾರಿ, ಬೇಕರಿ ಕೆಲಸ ಮಾಡಿದ್ದ ಆರೋಪಿ ಈಗ ಪೊಲೀಸ್ ಬಲೆಗೆ

ಹಾಸನ: ಆ ಕೊಲೆಗೆ ಇಡೀ ಹಾಸನ ಜಿಲ್ಲೆ ಬೆಚ್ಚಿ ಬಿದ್ದಿತ್ತು. ಗ್ರಾನೈಟ್ ಫ್ಯಾಕ್ಟರಿ ಮಾಲೀಕನನ್ನ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಕೊಲೆ ನಡೆದ ಆರು ತಿಂಗಳಾದ್ರು ಪ್ರಮುಖ ಆರೋಪಿ ಸಿಕ್ಕೇ ಇರಲಿಲ್ಲ. ಪೊಲೀಸರು, ಸಿಐಡಿ ಟೀಮ್ ಎಷ್ಟೇ ಹುಡುಕಾಡಿದ್ರೂ ಕೊಲೆಗಾರನ ಸುಳಿವು ಸಿಕ್ಕಿರಲಿಲ್ಲ. ಆದ್ರೀಗ ಅಂತಿಮವಾಗಿ ಪೊಲೀಸರು ಪ್ರಮುಖ ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.

ಆಗಸ್ಟ್​ 9ರಂದು ಹಾಸನ ನಗರ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಬರ್ಬರವಾಗಿ ಹತ್ಯೆಯೊಂದಾಗಿತ್ತು. ಗ್ರಾನೈಟ್ ಫ್ಯಾಕ್ಟರಿ ಮಾಲೀಕ ಕೃಷ್ಟೇಗೌಡ ಅವರನ್ನ ನಡು ರಸ್ತೆಯಲ್ಲಿಯಲ್ಲಿ ಹಂತಕರು ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ಕೃಷ್ಣಗೌಡ ಜೆಡಿಎಸ್​ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು, ರೇವಣ್ಣ ಕುಟುಂಬಕ್ಕೂ ಆಪ್ತರಾಗಿದ್ದ ಕಾರಣ ರಾಜಕೀಯವಾಗಿಯೂ ಈ ಕೊಲೆ ಸಂಚಲನ ಸೃಷ್ಟಿಸಿತ್ತು. ಅಂದಿನ ಎಸ್ಪಿ ಹರಿರಾಮ್ ಶಂಕರ್ ಖುದ್ದು ಸ್ಥಳಕ್ಕೆ ಬಂದಿದ್ದರು. ಶ್ವಾನದಳ, ಬೆರಳಚ್ಚು ತಜ್ಞರು. ಎಪ್.ಎಸ್.ಎಲ್ ತಜ್ಞರು ಎಲ್ಲಾ ಆ್ಯಂಗಲ್​ನಲ್ಲೂ ಮಾಹಿತಿ ಕಲೆ ಹಾಕಿದ್ದರು. ಹಾಸನ ಶಾಸಕ ಸ್ವರೂಪ್ ಪ್ರಕಾಶ್, ಭವಾನಿ ರೇವಣ್ಣ ಸಹ ಈ ಘಟನೆ ಖಂಡಿಸಿ ಆಕ್ರೋಶ ಹೊರಹಾಕಿದ್ದರು.

ಅಂದ್ಹಾಗೆ, ಈ ಕೊಲೆ ನಡೆದ ತಿಂಗಳ ಅಂತರದಲ್ಲೇ ಈ ಕೇಸ್​ಗೆ ಸಂಬಂಧಿತ 12 ಆರೋಪಿಗಳನ್ನ ಪೊಲೀಸರು ಅರೆಸ್ಟ್​ ಮಾಡಿದ್ದರು. ಆದರೆ ಈ ಕೊಲೆಯ ರೂವಾರಿ, ಈ ಕೊಲೆಯ ಮಾಸ್ಟರ್​ಮೈಂಡ್​ ಆಗಿದ್ದ ಆ ಒಬ್ಬ ಖತರ್ನಾಕ್​ ಕಿಲಾಡಿ ಮಾತ್ರ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಪೊಲೀಸರು ಎಷ್ಟೇ ಹುಡುಕಿದರು, ಎಷ್ಟೇ ಪ್ಲಾನ್ ಮಾಡಿದರೂ ಸಣ್ಣ ಸುಳಿವು ಸಹ ಸಿಕ್ಕಿರಲಿಲ್ಲ. ಇದೀಗ, ಆರು ತಿಂಗಳ ಬಳಿಕ ಕೃಷ್ಣೇಗೌಡ ಕೊಲೆ ಕೇಸ್​ನ ಮಾಸ್ಟರ್​ಮೈಂಡ್​ ಹಂತಕ ಯೋಗಾನಂದ್​ ಸಿಕ್ಕಿಹಾಕಿಕೊಂಡಿದ್ದಾನೆ. ಸಿಐಡಿ ಮತ್ತು ಹಾಸನದ ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ಯೋಗಾನಂದ್​ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತುಮಕೂರಿನ ತೋಟದ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಕೊಲೆಗಾರನ್ನ ಹುಡುಕಿ ಹಿಡಿದಿದ್ದಾರೆ. ಆರು ತಿಂಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಯೋಗಾನಂದ್ ತುರುವಕೆರೆಯ ತೋಟದ ಮನೆಯಲ್ಲಿರೋ ಬಗ್ಗೆ ಖಚಿತ ಮಾಹಿತಿ ಸಿಕ್ಕ ಕೂಡಲೇ, ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.

ಸುಪಾರಿ ಕೊಟ್ಟು ಕೃಷ್ಣೆಗೌಡನ ಕೊಲೆ ಮಾಡಿಸಿದ ಯೋಗಾನಂದ್!

ಆಗಸ್ಟ್ 9ಕ್ಕೆ ಕೃಷ್ಣೆಗೌಡ ಅವರ ಕೊಲೆ ಆಗಿತ್ತು. ಅಗಸ್ಟ್ 12ಕ್ಕೆ ಕೊಲೆಗೆ ಸಹಕಾರ ನೀಡಿದ್ದ ಆರು ಆರೋಪಿಗಳನ್ನ ಪೊಲೀಸರು ಲಾಕ್ ಮಾಡಿದ್ದರು. ಕೊಲೆ ಸಂಚಿನಲ್ಲಿ ಭಾಗಿಯಾಗಿದ್ದ ಯೋಗಾನಂದ್ ನ ಚಾನಲ್ ಪಾಟ್ನರ್ ಸುರೇಶ್, ಯೋಗಾನಂದನ ಮಾವ ಕೃಷ್ಣಕುಮಾರ್, ಯೋಗಾನಂದ್ ಪತ್ನಿ ಸುಧಾರಾಣಿ, ಯೋಗಾನಂದನ ಪ್ರೇಯಸಿ ಅಶ್ವಿನಿ ಹಾಗು ಯೋಗಾನಂದ್ ಸಂಬಂಧಿ ಸಂಜು ಮತ್ತು ಆತನ ಪತ್ನಿ ಚೈತ್ರಳನ್ನ ಬಂದಿಸಿದ್ದರು. ಇವರನ್ನ ವಿಚಾರಣೆ ಮಾಡಿದ್ಮೇಲೆ ಕೊಲೆಯ ಅಸಲಿ ಸತ್ಯ ಬಯಲಾಗಿತ್ತು. ಕೃಷ್ಣೇಗೌಡ ಹೇಳಿ ಕೇಳಿ ಉದ್ಯಮಿ. ಗ್ರಾನೈಟ್​ ಉದ್ಯಮಿ. ಆತನ ಬಳಿ ಕೋಟಿ ಕೋಟಿ ದುಡ್ಡು ಇತ್ತು. ಈ ನಡುವೆ ಕೃಷ್ಣೇಗೌಡರ ವಿಶ್ವಾಸ ಗಳಿಸಿಕೊಂಡ ಯೋಗಾನಂದ್, ಕೆಲವು ಕಡೆ ಹಣ ಇನ್ವಸ್ಟ್​ ಮಾಡೋಣ ಹಣ ಡಬಲ್ ಮಾಡಿಕೊಡ್ತೀನಿ ಅಂತ ಆಮಿಷವೊಡಿ ಪುಸಲಾಯಿಸಿದ್ದ. ಯೋಗಾನಂದ್​ನ ಮಾತು ಕೇಳಿ ಕೃಷ್ಣೇಗೌಡ ಕೂಡ ಕೇಳಿ ಕೇಳಿದಂಗೆ ದುಡ್ಡು ಕೊಟ್ಟಿದ್ದ. ಲೋಕಲ್ ಚಾಲನ್ ಓಪನ್ ಮಾಡಿಸಿದ್ದ. ದೇವರು, ಆಸ್ತಿಕತೆ ಅಂದ್ರೆ ಏನು ಬೇಕಾದ್ರು ಮಾಡೋಕೆ ರೆಡಿ ಅನ್ನೋ ಮನಸ್ಥಿತಿ ಹೊಂದಿದ್ದ ಕೃಷ್ಣೆಗೌಡರನ್ನು ಸಿಕ್ಕ ಸಿಕ್ಕ ದೇವಾಲಯ ಸುತ್ತಾಡಿಸಿ ಬ್ಲಾಕ್ ಮ್ಯಾಜಿಕ್ ಅಂತೆಲ್ಲಾ ನಂಬಿಸಿ ಲಕ್ಷ ಲಕ್ಷ ಹಣ ಪೀಕಿದ್ದ. ಕಡೆಗೆ ಸಿನಿಮಾ ಹುಚ್ಚು ಹತ್ತಿಸಿ ಒಂದು ಸಿನಿಮಾ ಮಾಡೋಣ ಅಂತಾನೂ ಹಣ ಇನ್ವೆಸ್ಟ್​ ಮಾಡಿಸಿದ್ದ.

ಇದನ್ನು ಓದಿ: ಗೋಕರ್ಣ ಪ್ರವಾಸಕ್ಕೆ ಬಂದ ವಿದೇಶಿ ಮಹಿಳೆ ದಿಢೀರ್​ ನಾಪತ್ತೆ; ಹಲವು ಅನುಮಾನ!

ಇದೆಲ್ಲರ ನಡುವೆ, ನೋಡು ನೋಡುತ್ತಿದ್ದಂತೆ ಯೋಗಾನಂದ್​ ರಾಯಲ್ ಆಗಿ ಓಡಾಡೋಕೆ ಶುರು ಮಾಡಿದ. ನಾಲ್ಕೈದು ವರ್ಷಗಳ ಹಿಂದೆ ಏನು ಇಲ್ಲದವನು ದಿಢೀರ್ ಅಂತ ಶೋಕಿ ಮಾಡೋಕೆ ಶುರು ಮಾಡಿದ್ದ. ಇದನ್ನ ಗಮನಿಸಿದ ಕೃಷ್ಣೇಗೌಡರಿಗೆ ಅನುಮಾನ ಬರುತ್ತೆ. ದುಡ್ಡು ಇನ್ವೆಸ್ಟ್​ ಮಾಡ್ತಿದ್ದೀನಿ ಹೊರತು ವಾಪಸ್ ಬರ್ತಿಲ್ವಲ್ಲಾ, ಇವನೇನೋ ಮೋಸ ಮಾಡ್ತಿದ್ದಾನೆ ಅನ್ನಿಸಿ ಒಂದು ದಿನ ಪ್ರಶ್ನೆ ಮಾಡ್ತಾರೆ. ನನ್ನ ಹಣ ಕೊಡು ಅಂತ ಹಿಂದೆ ಬೀಳ್ತಾರೆ. ಇದೇ ವಿಚಾರವಾಗಿ ಇಬ್ಬರು ನಡುವೆ ಹಲವರು ಬಾರಿ ಗಲಾಟೆಗಳು ಆಗಿವೆ. ಇದಾದ ನಂತರ ಒಂದಷ್ಟು ದಿನ ಕೃಷ್ಣೇಗೌಡರ ಕೈಗೂ ಬಾಯಿಗೂ ಸಿಗದಂತೆ ಯೋಗಾನಂದ್​ ತಲೆತಪ್ಪಿಸಿಕೊಂಡು ಓಡಾಡ್ತಾನೆ. ಆದರೂ ಬೆನ್ನು ಬಿಡದ ಕೃಷ್ಣೇಗೌಡ ದುಡ್ಡು ಕೇಳೋಕೆ ಶುರು ಮಾಡ್ತಾರೆ. ಆಗ್ಲೇ ನೋಡಿ ಯೋಗಾನಂದ್​ನ ಕ್ರಿಮಿನಲ್​ ಮೈಂಡ್ ಆ್ಯಕ್ಟಿವ್ ಆಗಿದ್ದು.

ಹತ್ಯೆ ಬಳಿಕ ಊರು ಊರು ಅಲೆದಾಡಿ ತಪ್ಪಿಸಿಕೊಂಡಿದ್ದ ಕೊಲೆಗಾರ!

ಕೃಷ್ಣೇಗೌಡ ಇದ್ದಷ್ಟು ದಿನ ತನ್ನನ್ನ ಬಿಡಲ್ಲ. ದುಡ್ಡಿಗಾಗಿ ಪೀಡಿಸ್ತಾನೆ ಇರ್ತಾನೆ ಅಂತ ಪ್ಲಾನ್ ಮಾಡಿದ ಯೋಗಾನಂದ್, 4.5 ಲಕ್ಷಕ್ಕೆ ಬೆಂಗಳೂರು ಹಾಗೂ ಮೈಸೂರು ಮೂಲದ ಯುವಕರಿಗೆ ಸುಪಾರಿ ಕೊಡ್ತಾನೆ. ಅದರಂತೆ ಮೂರ್ನಾಲ್ಕು ತಿಂಗಳು ವಾಚ್ ಮಾಡಿದ್ದ ಹಂತಕ ಪಡೆ ಅಗಸ್ಟ್ 9ರಂದು ಮನೆಯಿಂದ ಇನ್ನೋವಾ ಕಾರಿನಲ್ಲಿ ಹೋಗೋವಾಗ ಆಟೋದಲ್ಲಿ ಹಿಂಬಾಲಿಸಿ ಬಂದೋರು ಕಾರು ಅಡ್ಡಗಟ್ಟಿ ಅಟ್ಯಾಕ್ ಮಾಡಿಬಿಡ್ತಾರೆ. ತಪ್ಪಿಸಿಕೊಂಡು ಓಡೋ ಯತ್ನ ಮಾಡಿದ್ರು ಬೆಂಬಿಡದೆ ಬಂದು ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗ್ತಾರೆ. ಕೊಲೆ ನಡೆದ ಮೂರೇ ದಿನಕ್ಕೆ ಕೊಲೆಗೆ ಸಹಕಾರ ಕೊಟ್ಟವರ ಬಂಧನವಾಗಿತ್ತು, ಬಳಿಕ 12 ದಿನಕ್ಕೆ ಸುಪಾರಿ ಪಡೆದು ಕೊಲೆ ಮಾಡಿದ್ದ 8 ಜನರ ಗ್ಯಾಂಗ್ ಅನ್ನು ಕೂಡ ಪೊಲೀಸರು ಹೆಡೆಮುರಿ ಕಟ್ಟಿದ್ದರು. ಆದರೆ ಸುಫಾರಿ ಕೊಟ್ಟ ಯೋಗಾನಂದ್ ಮಾತ್ರ ಕೈಗೆ ಸಿಗಂತೆ ಓಡಿ ಹೋಗಿದ್ದ. ಬೇರೆ ಬೇರೆ ರಾಜ್ಯಗಳಲ್ಲಿ ಹೋಗಿ ತಲೆಮರಿಸಿಕೊಂಡಿದ್ದ.

ಕೊಲೆ ಮಾಡಿಸಿ ಸೀದಾ ಚೆನ್ನೈಗೆ ಹೋಗಿದ್ದ ಯೋಗಾನಂದ್ ಮತ್ತು ಆತನ ಸಂಬಂಧಿ ಅನಿಲ್, ಒಂದು ವಾರ ಅಲ್ಲೇ ತಂಗಿದ್ದರು. ಅಲ್ಲಿಂದ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಗೆ ಬಂದಿದ್ದರು. ಆಮೇಲೆ ಮಂತ್ರಾಲಯಕ್ಕೆ ಹೋಗಿ ರಾಯರ ದರ್ಶನ ಬೇರೆ ಪಡೆದುಕೊಂಡಿದ್ದರು. ಎಲ್ಲಿಯೂ ಅಪ್ಪಿ ತಪ್ಪಿಯೂ ಮೊಬೈಲ್ ಬಳಸದೆ ಚಾಣಾಕ್ಷತೆಯಿಂದ ಓಡಾಡುತ್ತಿದವದರು ಕಡೆಗೆ ಬಾಂಬೆಗೆ ಹೋಗಿ ಬೇಕರಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಆಮೇಲೆ ಕರ್ನಾಟಕದ ಕಡೆಗೆ ಬಂದಿದ್ದ ಯೋಗಾನಂದ್ ಕೆಲವು ದಿನ ಕಂಪ್ಲಿಯಲ್ಲಿ ತರಕಾರಿ ವ್ಯಾಪಾರ ಮಾಡಿದ್ರಂತೆ. ನಂತರ ಬಳ್ಳಾರಿಗೆ ಬಂದು ಕೂಲಿ ಕೆಲಸ ಮಾಡಿದ್ದಾನೆ. ಕೋಲಾರದ ಶಹಪುರದ ಪೇಲಾಮಪುರದಲ್ಲಿ ಸ್ವಾಮಿಜಿಯೊಬ್ಬರ ಕಾರಿನ ಚಾಲಕನಾಗಿ ಒಂದುವಾರ ಕೆಲಸ ಮಾಡಿಕೊಂಡಿದ್ದ. ಕೊನೆಗೆ ಸಂಬಂಧಿ ಅನಿಲ್​ನ ಸಂಪರ್ಕ ಮಾಡಿ ತುರುವೇಕರೆಯ ತೋಟದ ಮನೆಯೊಂದರಲ್ಲಿ ಬಂದು ಅಡಗಿದ್ದಾನೆ. ಸುಮಾರು ಎರಡು ತಿಂಗಳಿಂದ ಅನಿಲ್ ಜೊತೆಗೆ ತೋಟದ ಮನೆಯಲ್ಲಿದ್ದ ಯೋಗಾನಂದ್​ನ ನಸೀಬು ಚೆನ್ನಾಗಿರಲಿಲ್ಲ. ಅಷ್ಟೋತ್ತಿಗೆ ಅಲರ್ಟ್ ಆಗಿದ್ದ ಪೊಲೀಸರು ಜನವರಿ 30 ರಂದು ದಾಳಿ ಮಾಡಿ ಲಾಕ್ ಮಾಡಿದ್ದಾರೆ.

ಇಡೀ ಹಾಸನ ಜಿಲ್ಲೆಯೇ ಬೆಚ್ಚಿಬಿದ್ದಿದ್ದ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕೊನೆಗೂ ಸಿಕ್ಕಿ ಬಿದ್ದಿದ್ದಾನೆ. ಹಾಸನ ಪೊಲೀಸರು, ಸಿಐಡಿ ಟೀಮ್ ನಿರಂತರವಾಗಿ ಕೆಲಸ ಮಾಡಿ ಯೋಗಾನಂದ್​ನ ಹೆಡೆಮುರಿ ಕಟ್ಟಿದ್ದಾರೆ. ಕೃಷ್ಣೇಗೌಡರಂತೆ ಇನ್ನಷ್ಟು ಮಂದಿಗೂ ಯೋಗಾನಂದ್ ಅಂಡ್ ಟೀಮ್ ಇಂಥದ್ದೇ ವಂಚನೆ ಮಾಡಿರುವ ಅನುಮಾನವೂ ವ್ಯಕ್ತವಾಗಿದೆ. ಯೋಗಾನಂದ್​ನನ್ನ ಕೋರ್ಟ್​ಗೂ ಹಾಜರುಪಡಿಸಿರುವ ಪೊಲೀಸರು ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆದಿದ್ದು, ಮತ್ತಷ್ಟು ಪ್ರಕರಣ ಬೆಳಕಿಗೆ ಬರುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉದ್ಯಮಿ ಕೃಷ್ಣೇಗೌಡ ಕೊಲೆ ಕೇಸ್;​ 6 ತಿಂಗಳು ತಲೆಮರೆಸಿಕೊಂಡಿದ್ದ ಕೊಲೆಗಾರ ಕೊನೆಗೂ ಅರೆಸ್ಟ್!

https://newsfirstlive.com/wp-content/uploads/2024/02/death-3.jpg

Load More