/newsfirstlive-kannada/media/post_attachments/wp-content/uploads/2024/05/KKR-FAN.jpg)
ಐಪಿಎಲ್​ನ 63ನೇ ಪಂದ್ಯವು ನಿನ್ನೆ ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಯೋಜನೆಗೊಂಡಿತ್ತು. ಆದರೆ ಮಳೆಯ ಕಾರಣ, ಪಂದ್ಯ ನಡೆಸಲು ಸಾಧ್ಯವಾಗಲಿಲ್ಲ. ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಗುಜರಾತ್ ಟೈಟನ್ಸ್​ ತಂಡಗಳು ಮುಖಾಮುಖಿ ಆಗಬೇಕಿತ್ತು. ಎರಡು ತಂಡಗಳಿಗೆ ತಲಾ ಒಂದೊಂದು ಅಂಕಗಳನ್ನು ನೀಡಿ ಪಂದ್ಯವನ್ನು ರದ್ದು ಮಾಡಲಾಯಿತು.
ಇದೇ ಪಂದ್ಯ ವೀಕ್ಷಣೆಗೆ ಬಂದ ಅಭಿಮಾನಿಯೊಬ್ಬ ಪಂದ್ಯದ ಬಾಲ್ ಕದಿಯಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಅಭಿಮಾನಿಯಾಗಿರುವ ಯುವಕ, ಸ್ಟಾರ್ ಬ್ಯಾಟ್ಸ್​ಮನ್ ರಿಂಕು ಸಿಂಗ್ ಜರ್ಸಿ ಹಾಕೊಂಡು ಸ್ಟೇಡಿಯಂಗೆ ಬಂದಿದ್ದ.
ಈ ವೇಳೆ ಯುವಕ ಮ್ಯಾಚ್​​ನಲ್ಲಿ ಬಳಸಲಾಗುವ ಬಾಲ್ ಕದಿಯಲು ಪ್ರಯತ್ನಿಸಿದ್ದಾನೆ. ಇದು ಭದ್ರತಾ ಸಿಬ್ಬಂದಿ ಗಮನಕ್ಕೆ ಬಂದಿದೆ. ಕೂಡಲೇ ವಿಚಾರಿಸಿದಾಗ ಬಚ್ಚಿಟ್ಟಿದ್ದ ಬಾಲ್ ನೀಡಿದ್ದಾನೆ. ನಂತರ ಅಧಿಕಾರಿಗಳು ಆತನನ್ನು ಹಿಡಿದು ಎಳೆದಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್​​.. ಟೀಂ ಇಂಡಿಯಾಗೆ ಕ್ಯಾಪ್ಟನ್ ರೋಹಿತ್ ಶರ್ಮಾನೇ ಕಂಟಕ..!
A fan tried to steal the match ball, but got caught. 😂pic.twitter.com/99bmVET9tM
— Mufaddal Vohra (@mufaddal_vohra) May 14, 2024
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us