Advertisment

ಪೃಥ್ವಿಗೆ ಗ್ರೇಗ್ ಚಾಪೆಲ್ ಭಾವನಾತ್ಮಕ ಓಲೆ.. ಎಂಥವರಿಗೂ ಸ್ಫೂರ್ತಿ ತುಂಬುತ್ತೆ ಪತ್ರದ ಸಾಲುಗಳು..!

author-image
Ganesh
Updated On
ಪೃಥ್ವಿಗೆ ಗ್ರೇಗ್ ಚಾಪೆಲ್ ಭಾವನಾತ್ಮಕ ಓಲೆ.. ಎಂಥವರಿಗೂ ಸ್ಫೂರ್ತಿ ತುಂಬುತ್ತೆ ಪತ್ರದ ಸಾಲುಗಳು..!
Advertisment
  • ಮುಂಬೈಕರ್​ಗೆ ಸ್ಫೂರ್ತಿ ತುಂಬಿದ ಗ್ರೇಗ್​ ಚಾಪೆಲ್
  • ಗ್ರೇಗ್​ ಚಾಪೆಲ್ ಸಲಹೆ ಸ್ವೀಕರಿಸ್ತಾರಾ ಮುಂಬೈಕರ್?
  • ಸೆಟ್​ ಬ್ಯಾಕ್​​​ ಟು ಕಮ್​ಬ್ಯಾಕ್ ಮಾಡ್ತಾರಾ ಪೃಥ್ವಿ ಶಾ?

ಪೃಥ್ವಿ ಶಾ. ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ಇವತ್ತು ಟಾಪ್ ಕ್ಲಾಸ್ ಆಟಗಾರನಾಗಿ ವಿಶ್ವ ಕ್ರಿಕೆಟ್​ ಅನ್ನೇ ಆಳುತ್ತಿದ್ದ. ಶಾರ್ಟ್​ ಟೈಮ್ ಸಕ್ಸಸ್​​ನ ಅಲೆ, ತಾನೇ ಮಾಡಿಕೊಂಡ ತಪ್ಪುಗಳಿಗೆ ಈಗ ಬೆಲೆ ಕಟ್ಟುತ್ತಿದ್ದಾರೆ. ಟೀಮ್​ ಇಂಡಿಯಾ ಬಿಡಿ ಮುಂಬೈ ರಣಜಿ ತಂಡದಿಂದಲೂ ಹೊರಬಿದ್ದಿರೋ ಪೃಥ್ವಿ ಷಾ ಸದ್ಯ ಕಂಗಾಲಾಗಿದ್ದಾರೆ. ದಿಕ್ಕೆ ತೋಚದೇ ನಿಂತಿರೋ ಪೃಥ್ವಿ​ಗೆ ಇದೀಗ ಟೀಮ್ ಇಂಡಿಯಾದ ಮಾಜಿ ಕೋಚ್ ಪ್ರೇರಣೆ ತುಂಬುವ ಕೆಲಸ ಮಾಡಿದ್ದಾರೆ.

Advertisment

18ನೇ ವಯಸ್ಸಿಗೆ ಟೀಮ್ ಇಂಡಿಯಾಗೆ ಡೆಬ್ಯು ಮಾಡಿದ್ದ ಮುಂಬೈಕರ್, ಮೊದಲ ಪಂದ್ಯದಲ್ಲೇ ಶತಕ ಬಾರಿಸಿ ಸೂಪರ್ ಸ್ಟಾರ್​ ಆದರು. ನೇಮ್, ಫೇಮ್ ಎಲ್ಲವೂ ಸಿಕ್ಕಿತ್ತು. ಪೃಥ್ವಿ ಶಾರ ಅಶಿಸ್ತು ಟೀಮ್ ಇಂಡಿಯಾದಲ್ಲೇ ಅಲ್ಲ, ದೇಶಿ ತಂಡದಿಂದಲೂ ಕಿಕ್​ ಔಟ್​​​​​​​​​​​ ಮಾಡಿದೆ. ಮುಂಬೈ ತಂಡಕ್ಕೂ ಪೃಥ್ವಿ ಷಾ ಈಗ ಬೇಡವಾಗಿದ್ದಾರೆ.

ಇದನ್ನೂ ಓದಿ:ಖುಷಿಯಲ್ಲಿದ್ದ ಬೆನ್ನಲ್ಲೇ ದುಃಖ; ಪೃಥ್ವಿ ಷಾಗೆ ಮತ್ತೆ ಬಿಗ್ ಶಾಕ್.. ಈಗ ಏನಾಯ್ತು..

ಪೃಥ್ವಿ ಷಾ ಕ್ರಿಕೆಟ್​ ಕರಿಯರ್​ ಅಂತ್ಯ ಎಂದೆ ಫ್ಯಾನ್ಸ್​, ಕ್ರಿಕೆಟ್​ ವಲಯದಲ್ಲಿ ಟಾಕ್​ ಎದ್ದಿದೆ. ಟೀಕೆಗಳೇ ಹೆಚ್ಚಾಗಿದ್ದು, ಕುಸಿದು ಬಿದ್ದಿರೋ ಪೃಥ್ವಿಗೆ ಬೆಂಬಲವೇ ಸಿಗದಂತಾಗಿದೆ. ಈ ವೇಳೆ ಆಸ್ಟ್ರೇಲಿಯಾದ ದಿಗ್ಗಜ, ಟೀಮ್​ ಇಂಡಿಯಾ ಮಾಜಿ ಕೋಚ್ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಭಾವನಾತ್ಮಕ ಪತ್ರ ಬರೆದು ಪೃಥ್ವಿ ಶಾಗೆ ಸ್ಫೂರ್ತಿ ತುಂಬುವ ಕೆಲಸ ಮಾಡಿದ್ದಾರೆ.

Advertisment

ಹಾಯ್ ಪೃಥ್ವಿ..,

ಮುಂಬೈ ತಂಡದಿಂದ ಹೊರಗಿರುವ ನೀವು ಸವಾಲಿನ ಸಮಯ ಎದುರಿಸುತ್ತಿದ್ದಿರಾ ಎಂದು ಅರ್ಥ ಮಾಡಿಕೊಂಡಿದ್ದೇನೆ. ಹತಾಶೆ ಮತ್ತು ಅಭದ್ರತೆ ಅನುಭವಿಸುತ್ತಿರೋದು ಸಹಜ. ಇವು ಕ್ರೀಡಾಪಟುಗಳ ಜೀವನದ ಮಹತ್ವದ ತಿರುವುಗಳಾಗಿವೆ. ಇದು ಜೀವನ ಹಾಗೂ ವ್ಯಕ್ತಿತ್ವ ರೂಪಿಸಲು ಸಹಾಯ ಮಾಡುತ್ತದೆ. ನೀವು ಭಾರತದ ಅಂಡರ್​​-19 ತಂಡಕ್ಕಾಗಿ ಆಡಿದ್ದನ್ನ ನೋಡಿದ್ದೇನೆ. ನೀವು ಅತ್ಯದ್ಬುತ ಪ್ರತಿಭೆ ಅನ್ನೋದನ್ನು ತೋರಿಸಿಕೊಟ್ಟಿದ್ದೀರಿ. ನೆನಪಿಡಿ, ಹಿನ್ನಡೆ ಅನ್ನೋದು​ ಪ್ರತಿ ಶ್ರೇಷ್ಠ ಕ್ರೀಡಾಪಟುವಿನ ಯಶಸ್ಸಿನ ಕಥೆಯ ಒಂದು ಭಾಗ. ದಂತಕಥೆ ಡಾನ್ ಬ್ರಾಡ್ಮನ್​​​ ಸಹ ಇಂಥದ್ದನ್ನು ಅನುಭವಿಸಿದ್ದಾರೆ. ಡಾನ್ ಬ್ರಾಡ್ಮನ್​ನ ಶ್ರೇಷ್ಠರನ್ನಾಗಿ ಮಾಡಿದ್ದು ಸವಾಲುಗಳನ್ನು ಹೇಗೆ ಎದುರಿಸಬೇಕು ಅನ್ನೋದು.

ನನ್ನ ವೃತ್ತಿ ಜೀವನದಲ್ಲಿ ಅನುಭವಿಸಿದ ಅತ್ಯಮೂಲ್ಯ ಅನುಭವ ತಂಡದಿಂದ ಡ್ರಾಪ್​ ಆಗಿದ್ದು. ಅದು ನನ್ನ ಆಟವನ್ನ ನಾನೇ ವಿಮರ್ಶೆ ಮಾಡಿಕೊಳ್ಳಲು ಸಹಾಯ ಮಾಡ್ತು. ನನ್ನ ಅಪ್ರೋಚ್ ಬದಲಾಗುವಂತೆ ಮಾಡ್ತು. ಇದ್ರಿಂದ ನನ್ನ ವರ್ತನೆಯಲ್ಲಿ ಬದಲಾವಣೆಯಾಗಿ ವಾಸ್ತವದಲ್ಲಿ ಇರುವುದನ್ನು ಕಲಿತೆ. ಪ್ರತಿಭೆಗಿಂತ ಬದ್ಧತೆಯಿಂದ ಇರುವುದು ಮುಖ್ಯವಾಗಿದೆ. ಪ್ರತಿ ಎಸೆತದ ಮೇಲೆ ದೃಷ್ಟಿ ಇಟ್ಟು ಆ ಕ್ಷಣದಲ್ಲಿ ಪ್ರತಿಕ್ರಿಯಿಸಿದೆ. ನಾನು ಸ್ಕಿಲ್ಸ್​ಗಾಗಿ ಮಾತ್ರವೇ ಅಭ್ಯಾಸ ನಡೆಸಲಿಲ್ಲ. ನನ್ನ ಮೈಂಡ್​ಸೆಟ್ ವೃದ್ಧಿಸಿಕೊಳ್ಳಲು ತರಬೇತಿ ನಡೆಸಿದೆ. ನಾನು ಎಷ್ಟು ಚೆನ್ನಾಗಿ ಪ್ರತಿ ಚೆಂಡಿನ ಮೇಲೆ ಫೋಕಸ್ ಮಾಡುತ್ತಿದ್ದೇನೆ ಎಂಬುವುದನ್ನ ಅಭ್ಯಾಸದ ಸಮಯದಲ್ಲಿ ನಿರ್ಣಯಿಸಲು ಕಲಿತೆ. ಅಂತಿಮವಾಗಿ ಅದು ಫಲಿತಾಂಶವಾಗಿ ಬದಲಾಯ್ತು. ಫೋಕಸ್​ ಟು ಪ್ರೊಸಸ್, ಅಭ್ಯಾಸ ಹಾಗೂ ಆಟ ಇವೆರಡಕ್ಕೂ ಪರಿವರ್ತನೆ ಆಯ್ತು. ಇದೇ ರೀತಿಯ ಆತ್ಮಾವಲೋಕನದ ಪ್ರಯಾಣವನ್ನು ಕೈಗೊಳ್ಳಲು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ. ಕ್ರಿಕೆಟ್​​ ಕೇವಲ ದೈಹಿಕ ಆಟವಲ್ಲ. ನಿಮ್ಮ ಜೀವನಶೈಲಿ, ಫಿಟ್‌ನೆಸ್​​ನ ಆಹಾರ ಕ್ರಮವೂ ಆಗಿದೆ.

ಈ ಹಿಂದೆ ನೀನು ಏನಾಗಿದ್ದೆ ಅನ್ನೋದು ಮುಖ್ಯವಲ್ಲ. ಇಲ್ಲಿಂದ ಮುಂದೆ ನೀವು ಏನು ಮಾಡುತ್ತೀರಿ ಎಂಬುದು ಮುಖ್ಯವಾಗಿದೆ. ನೀವು ಈಗ ಪ್ರಮುಖ ಘಟ್ಟದಲ್ಲಿ ಇದ್ದೀರಿ. ನಿಮ್ಮ ಛಾಪು ಮೂಡಿಸಲು ಇನ್ನೂ ಹಲವು ವರ್ಷಗಳು ಮುಂದಿವೆ. ನೀವು ಬಯಸಿರುವ ಕ್ರಿಕೆಟಿಗ, ವ್ಯಕ್ತಿಯಾಗಲು ಈ ಸಮಯ ಬಳಸಿಕೊಳ್ಳಿ. ನಿಮಗೆ ಸ್ಫೂರ್ತಿ ತುಂಬುವ ಹಾಗೂ ಪ್ರೇರೇಪಿಸುವ ಜನರೊಂದಿಗೆ ಸಮಯ ಕಳೆಯಿರಿ. ನಾನು ಮತ್ತು ಅನೇಕರು ನಿಮ್ಮನ್ನ ನಂಬಿದ್ದೇವೆ. ನಿಮ್ಮ ಜರ್ನಿಯಲ್ಲಿ ಮತ್ತೆ ಮೇಲೇರಲು ಬೆಂಬಲಿಸಲು ನಾವಿದ್ದೇವೆ -ಗ್ರೇಗ್ ಚಾಪೆಲ್, ಮಾಜಿ ಕ್ರಿಕೆಟರ್

ಒಟ್ಟಿನಲ್ಲಿ ತಪ್ಪು ಮಾಡಿ ತಂಡದಿಂದ ಹೊರಬಿದ್ದಿರೋ ಪೃಥ್ವಿ ಷಾ ಇದೀಗ ಕೆಟ್ಟ ಮೇಲಾದ್ರೂ ಬುದ್ದಿ ಕಲಿಯಬೇಕಿದೆ. ಪೃಥ್ವಿ ಶಾ ಜೀವನದಲ್ಲಿ ಈವರೆಗೆ ಏನೇ ನಡೆದಿರಲಿ, ತಪ್ಪುಗಳಾಗಿರಲಿ ಈಗ ಆ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶವಿದೆ. ಆ ಎಲ್ಲಾ ತಪ್ಪುಗಳನ್ನ ತಿದ್ದಿಕೊಂಡು ಬೆಳೆದ್ರೆ, ಮುಂಬೈ ರಾಜ್ಯ ತಂಡಕ್ಕೇ ಅಲ್ಲ. ಟೀಮ್ ಇಂಡಿಯಾಗೂ ರೀ ಎಂಟ್ರಿ ಕೊಡಬಲ್ಲ ಸಾಮರ್ಥ್ಯ ಪೃಥ್ವಿಯಲ್ಲಿದೆ. ಈ ನಿಟ್ಟಿನಲ್ಲೇ ಪೃಥ್ವಿ ಶಾ ಮುನ್ನಡೆಯಲಿ ಅನ್ನೋದೇ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಶಯ.

ಇದನ್ನೂ ಓದಿ:ಬುದ್ಧಿ ಕಲಿಯದ ಪೃಥ್ವಿ ಶಾ.. ಟೀಂ ಇಂಡಿಯಾದಿಂದ ಗೇಟ್​ಪಾಸ್ ಬೆನ್ನಲ್ಲೇ ಮತ್ತೊಂದು ಬಿಗ್​ಶಾಕ್..!

Advertisment

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment